ಬೆಂಗಳೂರು.
ರಾಜ್ಯದಲ್ಲಿ ಇತ್ತೀಚೆಗೆ ಸೈಬರ್ ಅಪರಾಧದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 20,875 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇದರಿಂದ 2,047 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಈ ಪ್ರಕರಣಗಳ ಪೈಕಿ ರಾಜಧಾನಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ನಡೆದಿವೆ ಎಂದು ಬಾಣಸವಾಡಿ ಪೊಲಿಸ್ ಠಾಣೆ ಎಸಿಪಿ ಉಮಾಶಂಕರ್ ಕಳವಳ ವ್ಯಕ್ತಪಡಿಸಿದರು.
ಕಲ್ಯಾಣನಗರದ ಟ್ರೆöÊಲೈಫ್ ಆಸ್ಪತ್ರೆಯಲ್ಲಿ ಸೈಬರ್ ಅಪರಾಧ ಕುರಿತು ಜಾಗೃತಿ ಮೂಡಿಸುವ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನವೆಂಬರ್ 2024 ರವರೆಗೆ 16,357 ಸೈಬರ್ ಪ್ರಕರಣಗಳು ದಾಖಲಾಗಿವೆ. ಸೈಬರ್ ದಂಧೆಕೋರರು ಹೆಚ್ಚಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾರಂಭಿಸಿದ್ದಾರೆ.
ವಂಚಕರು ಬಳಸುವ ಇತ್ತೀಚಿನ ತಂತ್ರಗಳ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇಂತಹ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೊದಲ ಹೆಜ್ಜೆಯಾಗಿರುತ್ತದೆ. ಹಣಕಾಸು ವ್ಯವಹಾರದ ವೆಬ್‌ಸೈಟ್‌ಗಳು ಮತ್ತು ವೇದಿಕೆಗಳಲ್ಲಿ ಮಾತ್ರ ಸೈಬರ್ ಅಪರಾಧ ನಡೆಯುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಸೈಬರ್ ಮೋಸಗಾರರು ಟ್ರೆಡಿಂಗ್ ಆಪ್‌ಗಳಲ್ಲಿ ವಧುವರರ ಸಂಪರ್ಕದ ಸೈಟ್‌ಗಳಲ್ಲಿ, ವಯಸ್ಕರ ಸೈಟ್‌ಗಳಲ್ಲಿ ಮತ್ತು ಹನಿಟ್ರಾö್ಯಪ್ ಆ್ಯಪ್‌ಗಳಲ್ಲಿ ಕೂಡ ವಂಚನೆ ನಡೆಸುತಿದ್ದಾರೆ ಎಂದರು.
ಬೆಂಗಳೂರು ಪೂರ್ವ ಸೈಬರ್ ಪೊಲೀಸ್ ಠಾಣೆಯ ಎಸಿಪಿ ಲಕ್ಷ್ಮೀಕಾಂತ್ ಮಾತನಾಡಿ, ಸೈಬರ್ ಅಪರಾಧಗಳನ್ನು ನಿಭಾಯಿಸಲು ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ನಾವು ಬದ್ಧತೆ ಹೊಂದಿದ್ದೇವೆ. ಆದರೆ ಈ ಹೋರಾಟದಲ್ಲಿ ಸಾರ್ವಜನಿಕರ ಸಹಕಾರ ಮತ್ತು ಜಾಗೃತಿ ಅಷ್ಟೇ ಸಮಾನವಾದ ಪ್ರಾಮುಖ್ಯತೆ ಹೊಂದಿರುತ್ತದೆ. ಅನುಮಾನಾಸ್ಪದ ಇಮೇಲ್‌ಗಳು ಮತ್ತು ಲಿಂಕ್‌ಗಳ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ವಾಸ್ತವ ಯುಆರ್‌ಎಲ್‌ಅನ್ನು ಪರೀಕ್ಷಿಸಿ ನಂತರ ಕ್ಲಿಕ್ ಮಾಡುವುದನ್ನು ಶಿಫಾರಸ್ಸು ಮಾಡಲಾಗುತ್ತದೆ ಎಂದರು.
ಬಾಣಸವಾಡಿ ಪೊಲೀಸ್ ಸ್ಟೇಷನ್‌ನ ಇನ್‌ಸ್ಟೆಕ್ಟರ್ ಅರುಣ್ ಸೋಲಂಕಿ ಮಾತನಾಡಿದರು. ಆನ್‌ಲೈನ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳ ಕುರಿತು ಬಹಳ ಎಚ್ಚರಿಕೆಯಿಂದ ಇರಬೇಕು. ಯಾವುದೇ ವಯಕ್ತಿಕ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ ಎಂದರು.
ಇದೇ ವೇಳೆ ಬೆಂಗಳೂರು ಪೊಲೀಸ್‌ರನ್ನು ಶ್ಲಾಘಿಸಿದ ಟ್ರೆöÊಲೈಫ್ ಹಾಸ್ಪಿಟಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹಸ್ಥಾಪಕ ಡಾ. ಶಫೀಕ್ ಎ.ಎಂ ಅವರು ಮಾತನಾಡಿದರು. ಸಭಿಕರು ವಿವಿಧ ಪ್ರಶ್ನೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ಕೇಳಿದರು.
ಈ ಸಂದರ್ಭದಲ್ಲಿ ಬಾಣಸವಾಡಿ ಪಿಎಸ್‌ಐ ಅರುಣ್ ಸೋಲಂಕಿ ಸೇರಿದಂತೆ ಇತರರು ಇದ್ದರು