ನಂದೀಶ್ ಭದ್ರಾವತಿ ದಾವಣಗೆರೆ
ದಾವಣಗೆರೆ ಲೋಕಸಭೆ ಚುನಾವಣೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದ್ದು, ಏಪ್ರಿಲ್ 7 ರಂದು ನಡೆಯುವ ಮತದಾನಕ್ಕೆ ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗ ಕಸರತ್ತು ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲೆಯಾದ್ಯಂತ ಸಖಿ (ಪಿಂಕ್) ಬೂತ್ಗಳನ್ನು ತೆರೆಯಲಾಗಿದೆ. ಅದರಲ್ಲಿ ಪಿಡಿಒ ಅಂಬಿಕಾ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿರುವ ಸಖಿ ಮತಗಟ್ಟೇ ಚಿತ್ತಾಕರ್ಷಕದಿಂದ ಗಮನ ಸೆಳೆಯುತ್ತಿವೆ. ಇದಲ್ಲದೆ, ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಹಿಟ್ನಾಳ್ ತಿಳಿಸಿದ್ದಾರೆ.
‘ಈ ಮತಗಟ್ಟೆಗಳು ಬೇರೆ ಮತಗಟ್ಟೆಗಳಿಗಿಂತ ಭಿನ್ನವಾಗಿ ಸಿಂಗರಿಸಿದ್ದು, ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸಲಿವೆ. ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕ, ಕಾವಲು ಸಿಬ್ಬಂದಿ ವರೆಗೆ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲಿವೆ’.
ಸಖಿ ಮತಗಟ್ಟೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆ ಬರೆಯಲಾಗಿದೆ. ಈ ಕೇಂದ್ರಗಳು ಮತದಾರರ ಗಮನ ಸೆಳೆಯುವಂತಿವೆ.
ಏನು ವಿಶೇಷ
ಬೇತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 5 ಬೂತ್ ಗಳಿಗೂ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಶಾಮಿಯಾನದ ಕೆಳಗೆ ಫ್ಯಾನ್ ಹಾಗೂ ಮಡಿಕೆ ನೀರಿನ ವ್ಯವಸ್ಥೆ ವ್ಯವಸ್ಥೆ ಮಾಡಲಾಗಿದೆ…
ಮದುವೆ ಮನೆಯಂತೆ ಸಿಂಗಾರ
ಬೇತೂರು ಗ್ರಾಮ ಪಂಚಾಯತ್ ನ ಪಿ ಎಸ್ ನಂಬರ್ 23 ಸಖಿ ಮತಗಟ್ಟೆಯು ಮದುವೆ ಮನೆಯಂತೆ ಸಿದ್ದಗೊಂಡಿದ್ದು…100 ಪ್ರತಿಶತ ಮತದಾನ ವಾಗುವ ದೃಷ್ಟಿಯಿಂದ ಮತಗಟ್ಟೆ ಯನ್ನು ಅಲಂಕರಿಸಲಾಗಿದೆ.ತೀವ್ರ ಬೇಸಿಗೆಯ ಹಿನ್ನೆಲೆಯಲ್ಲಿ ಶಾಮಿಯಾನದ ನೆರಳು. ಸಾರ್ವಜನಿಕರ ಕ್ಯೂ ಗೂ ಸಹ ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಮಡಿಕೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ…. ಜನರು ತಂಪಿನ ವಾತಾವರಣ ಪಡೆಯಲೆಂದು ಹುಲ್ಲು ಹಾಸಿಗೆಯನ್ನು ಸಿದ್ದಪಡಿಸಲಾಗಿದೆ…. ಒಟ್ಟಾರೆ ಬೇಸಿಗೆ ಎಂದು ಮೂಗು ಮುರಿಯುವ ಜನ ಈ ಮತಗಟ್ಟೆಗೆ ಬಂದು ತಂಪಿನ ವಾತಾವರಣ ಅನುಭವಿಸಿ ಮತದಾನ ಮಾಡಬಹುದಾಗಿದೆ.
ಜಿಲ್ಲಾಧಿಕಾರಿ ವೆಂಕಟೇಶ್ ಹಾಗೂ ಸಿಇಒ ಸುರೇಶ್ ಹಿಟ್ನಾಳ್ ನೇತೃತ್ವದಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಶೇ 100 ರಷ್ಟು ಮತದಾನವಾಗಬೇಕೆಂಬುದೇ ನಮ್ಮ ಗುರಿ. ಹಾಗಾಗಿ ಇಷ್ಟೊಂದು ವ್ಯವಸ್ಥೆ ಮಾಡಲಾಗಿದೆ.
–ಅಂಬಿಕಾ, ಎಲೆಬೇತೂರು ಪಿಡಿಒ