ದಾವಣಗೆರೆ : ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನಿಧನಕ್ಕೆ ಹೋಟೆಲ್ ಉದ್ಯಮಿ, ಕಾಂಗ್ರೆಸ್ ನಾಯಕ ಅಣಬೇರು ರಾಜಣ್ಣ ಸಂತಾಪ ಸೂಚಿಸಿದ್ದಾರೆ.
ನಮ್ಮ ದೇಶ ನಿರ್ಮಿಸಿದ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು’ ಎಂದು ಉಲ್ಲೇಖಿಸಿದ್ದಾರೆ. “ಭಾರತದ 13ನೇ ಪ್ರಧಾನ ಮಂತ್ರಿಯಾಗಿ ಸತತ ಎರಡು ಅವಧಿಗೆ ಅವರ ಅತ್ಯಂತ ಯಶಸ್ವಿ ಅಧಿಕಾರಾವಧಿಯು ಇತಿಹಾಸದಲ್ಲಿ ಉಳಿಯುತ್ತದೆ” ಎಂದಿದ್ದಾರೆ. ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಭಾರತ ಇಂದು ತನ್ನ ಅತ್ಯುತ್ತಮ ನಾಯಕರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಭಾರತದ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ ಮತ್ತು ಸಮಗ್ರತೆ, ನಮ್ರತೆಯ ಸಂಕೇತವಾದ ಡಾ.ಮನಮೋಹನ್ ಸಿಂಗ್ ಅವರು ಭರವಸೆ, ಪ್ರಗತಿಯ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ” . ಅವರ ಈ ಪೋಸ್ಟ್, ಸಿಂಗ್ ಅವರ ಆರ್ಥಿಕ ಬೆಳವಣಿಗೆಯ ಪರಂಪರೆ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಒತ್ತಿಹೇಳಿದೆ ಎಂದು ದುಃಖದಿಂದ ನುಡಿದಿದ್ದಾರೆ.
1991ರಲ್ಲಿ ಭಾರತದ ಆರ್ಥಿಕತೆಯಲ್ಲಿ ಘೋರ ಬಿಕ್ಕಟ್ಟಿನ ಸಮಯದಲ್ಲಿ, ಆರ್ಥಿಕ ಸಚಿವನಾಗಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಮಯದಲ್ಲಿ ಅವರು ಆರ್ಥಿಕ ಉದಾರೀಕರಣದ ಮೂಲಕ ದೇಶವನ್ನು ಬದಲಿಸಿದರು. ವಿದೇಶಿ ಬಂಡವಾಳದ ಆಕರ್ಷಣೆ, ಬಿಲ್ಲು ಮಾರುಕಟ್ಟೆ ಸುಧಾರಣೆ, ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ಸಡಿಲಿಕೆ ನೀಡುವ ಮೂಲಕ ಅವರು ದೇಶವನ್ನು ಆರ್ಥಿಕ ಪ್ರಗತಿಪಥಕ್ಕೆ ಕೊಂಡೊಯ್ದರು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.