ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ್ ಬಾಬು ಎಸ್ ರವರಿಗೆ ಮೈಸೂರು ವಿಶ್ವವಿದ್ಯಾಲಯ ವು ಪಿಎಚ್ಡಿ ಪದವಿಯನ್ನು ನೀಡಿದೆ.
ವೆಂಕಟೇಶ್ ಬಾಬುರವರು ಮೈಸೂರು ವಿಶ್ವವಿದ್ಯಾನಿಲಯದ ಜೆಎಸ್ಎಸ್ ಸಂಶೋಧನಾ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ ಶಂಕ್ರಪ್ಪ ಎಸ್ ರವರ ಮಾರ್ಗದರ್ಶನದಲ್ಲಿ *ಪರ್ಫಾರ್ಮೆನ್ಸ್ ಇವ್ಯಾಲ್ಯೂಯೇಷನ್ ಆಫ್ ಡಿಜಿಟಲ್ ಪ್ರಿಂಟಿಂಗ್ ಅಂಡ್ ಪಬ್ಲಿಸಿಂಗ ಇಂಡಸ್ಟ್ರಿ ಇನ್ ಇಂಡಿಯಾ.* ಎಂಬ ವಿಷಯದ ಕುರಿತು ಮಹಾ ಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾಲಯವೂ ಇವರ ಮಹಾ ಪ್ರಬಂಧವನ್ನು ಅಂಗೀಕರಿಸಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಪಿ ಎಚ್ ಡಿ ಪದವಿಯನ್ನು ನೀಡಿದೆ. ವೆಂಕಟೇಶ್ ಬಾಬು ರವರು ದಾವಣಗೆರೆ ವಾಸಿ ದಿ.ಟಿ ಶಿವಾನಂದ್ ಸಿತಿಮನಿ ಹಾಗೂ ಶಾಂತಮ್ಮ ರವರ ಪುತ್ರರಾಗಿರುತ್ತಾರೆ.