ದಾವಣಗೆರೆ : ಸ್ನೇಹ ಜೀವಿ, ಸರ್ವರಿಗೂ ಪ್ರೀತಿಪಾತ್ರರಾಗಿರುವ‌ ಯುವ ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ ಒಂದು ಕಾರ್ಯಕ್ರಮ ಯಶಸ್ವಿ ಮಾಡುವ ಶಕ್ತಿ ಇದೆ ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬಾಡದ ಆನಂದರಾಜು ತಿಳಿಸಿದರು.

ಹರಿಹರ ತಾಲ್ಲೂಕು ಫೆಬ್ರವರಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಗೆ ಸಂಚಾಲಕರಾಗಿ ಆಯ್ಕೆಯಾಗಿದ್ದು, ಈ ಜಾತ್ರೆ ಸಂಪೂರ್ಣ ಯಶಸ್ವಿಯಾಗಲಿದೆ ಎಂದರು. ದಾವಣಗೆರೆ ಜಿಲ್ಲೆಯಲ್ಲಿ ಯುವ ಜನತೆಗೆ ಮಾದರಿಯಾಗಿ ಉನ್ನತ ಸ್ಥಾನಕ್ಕೇರಿರುವ ಶ್ರೀನಿವಾಸ್‌ ದಾಸಕರಿಯಪ್ಪ ಸಂಘಟನೆಯ ಮುಂಚೂಣಿಯಲ್ಲಿರುವ ಯುವ ನಾಯಕ ಎಂದರು.

ಇವರ ಸಂಘಟನೆ ಚತುರತೆ ನೋಡಿ ಪರಮ ಪೂಜ್ಯರು ಹಾಗೂ ಸಮಾಜದ ಮುಖಂಡರು ವಾಲ್ಮೀಕಿ ಜಾತ್ರೆಗೆ ಸಂಚಾಲಕರನ್ನಾಗಿ ಮಾಡಿದ್ಧಾರೆ ಎಂದರು.ರಾಜ್ಯದಲ್ಲಿ ನಡೆಯುವ ಬಹುದೊಡ್ಡ ಕಾರ್ಯಕ್ರಮಗಳಲ್ಲಿ ವಾಲ್ಮೀಕಿ ಜಾತ್ರೆ ಕೂಡ ಒಂದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಲಕ್ಷಾಂತರ ಜನರು ಈ ಕಾರ್ಯಕ್ರಮ ಆಗಮಿಸುತ್ತಾರೆ. ಇಂಥ ಬಹುದೊಡ್ಡ ಜಾತ್ರೆಯ ಸಂಚಾಲಕರಾಗಿ ಆಯ್ಕೆಯಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.

ಸರ್ವ ಜನಾಂಗದವರಿಗೆ ಪ್ರೀತಿ ಪಾತ್ರರಾಗಿರುವ ಶ್ರೀನಿವಾಸ್‌ ದಾಸಕರಿಯಪ್ಪ ಅವರು ಅತೀ ಚಿಕ್ಕ ವಯಸ್ಸಲ್ಲಿಯೇ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಇನ್ನೂ ಹೆಚ್ಚಿನ ಉನ್ನತ ಸ್ಥಾನಕ್ಕೆ ಹೋಗಲಿ, ವಾಲ್ಮೀಕಿ ಜಾತ್ರೆ ಯಶಸ್ವಿಯಾಗಿ ಇವರ ಸೇವೆಗೆ ಜನಮನ್ನಣೆ ಸಿಗಲಿ ಎಂದು ಬಾಡದ ಆನಂದರಾಜು ಹಾರೈಸಿದರು.

ಒಂದು ಸಣ್ಣ ಕಾರ್ಯಕ್ರಮ ಮಾಡುವುದು ಅಷ್ಟು ಸುಲಭವಲ್ಲ, ಇದೀಗ ದೊಡ್ಡ ಸಮಾಜದ ಒಂದು ಜಾತ್ರೆಗೆ ಸಂಚಾಲಕರಾಗಿ ಆಯ್ಕೆಗೊಂಡಿರುವುದು ನಮಗೆಲ್ಲ ಹರ್ಷ ತಂದಿದೆ ಎಂದು ತಿಳಿಸಿದರು.

ಈ ವೇಳೆ ಸೌಹರ್ದ ಸಹಕಾರ ಬ್ಯಾಂಕಗಳ ಸಂಘದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಮಹಾಪೌರ ಎಸ್.ಟಿ. ವಿರೇಶ್ ರವರನ್ನ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದಾಗಿನಕಟ್ಟೆ ನಾಗರಾಜ್.ನಾಗರಾಜ್ ನಾಯ್ಕ್.ದಾಗಿನಕಟ್ಟೆ ರಂಗಸ್ವಾಮಿ. ಮಲ್ಲೇಶ್.ಬಸವರಾಜ್.ಕುಂದವಾಡ ಗಣೇಶ್ .ಮಾಸ್ಟಿ ನಾಗರಾಜ್ ಇನ್ನೂ ಮುಂತಾದವರಿದ್ದರು.

Share.
Leave A Reply

Exit mobile version