ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಚುನಾವಣಾ ಕದನ ಜೋರಾಗಿದ್ದು, ನಾಮ ಪತ್ರ ಸಲ್ಲಿಸಿದ 35 ಅಭ್ಯರ್ಥಿಗಳಲ್ಲಿ ಏಳು ಜನ ನಾಮಪತ್ರ ವಾಪಸ್ ಪಡೆದು, 13 ಸ್ಥಾನಕ್ಕೆ 28 ಜನ ಸ್ಪರ್ಧೆ ಮಾಡಿದ್ದಾರೆ.
ನಾನಾ ಸಹಕಾರ ಸಂಘಗಳ ಒಬ್ಬರಿಗೆ ಮಾತ್ರ ಮತ ಹಾಕುವ ಹಕ್ಕಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ನೇರಾಹಣಾಹಣಿ ಇದೆ. ಅದರಲ್ಲೂ ಶಾಸಕ ಬೇಳೂರು ಗೋಪಾ ಲಕೃಷ್ಣ ,ಜನಪ್ರತಿನಿಧಿಯಾಗಿದ್ದರೂ, ಸ್ಪರ್ಧೆ ಮಾಡಿರುವುದು ಕುತುಹೂಲ
ಯಾರ್ಯಾರು ನಾಮಪತ್ರ ವಾಪಾಸ್ ಪಡೆದವರು?
ಎಂ.ಶ್ರೀಕಾಂತ್, ಆರ್.ವಿಜಯ ಕುಮಾರ್, ಹೆಚ್.ಮಲ್ಲಿಕ್, ಹೆಚ್.ಎನ್.ವಿಜಯ ಕುಮಾರ್, ಟಿ.ಎಸ್.ದುದ್ದೇಶ್, ಹೆಚ್.ಜಿ.ಮಲ್ಲಯ್ಯ ಮತ್ತು ಆರ್.ಸಿ.ನಾಯ್ಕ್ ನಾಮಪತ್ರ ಹಿಂಪಡೆದಿದ್ದಾರೆ.
ಯಾರೆಲ್ಲ ಯಾವ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ?
ಶಿವಮೊಗ್ಗ :ಕೆ.ಪಿ.ದುಗ್ಗಪ್ಪಗೌಡ, ಶಿವನಂಜಪ್ಪ
ಭದ್ರಾವತಿ : ಹೆಚ್.ಎಲ್.ಷಡಾಕ್ಷರಿ, ಸಿ.ಹನುಮಂತು
ತೀರ್ಥಹಳ್ಳಿ : ಬಸವಾನಿ ವಿಜಯದೇವ್, ಶಿವಕುಮಾರ್
ಸಾಗರ : ಗೋಪಾಲಕೃಷ್ಣ ಬೇಳೂರು, ರತ್ನಾಕರ್ ಹೊನಗೋಡು
ಶಿಕಾರಿಪುರ, : ಚಂದ್ರಶೇಖರ ಗೌಡ, ಅಗಡಿ ಅಶೋಕ್
ಸೊರಬ : ಕೆ.ಪಿ.ರುದ್ರಗೌಡ, ನೀಲಕಂಠಗೌಡ, ಶಿವಮೂರ್ತಿಗೌಡ ಸ್ಪರ್ಧೆ ಮಾಡಿದ್ದಾರೆ.
ಅವಿರೋಧ ಆಯ್ಕೆ
ಹೊಸನಗರ ತಾಲೂಕಿನಲ್ಲಿ ನಾಮಪತ್ರ ಪುರಸ್ಕೃತವಾದ ಹಿನ್ನೆಲೆ ಎಂ.ಎಂ.ಪರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಲ್ವರು ಸ್ಪರ್ಧೆ
ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ಸಂಸ್ಕರಣ ಸಂಘಗಳ ವತಿಯಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ನಾಲ್ವರು ಸ್ಪರ್ಧೆಯಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ : ಆರ್.ಎಂ.ಮಂಜುನಾಥ ಗೌಡ, ವಿರೂಪಾಕ್ಷಪ್ಪ
ಸಾಗರ ಉಪ ವಿಭಾಗ :ಜಿ.ಎನ್.ಸುಧೀರ್, ಬಿ.ಡಿ.ಭೂಕಾಂತ್ ಇನ್ನು ಪಟ್ಟಣ ಸಹಕಾರ ಸಂಘಗಳು ಮತ್ತು ವ್ಯವಸಾಯೇತರ ಸಹಕಾರ ಸಂಘಗಳ ವತಿಯಿಂದ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ
ಮರಿಯಪ್ಪ, ಎಸ್.ಪಿ.ದಿನೇಶ್
ಸಾಗರ ಉಪ ವಿಭಾಗ
ರವೀಂದ್ರ, ಬಸವರಾಜ,ಇನ್ನಿತರೆ ಸಹಕಾರ ಸಂಘಗಳ ವತಿಯಿಂದ ಇಬ್ಬರು ಸದಸ್ಯರ ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ
ಜಗದೀಶ್ವರ್, ಜೆ.ಪಿ.ಯೋಗೇಶ್, ಹೆಚ್.ಬಿ.ದಿನೇಶ್ ಬುಳ್ಳಾಪುರ, ಡಿ.ಆನಂದ್, ಮಹಾಲಿಂಗಯ್ಯ ಶಾಸ್ತ್ರಿ
ಸಾಗರ ಉಪ ವಿಭಾಗ
ಟಿ.ಶಿವಶಂಕರಪ್ಪ, ಎನ್.ಡಿ.ಹರೀಶ್ ಸ್ಪರ್ಧೆ ಮಾಡಿದ್ದು, ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ 10 ನಿರ್ದೇಶಕರು, ಶಿವಮೊಗ್ಗ ಹಾಲು ಒಕ್ಕೂಟದ ಹಾಲಿ 6 ನಿರ್ದೇಶಕರು ಕಣದಲ್ಲಿದ್ದಾರೆ.
ನೇರ ಪೈಪೋಟಿ
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಮೂರು ಕ್ಷೇತ್ರದ ಹೊರತಾಗಿ ಉಳಿದೆಲ್ಲ ಕ್ಷೇತ್ರಗಳಲ್ಲಿ ನೇರ ಪೈಪೋಟಿ ಏರ್ಪಟ್ಟಿದೆ. ಶಿವಮೊಗ್ಗ ಉಪ ವಿಭಾಗ ಇತರೆ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಶಿಮುಲ್ ಮಾಜಿ ಅಧ್ಯಕ್ಷ ಜಗದೀಶ್ವರ್ (ಕಾಂಗ್ರೆಸ್) ಮತ್ತು ಮಹಾಲಿಂಗಯ್ಯ ಶಾಸ್ತ್ರಿ (ರಾಷ್ಟ್ರ ಭಕ್ತರ ಬಳಗ) ಎದುರಿಗೆ ಮೈತ್ರಿಕೂಟದಿಂದ ಹಾಲಿ ನಿರ್ದೇಶಕ ಜೆ.ಪಿ. ಯೋಗೇಶ್, ಶಿಮುಲ್ ಹಾಲಿ ನಿರ್ದೇಶಕ ಡಿ.ಆನಂದ್ (ಇಬ್ಬರೂ ಜೆಡಿಎಸ್), ಶಿಮುಲ್‌ನ ಮತ್ತೊಬ್ಬ ಹಾಲಿ ನಿರ್ದೇಶಕ ಎಚ್.ಬಿ. ದಿನೇಶ್ ಬುಳ್ಳಾಪುರ (ಬಿಜೆಪಿ) ಕಣದಲ್ಲಿ ಉಳಿದಿರುವುದು ಕುತೂಹಲ ಮೂಡಿಸಿದೆ.
ಭದ್ರಾವತಿ ತಾಲೂಕು ಪ್ಯಾಕ್ಸ್‌ನಲ್ಲಿ ಕಾಂಗ್ರೆಸ್ ಮುಖಂಡರಾದ ಹಾಲಿ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ ಮತ್ತು ಸಿ. ಹನುಮಂತು ಕಣದಲ್ಲಿದ್ದರೆ, ಸೊರಬ ತಾಲೂಕು ಪ್ಯಾಕ್ಸ್‌ನಲ್ಲಿ ಮೂವರು ಸ್ಪರ್ಧೆಯಲ್ಲಿದ್ದಾರೆ. ಉಳಿದ ಹತ್ತು ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸೇರಿದಂತೆ ಹಾಲಿ 10 ನಿರ್ದೇಶಕರು, ಶಿಮುಲ್‌ನ ಆರು ಹಾಲಿ ನಿರ್ದೇಶಕರು ಕಣದಲ್ಲಿದ್ದಾರೆ. ಒಟ್ಟಾರೆ ಚುನಾವಣಾ ಕಣ ರಂಗೇರಿದ್ದು, ಜೂ.28 ಕ್ಕೆ ಫಲಿತಾಂಶ ಹೊರ ಬೀಳಲಿದೆ.