Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ದಾವಣಗೆರೆ ವಿಶೇಷ»ತುರ್ತಾಗಿ ಬರ ಪರಿಹಾರ ಒದಗಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯ
ದಾವಣಗೆರೆ ವಿಶೇಷ

ತುರ್ತಾಗಿ ಬರ ಪರಿಹಾರ ಒದಗಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯ

davangerevijaya.comBy davangerevijaya.com21 May 2024No Comments2 Mins Read
Facebook WhatsApp Twitter
Share
WhatsApp Facebook Twitter Telegram

ದಾವಣಗೆರೆ.ಮೇ.20: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದು, ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ನಂತರ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.ಈ ವೇಳೆ ಸಂಘಟನೆಯ ಮಧು ತೊಗಲೇರಿ ಮಾತನಾಡಿ  ರಾಜ್ಯದ 223 ತಾಲೂಕುಗಳಲ್ಲಿ ಬರವಿದ್ದು ಜನ-ಜಾನುವಾರುಗಳಿಗೆ ನೀರು, ಮೇವುಗಾಗಿ ಹಾಹಾಕಾರ ಶುರುವಾಗಿದೆ. ಪತ್ರಿಕೆಗಳ ವರದಿಯ ಪ್ರಕಾರ 29 ಜಿಲ್ಲೆಗಳ 149 ತಾಲೂಕುಗಳ 1,920 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೆರೆಗಳಲ್ಲಿ ನೀರಿಲ್ಲ. ಜಿಲ್ಲಾಡಳಿತದಿಂದ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.ಮೇವಿನ ಲಭ್ಯತೆಯ ಕೊರತೆಯ ಜೊತೆಗೆ ವಿಪರೀತ ಬೆಲೆಯಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ಉದ್ಯೋಗವಿಲ್ಲದೆ ಊರೂರು ಅಲೆಯುವ, ಗುಳೆ ಹೋಗುವ ಪ್ರಮೇಯ ಬಂದಿದೆ. ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವುದರಲ್ಲಿ ಮತ್ತು ಹಣ ಬಿಡುಗಡೆ ಮಾಡುವುದರಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ.ಒಂದು ಕಡೆ, ನೀರು, ಮೇವಿನ ಸಮಸ್ಯೆಯಾದರೆ, ಇನ್ನೊಂದು ಕಡೆ ಕೊಳವೆ ಬಾವಿಗಳು ಬತ್ತಿಹೋಗಿರುವುದರಿಂದ ರೈತರು ತಮ್ಮ ತೋಟದ ಬೆಳೆಗಳನ್ನು ಕಾಪಾಡಿಕೊಳ್ಳುವುದರಲ್ಲಿ ಹೈರಾಣಾಗಿದ್ದಾರೆ.

ಬರಗಾಲದಲ್ಲಿರುವಾಗ ಮೈಕ್ರೊ ಫೈನಾನ್ಸ್ನವರು ಸಾಲ ವಸೂಲಾತಿಗೆ ನಿಂತಿರುವುದು ಅತ್ಯಂತ ಖಂಡನೀಯ.ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ಹಣದ ಬಿಡುಗಡೆ ವಿಷಯದಲ್ಲಿ ಪರಸ್ಪರ ದೋಷಾರೋಪ ಮಾಡಿಕೊಂಡು ಚುನಾವಣಾ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಇವರ ಮಧ್ಯೆ ರೈತರು ಸತ್ತು ಸುಣ್ಣವಾಗುತ್ತಿದ್ದಾರೆ. ಇದಂತೂ ಅಕ್ಷಮ್ಯ ಮತ್ತು ಅಮಾನವೀಯ. ಬರದಿಂದ ಮುಖ್ಯವಾಗಿ ರೈತ ಸಮುದಾಯವನ್ನು ಕಾಪಾಡಲು ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿದರು.ಪ್ರಮುಖವಾಗಿ ರೈತರ ಎಲ್ಲಾ ಬೆಳೆಗಳ ನಷ್ಟಕ್ಕೆ ಸಮರ್ಪಕವಾದ ಪರಿಹಾರವನ್ನು ನೀಡಬೇಕು.ಎಲ್ಲಾ ಬ್ಯಾಂಕುಗಳಲ್ಲಿರುವ ರೈತರ ಸಾಲಗಳನ್ನು ಮನ್ನಾ ಮಾಡಬೇಕು. ಸಮರೋಪಾದಿಯಲ್ಲಿ ಎಲ್ಲಾ ರೀತಿಯ ಬರ ಪರಿಹಾರದ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು.ನರೆಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಮತ್ತು ಕೃಷಿ ಕಾರ್ಮಿಕರಿಗೆ ಉದ್ಯೋಗವನ್ನು ಖಚಿತಪಡಿಸಬೇಕು.ಕೊಳವೆ ಬಾವಿಯ ವೆಚ್ಚವನ್ನು ವಿಪರೀತವಾಗಿ ಏರಿಸಿರುವುದನ್ನು ತಡೆಯಬೇಕು. ಅಪಮಾನವಾಗುವ ರೀತಿಯಲ್ಲಿ ಸಾಲ ವಸೂಲಿ ಮಾಡುವ ಮೈಕ್ರೊ ಫೈನಾನ್ಸ್ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೂ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಖರೀದಿ ಮಾಡಿದ ಬೆಳೆಯ ಹಣವನ್ನು ಕೂಡಲೇ ಪಾವತಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.ಈ ವೇಳೆ ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದರು.

ಒತ್ತಾಯ ದಾವಣಗೆರೆ ನೀರು ರೈತರು
Share. WhatsApp Facebook Twitter Telegram
davangerevijaya.com
  • Website

Related Posts

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ಕೋಟಿ ಸಂಪಾದನೆ ಮಾಡಿದ್ರು ಮೇಟಿ ವಿದ್ಯೆಗೆ ಜ್ಞಾನಬೇಕು : ಮಧುಸೂದನ್ ಭದ್ರಾವತಿ

18 May 2025

ನಗು ಮುಖದಿಂದ ಎಲ್ಲರನ್ನೂ ಗೆಲ್ಲುವ ಡಿಎಆರ್ ಡಿಎಸ್ಪಿ ಪ್ರಕಾಶ್

17 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,630 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,198 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,065 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,580 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

By davangerevijaya.com20 May 20250

*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🕉️ದ್ವಾದಶ ರಾಶಿಗಳ ದಿನ ಭವಿಷ್ಯ#ತಾರೀಕು#20/05/2025 ಮಂಗಳವಾರ🕉️* *01,✨ಮೇಷ ರಾಶಿ✨* 📖,ಆರ್ಥಿಕ…

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025

ಅಪಘಾತದಲ್ಲಿ ಕುಟುಂಬವನ್ನೇ ಕಳೆದುಕೊಂಡ ಕ್ರಷರ್ ಮಾಲೀಕ : ನರಳಿ, ನರಳಿ ಮೃತಪಟ್ಟ ಒಂದು ವರ್ಷ, ನಾಲ್ಕುವರ್ಷದ ಮಗು…ಹಾಗಾದ್ರೆ ಆ ಘಟನೆ ಹೇಗಾಯ್ತು?

18 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,630 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,198 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,065 Views

Subscribe to Updates

Get the latest creative news from SmartMag about art & design.

Recent Posts
  • ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?
  • ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ
  • ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?
  • ಅಪಘಾತದಲ್ಲಿ ಕುಟುಂಬವನ್ನೇ ಕಳೆದುಕೊಂಡ ಕ್ರಷರ್ ಮಾಲೀಕ : ನರಳಿ, ನರಳಿ ಮೃತಪಟ್ಟ ಒಂದು ವರ್ಷ, ನಾಲ್ಕುವರ್ಷದ ಮಗು…ಹಾಗಾದ್ರೆ ಆ ಘಟನೆ ಹೇಗಾಯ್ತು?
  • ಭಾನುವಾರದ ನಿಮ್ಮ ರಾಶಿ ಭವಿಷ್ಯ ಏನಿದೆ ತಪ್ಪದೇ ನೋಡಿ?
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.