ದಾವಣಗೆರೆ ವಿಜಯ, ಭದ್ರಾವತಿ
ಇತ್ತೀಚೆಗಷ್ಟೇ ಅಪ್ಪನ ದಿನಾಚರಣೆಯನ್ನು ಎಲ್ಲ ಆಚರಿಸಿದ್ದೇವೆ, ಅಪ್ಪನ ನೆನಪುಗಳನ್ನು ಮೆಲುಕು ಹಾಕಿದ್ದೇವೆ. ಆದರೆ ಇಲ್ಲೊಂದು ಘಟನೆ ಮನಕಲುಕುವಂತಿದ್ದು, ಮಗನೇ ಅಪ್ಪನನ್ನು ಕೊಲೆ ಮಾಡಿದ್ದಾನೆ.
ಈ ಘಟನೆ ಭದ್ರಾವತಿ ತಾಲೂಕಿನ ಅರಬಿಳಚಿ ಗ್ರಾಮದಲ್ಲಿ ನಡೆದಿದ್ದು, ಅಮ್ಮ ಹಾಗೂ ಅಪ್ರಾಪ್ತ ಮಗನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಶುಕ್ರರಾಜ್ ಯಾನೆ ಶುಕ್ರ(50) ಕೊಲೆಯಾದವ. ಪತ್ನಿ ಶಿಲ್ಪ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದು, ಶುಕ್ರನ ಪತ್ನಿ ಶಿಲ್ಪರಿಗೆ ಕೆಲಸಕ್ಕೆ ಹೋಗದಂತೆ ಆಗಾಗ್ಗೆ ಬುದ್ದಿಹೇಳುತ್ತಿದ್ದರು. ಪತಿಯ ಮಾತನ್ನ ನಿರ್ಲಕ್ಷಿಸಿ ಶಿಲ್ಪ ಕೆಲಸಕ್ಕೆ ಹೋಗುವುದಾಗಿ ಹೇಳುತ್ತಿದ್ದರು. ಇದರಿಂದ ಇಬ್ಬರ ನಡುವೆ ಮನಸ್ಥಾಪ ಉಂಟಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಗಲಾಟೆ ನಿನ್ನೆ ಇಬ್ವರ ನಡುವೆ ಮತ್ತೆ ಕಾಣಿಸಿಕೊಂಡಿದೆ.
ಗಲಾಟೆಯಾಗುತ್ತಿದ್ದಾಗ ಶುಕ್ರರ ಪತ್ನಿ ಶಿಲ್ಪ ಅಪ್ರಾಪ್ತ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕರೆ ಮಾಡಿದ ತಕ್ಷಣವೇ ಸ್ಥಳಕ್ಕೆ ಬಂದ ಮಗ ತಂದೆ ಶುಕ್ರನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಅಪ್ರಾಪ್ತನನ್ನ ಹೊಳೆಹೊನ್ನೂರು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಮೃತ ಶುಕ್ರ ಜಮೀನಿನಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ. ಅಪ್ರಾಪ್ತ ಮಗ ಯಾವುದೇ ವಿದ್ಯಾಭ್ಯಾಸವೂ ಮಾಡುತ್ತಿರಲಿಲ್ಲ ಹಾಗೂ ಕೆಲಸಕ್ಕೂ ಹೋಗುತ್ತಿರಲಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ. 25 ವರ್ಷದ ಹಿಂದ ಶಿಲ್ಪ ಮತ್ತು ಶುಕ್ರ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಮದುವೆಯಾದ ದಂಪತಿಗಳಿಗೆ ಇಬ್ವರು ಮಕ್ಕಳಿದ್ದಾರೆ. ಮೂರು ವರ್ಷದ ಹಿಂದೆ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯ ವಿರುದ್ಧ ಶುಕ್ರನಿಗೆ ಬೇಸರವಿದ್ದು ಆಕ್ಷೇಪಿಸಿದ್ದ ಈ ಕಾರಣದಿಂದಲೇ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ಮೃತನ ಸಹೋದರ ಕುಬೇರಪ್ಪ ಮಾಹಿತಿ ನೀಡಿದ್ದಾರೆ.