ದಾವಣಗೆರೆ : ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್​​ಗೆ ಮತ್ತೊಂದು ಬಿಗ್​ ಶಾಕ್ ಎದುರಾಗಿದೆ. ಇದ್ರ ಜೊತೆಗೆ ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಪರ ಪಾಸಿಟಿಲ್ ಅಲೆ ಸೃಷ್ಟಿಯಾಗ್ತಾಯಿದೆ. ಹಾಗಾದ್ರೆ ಯದುವೀರ್ ಒಡೆಯರ್​ಗೆ ಎದುರಾಗಿರೋ ಆ ಸಂಕಷ್ಟ ಏನು.? ಅಂದು ಪ್ರತಾಪ್ ಸಿಂಹ ಅವರು ಕೇಳಿದ್ದ ಪ್ರಶ್ನೆಗಳನ್ನೇ ಇಂದು ಜನ ಸಾಮಾನ್ಯರು ಕೇಳ್ತಾಯಿರೋದ್ಯಾಕೆ ಗೊತ್ತಾ?

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ. ಇದು ಸಿಎಂ ಸಿದ್ರಾಮಯ್ಯನವರ ತವರು ಕ್ಷೇತ್ರ. ಇಲ್ಲಿ ಈ ಸಲ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರನ್ನ ಗೆಲ್ಲಿಸ್ಲೇಬೇಕು ಅಂತೇಳಿ ಸಿಎಂ ಸಿದ್ರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಪಣತೊಟ್ಟಿದ್ದಾರೆ.. ಪರಿಸ್ಥಿತಿ ಹೀಗಿರೋವಾಗ್ಲೇ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್​​ ಅವರ ವಿರುದ್ಧ ಸ್ಥಳೀಯ ಒಕ್ಕಲಿಗ ಮತದಾರರು ತಿರುಗಿ ಬಿದ್ದಿದ್ದಾರೆ. ಮೈಸೂರು ಮಹಾರಾಜರು ಯಾಕೆ ಗೆಲ್ಲಬೇಕು. ಇದು ಪ್ರಜಾಪ್ರಭುತ್ವ.. ಓರ್ವ ಸಾಮಾನ್ಯ ವ್ಯಕ್ತಿಯನ್ನ ಗೆಲ್ಲಿಸಿ ಅವರ ಕೈಗೆ ಅಧಿಕಾರ ಕೊಡ್ತೀವಿ. ಅದರಲ್ಲೂ ಎಂ ಲಕ್ಷಣ್ ಅವರು ಒಕ್ಕಲಿಗ ಸಮುದಾಯದ ಮುಖಂಡ.. ಹೀಗಾಗಿ ನಮ್ಮ ಸಮುದಾಯದ ವ್ಯಕ್ತಿಗೆ ನಮ್ಮ ಮತ ಅಂತೇಳಿ ಈ ಕ್ಷೇತ್ರದ ಒಕ್ಕಲಿಗ ನಾಯಕರು ಘೋಷಿಸಿದ್ದಾರೆ. ಹೀಗಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್​​ಗೆ ಆತಂಕ ಎದುರಾಗಿದೆ.. ಇದ್ರ ಮಧ್ಯೆ ಇದೀಗ ಯದುವೀರ್ ಒಡೆಯರ್​​ಗೆ ಮತ್ತೊಂದು ಶಾಕ್ ಎದುರಾಗಿದೆ. ಯದುವೀರ್ ಒಡೆಯರ್ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಲಂಚ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಕುರಿತು ಕೆಪಿಸಿಸಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಹೌದು ವೀಕ್ಷಕರೇ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಶನಿವಾರ ಪತ್ರ ಬರೆದಿರೋ ಕೆಪಿಸಿಸಿ, ಯದುವೀರ್ ಒಡೆಯರ್ ಅವರು ಮಾದರಿ ನೀತಿ ಸಂಹಿತೆ ಅತಿಯಾಗಿ ಉಲ್ಲಂಘಿಸುವ ಕೆಲಸಗಳಲ್ಲಿ ತೊಡಗಿದ್ದಾರೆ. ಇದು ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಗೆ ತೀವ್ರ ಅಪಾಯ ಉಂಟುಮಾಡುತ್ತದೆ ಅಂತೇಳಿ ಆರೋಪಿಸಿದೆ. ಯದುವೀರ್ ಒಡೆಯರ್​​ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಅವರ ಬೆಂಬಲ ಮತ್ತು ಪ್ರಭಾವವನ್ನು ಬಳಸಿಕೊಳ್ಳುವ ಸ್ಪಷ್ಟ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಹಲವಾರು ಪ್ರಭಾವಿ ವ್ಯಕ್ತಿಗಳೊಂದಿಗೆ ಸಭೆಯನ್ನು ಆಯೋಜಿಸಿದ್ದಾರೆ. ರಹಸ್ಯವಾಗಿ ನಡೆಸಲಾದ ಈ ಸಭೆಯಲ್ಲಿ, ಯದುವೀರ್ ಒಡೆಯರ್ ಅವರು ವೈಯಕ್ತಿಕ ನೋಟ್‌ಬುಕ್‌ಗಳು, ಪೆನ್ನುಗಳು, ಚಾಕೊಲೇಟ್‌ಗಳು, ಸೀರೆಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಭೌತಿಕ ಪ್ರೇರಣೆಗಳನ್ನು ನೀಡುವ ಮೂಲಕ ಈ ಪ್ರಭಾವಿಗಳನ್ನು ಓಲೈಸಲು ತೀವ್ರ ಪ್ರಯತ್ನಗಳನ್ನು ಮಾಡಿದ್ದಾರೆ ಅಂತೇಳಿ ದೂರಿನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ, ಈ ಸಭೆಯ ಅತ್ಯಂತ ಆತಂಕಕಾರಿ ಅಂಶವೆಂದರೆ ಈ ಪ್ರಭಾವಿಗಳಿಗೆ ಅವರ ಬೆಂಬಲ ಮತ್ತು ಅವರ ಪರ ಪ್ರಚಾರ ನಡೆಸುವುದಕ್ಕಾಗಿಯೇ ಗಣನೀಯ ಪ್ರಮಾಣದ ಹಣವನ್ನು ವಿತರಣೆ ಮಾಡಲಾಗಿದೆ ಅಂತಾನೂ ದೂರಿದಲ್ಲಿ ತಿಳಿಸಲಾಗಿದೆ. ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಹಣ ಹಂಚುವ ಈ ಖಂಡನೀಯ ಕ್ರಮವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೂಲಭೂತ ತತ್ವಗಳನ್ನು ಉಲ್ಲಂಘಿಸುತ್ತದೆ. ಇಷ್ಟೇ ಅಲ್ಲದೆ, 1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಘೋರ ಅಪರಾಧವಾಗಿದೆ ಎಂದು ಪತ್ರದಲ್ಲಿ KPCC ಆರೋಪಿಸಿದೆ. ಚುನಾವಣಾ ಪ್ರಕ್ರಿಯೆಯು ಮುಕ್ತ, ನ್ಯಾಯಸಮ್ಮತ ಮತ್ತು ಭ್ರಷ್ಟ ಆಚರಣೆಗಳಿಂದ ನಿಷ್ಕಳಂಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಚುನಾವಣಾ ಕಾನೂನುಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೊತೆಗೆ ಈ ವಿಷಯದ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ.

ಇನ್ನ ಈ ಹಿಂದೆ ಪ್ರತಾಪ್ ಸಿಂಹ ತಮಗೆ ಟಿಕೆಟ್ ಮಿಸ್ ಆಗುತ್ತೆ ಅನ್ನೋ ಆತಂಕದಲ್ಲಿ ಯದುವೀರ್ ಒಡೆಯರ್ ಅವರ ಬಗ್ಗೆ ಚುಚ್ಚು ಮಾತುಗಳನ್ನಾಡಿದ್ರು. ಅರಮನೆಯಲ್ಲಿ ಆರಾಮವಾಗಿರೋವಂತಾ ವ್ಯಕ್ತಿ ಜನ ನಾಯಕರಾಗಲು ಜನರ ಮಧ್ಯೆ ಬರಲು ಸಾಧ್ಯವೇ.? ಬಿಜೆಪಿ ಪಕ್ಷದ ಸಾಮಾನ್ಯ ಮುಖಂಡರಂತೆ ಪ್ರತಿಭಟನೆಗಳಲ್ಲಿ ಭಾಗಿಯಲು ಸಾಧ್ಯವಾಗುತ್ತಾ.? ಪಕ್ಷದ ಕಾರ್ಯಕ್ರಮಗಳು ಎಂದ ಮೇಲೆ ಒಂದು ಶಿಷ್ಟಾಚಾರ ಇರುತ್ತದೆ. ಅಧ್ಯಕ್ಷರು–ಉಪಾಧ್ಯಕ್ಷರು ವೇದಿಕೆ ಮೇಲೆ ಕುಳಿತರೆ ಇವರು ಕೆಳಗೆ ಕೂರಬೇಕಾಗುತ್ತದೆ. ರಾಜರು ಕೆಳಗೆ ಕೂರಲಿಕ್ಕೂ ಸಿದ್ಧರಿದ್ದಾರೆ. ಪಕ್ಷದ ನಾಯಕರು ಮೈಸೂರಿಗೆ ಬಂದಾಗ ಹೋಟೆಲ್‌ಗಳ ಮುಂದೆ ನಿಂತು ಹೂಗುಚ್ಛ ಹಿಡಿದು ಕಾಯಲು ಸಿದ್ಧರಾಗಿದ್ದಾರೆ. ಇದು ನಿಜಕ್ಕೂ ಖುಷಿ ಕೊಡುವ ಸಂಗತಿ’ ಅಂತೇಳಿ ಕೆಲ ವಾರಗಳ ಹಿಂದೆ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ರು. ಇದೀಗ ಜನ ಸಾಮಾನ್ಯರು ಕೂಡ ಇವೇ ಪ್ರಶ್ನಗಳನ್ನ ಚರ್ಚೆ ಮಾಡ್ತಿದ್ದಾರೆ.

ಇತ್ತ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಅವರು ಕೂಡ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಯದುವೀರ್ ಒಡೆಯರ್ ಗೆದ್ರೆ ಫುಟ್​ಪಾತ್​ನಲ್ಲಿ ಜನಸಾಮಾನ್ಯರಿಗೆ ಸಿಕ್ತಾರಾ.? ಅವರನ್ನ ನೋಡೋಕೆ ಜನ ಸಾಮಾನ್ಯರಿಗೆ ಅರಮನೆಯ ಒಳಗೆ ಪ್ರವೇಶ ಸಿಗುತ್ತಾ.? ಅರಮನೆಯ ಮುಂದೆ ಯಾವಾಗ್ಲೂ ಸೆಕ್ಯೂರಿಟಿ ಗಾರ್ಡ್​ಗಳು ಇರ್ತಾರೆ. ಹೀಗಾಗಿ ಯದುವೀರ್ ಒಡೆಯರ್ ಜನಪ್ರಿಯ ಜನ ನಾಯಕರಾಗಲು ಸಾಧ್ಯವೇ ಅಂತೇಳಿ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಅವರು ಪ್ರಶ್ನಿಸಿದ್ದಾರೆ.

ಹಾಗಾದ್ರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮತದಾರರು ಮೈಸೂರು ಮಹಾರಾಜ ಯದುವೀರ್ ಒಡೆಯರ್​ ಅವನ್ನ ಗೆಲ್ಲಿಸ್ತಾರಾ.? ಇಲ್ಲ., ಒಕ್ಕಲಿಗ ಮುಖಂಡ, ಕಾಂಗ್ರೆಸ್ ಅಭ್ಯರ್ಥಿ ಸಾಮಾನ್ಯರಲ್ಲೇ ಸಾಮಾನ್ಯ ಎಂ ಲಕ್ಷ್ಮಣ್ ಅವರನ್ನ ಗೆಲ್ಲಿಸ್ತಾರಾ

Share.
Leave A Reply

Exit mobile version