ಸಮಾಜ ಸೇವೆಯೇ ಉಸಿರು ಎನ್ನುವ ಶ್ರೀನಿವಾಸ ದಾಸಕರಿಯಪ್ಪಗೆ ಸಮಾಜ ಸೇವಾ ವಿಭೂಷಣ ಪ್ರಶಸ್ತಿ ಪ್ರದಾನ
ನಂದೀಶ್ ಭದ್ರಾವತಿ ದಾವಣಗೆರೆ
ಅದು ಕೊರೊನಾ ಸಮಯ ಯಾರು ಹೊರಗೆ ಬಾರದೆ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ, ಅತ್ತ ಕೆಲಸವೂ ಇಲ್ಲ, ಇತ್ತ ಹಣವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ತನ್ನ ಪ್ರಾಣ ಲೆಕ್ಕಿಸದೇ ಬಡವರಿಗೆ, ದೀನದಲಿತರಿಗೆ ಕೈಲಾದಷ್ಟು ಸಹಾಯ ಮಾಡಿದವರು ಅನೇಕರು ಇದ್ದು, ಇದರಲ್ಲಿ
ಬಿಜೆಪಿಯ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಕೂಡ ಒಬ್ಬರು.
ಇದು ಅವರು ಕೈಗೊಂಡ ಸಮಾಜಸೇವೆಯಲ್ಲಿ ಕೇವಲ ಸ್ಯಾಂಪಲ್ ಅಷ್ಟೇ. ಸಹಾಯ ಮಾಡಿದ್ದು, ಇನ್ನೊಬ್ಬರಿಗೆ ಗೊತ್ತಾಗುವುದು, ಪ್ರಚಾರ ಪಡೆಯುವುದು ಇವರ ಗುಣವಲ್ಲ. ಇವರು ಸಹಾಯ ಮಾಡಿರುವುದು. ಅವರ ಆಪ್ತರಿಗೂ ಗೊತ್ತಾಗೋಲ್ಲ. ಸಹಾಯ ಅಂತ ಕೇಳಿಬಂದವರಿಗೆ ಯಾವತ್ತು ಕೂಡ ಬರಿಗೈಯಲ್ಲಿ ಶ್ರೀನಿವಾಸ ದಾಸಕರಿಯಪ್ಪ ಕಳಿಸಿಲ್ಲ.
ಇಂತಹ ಸಮಾಜ ಸೇವಕರಿಗೆ ದಾವಣಗೆರೆ ರೇಣುಕಾ ಮಂದಿರದಲ್ಲಿ ಶ್ರೀಮದ್ ವೀರಶೈವ ಸದ್ಬೋಧನಾ ಸಂಸ್ಥೆ ಬಾಳೆಹೊನ್ನೂರು ಹಾಗೂ ದಾವಣಗೆರೆ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಜು.30ರಿಂದ ಆಗಸ್ಟ್ 3 ರವರೆಗೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಅವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ, ಜನಜಾಗೃತಿ, ಧರ್ಮ ಸಮಾವೇಶ ಕಾರ್ಯಕ್ರಮದಲ್ಲಿ ಆ.2 ರಂದು ಬಿಜೆಪಿಯ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಸಮಾಜ ಸೇವಾ ವಿಭೂಷಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಈ ಪ್ರಶಸ್ತಿಗೂ ದಾಸಕರಿಯಪ್ಪರಿಗೂ ಅವಿನಾಭಾವ ಸಂಬಂದವಿದ್ದು, ಪ್ರಶಸ್ತಿ ಮೌಲ್ಯ ಹೆಚ್ಚಿಸುವಂತೆ ಮಾಡಿದೆ.
ಶ್ರೀನಿವಾಸ ದಾಸಕರಿಯಪ್ಪ ಮಾತು ಕಡಿಮೆ, ಕೆಲಸ ಜಾಸ್ತಿ ಮಾಡುತ್ತಾರೆ.
ಶ್ರೀನಿವಾಸ ದಾಸಕರಿಯಪ್ಪರಿಗೆ ತನ್ನದೇ ಆದ ಯುವಪಡೆ ಇದ್ದು, ಶತ್ರುಗಳಿಗಿಂತ ಸ್ನೇಹಿತರೇ ಹೆಚ್ಚಿದ್ದಾರೆ. ಅಜಾತ ಶತ್ರು ಇವರಾಗಿದ್ದು, ಕೈಲಾಗದವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಮುಂದಿರುವ ಶ್ರೀನಿವಾಸ ದಾಸಕರಿಯಪ್ಪ ವಿನೋಭನಗರ ಗಣಪತಿ, ಚೌಡೇಶ್ವರಿ ದೇವಸ್ಥಾನದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ಇಡೀ ಏರಿಯಾದಲ್ಲಿ ಹಬ್ಬವನ್ನು ಕಳೆಗಟ್ಟುವಂತೆ ಮಾಡುತ್ತಾರೆ.
ನೀವು ಏನೇ ಕೆಲಸ ಮಾಡಿ, ಅದನ್ನು ಹೃದಯದಿಂದ ಮಾಡಿ, ಆಗ ಯಾವ ಕೆಲಸವಾದರೂ ಸಹ ನಿಮಗೆ ಒಲಿಯುತ್ತದೆ. ಇಲ್ಲವೆಂದರೆ ಯಶಸ್ಸು ಎಂಬುದು ಕೈಗೆಟುಕದ ನಕ್ಷತ್ರವಾಗುತ್ತದೆ ಅಷ್ಟೆ ಎಂಬುದು ದಾಸಕರಿಯಪ್ಪರ ಅಂಭೋಣ.
ಸದ್ಯ ದಾವಣಗೆರೆಯಲ್ಲಿ ಶ್ರೀನಿವಾಸ ದಾಸಕರಿಯಪ್ಪ ಪ್ರಸಿದ್ಧ ವ್ಯಕ್ತಿಯಾಗಿದ್ದು, ಅವರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ದಾವಣಗೆರೆಯಲ್ಲಿ ಈ ಹೆಸರನ್ನು ಕೇಳದ ವ್ಯಕ್ತಿಯೇ ಇಲ್ಲ. ಸಾಕಷ್ಟು ಉದ್ಯಮಿಗಳಿಗೆ ಇವರ ವ್ಯಕ್ತಿತ್ವ ಮತ್ತು ಸಾಧನೆ ಸ್ಫೂರ್ತಿಯಾಗಿದೆ. ಬಡತನ ಕುಟುಂಬದಿಂದ ಬಂದಿದ್ದರೂ ಅವರು ಎಂದಿಗೂ ಅಧಿಕಾರ ಅಥವಾ ಹಣದ ಹಿಂದೆ ಬಿದ್ದವರಲ್ಲ.
ತನ್ನ ಉದ್ಯಮವನ್ನು ದೊಡ್ಡದಾಗಿ ಬೆಳೆಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ದಾಸಕರಿಯಪ್ಪರಾಗಿದ್ದು,
ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಒಟ್ಟಾರೆ ಈ ಪ್ರಶಸ್ತಿ ನೀಡುತ್ತಿರುವುದು ಶ್ರೀನಿವಾಸ ದಾಸಕರಿಯಪ್ಪ ಅಭಿಮಾನಿಗಳಿಗಳಿಗೆ ಸಂತಸ ತಂದಿದ್ದು, ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಲಿ ಎಂದು ಆಶಿಸಿದ್ದಾರೆ.