


ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಉಮಾಪ್ರಶಾಂತ್ ಗೆ ಸೇರಿ ಮೂವರಿಗೆ DG & IGP ಕಮೆಂಡೇಶನ್ ಡಿಸ್ಕ್ 2025-26 ಸಾಲಿನ ಪದಕ ಪಡೆದಿದ್ದಾರೆ.
ದಾವಣಗೆರೆ : ಜಿಲ್ಲೆಯ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಾದ ಎಸ್ಪಿ ಉಮಾಪ್ರಶಾಂತ್ ಸೇರಿದಂತೆ ಇನ್ನಿಬ್ಬರಿಗೆ ಈ ಪದಕ ಲಭಿಸಿದೆ.

ಸೇವೆಯಲ್ಲಿ ಗಣನೀಯವಾಗಿ ಕೆಲಸ ಮಾಡಿದವರಿಗೆ ಈ ಪದಕ ನೀಡಲಾಗುತ್ತಿದೆ. ಮಹಿಳಾ ಎಸ್ಪಿಯಾಗಿ ಜಿಲ್ಲೆಯಲ್ಲಿ ಕೈಗೊಂಡ ಕಾರ್ಯಗಳಿಂದ ಈ ಪದಕ ನೀಡಲಾಗಿದೆ.

ಈ ವರ್ಷದಿಂದ ಆರಂಭಗೊಂಡಿರುವ ಈ ಪದಕವನ್ನ ದಾವಣಗೆರೆ ಜಿಲ್ಲೆಯಲ್ಲಿ ಮೂವರು ಪಡೆದಿರುವುದು ಗಮನಾರ್ಹವಾಗಿದೆ