ನಂದೀಶ್ ಭದ್ರಾವತಿ ದಾವಣಗೆರೆ
ದಾವಣಗೆರೆ ಆಡಳಿತ ಮಂಡಳಿ ಪ್ರೆಸ್ ಕ್ಲಬ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಘಟಾನುಘಟಿಗಳು ಅಖಾಡದಲ್ಲಿದ್ದಾರೆ.
ಜು.16 ಕ್ಕೆ ಚುನಾವಣೆ ಫಿಕ್ಸ್ ಆಗಿದ್ದು, ಜೂ.30 ಕ್ಕೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಇನ್ನೂ ಹಲವಾರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸುವರು.
ಸದ್ಯ ಹಿರಿಯಪತ್ರಕರ್ತ ಬಿ.ಎನ್.ಮಲ್ಲೇಶ್, ವರದರಾಜ್, ಈ ಪವನ್, ಎಚ್.ಎಂ.ಪಿ ಕುಮಾರ್, ಕನ್ನಡಿಗ ರವಿ ಹೀಗೆ ಹಲವಾರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲರೂ ಸಹ ಮತಗಳನ್ನು ತಮ್ಮ ಕಡೆ ಎಳೆದುಕೊಳ್ಳಲು ಸಭೆ ಸೇರುತ್ತಿದ್ದಾರೆ.
ಇಷ್ಟು ದಿನ ಇಂದು ಏನು ಸುದ್ದಿ ಇದೆ ಎಂದು ಕೇಳುತ್ತಿದ್ದ ಪತ್ರಕರ್ತರು, ಹೇಗಿದೆ ಚುನಾವಣೆ, ಯಾರು ಸ್ಪರ್ಧೆ ಮಾಡಿದ್ದಾರೆ. ಯಾರು ಯಾವ ಕಡೆ ಹೋಗಿದ್ದಾರೆ, ಹೀಗೆ ಹತ್ತಾರು ಪ್ರಶ್ನೆಗಳ ಚರ್ಚೆ ನಡೆಯುತ್ತಿದೆ. ಪ್ರೆಸ್ ಕ್ಲಬ್ ಬಳಿ ತಮ್ಮ ತಮ್ಮ ಗುಂಪಿನವರ ನಡುವೆ ಚರ್ಚೆ ನಡೆಯುತ್ತಿದೆ. ಇಲ್ಲಿ ಸದ್ಯ ಸುದ್ದಿಕ್ಕಿಂತ ಎಲೆಕ್ಷನ್ ಬಗ್ಗೆ ಚರ್ಚೆ ಸುದೀರ್ಘ ಚರ್ಚೆಯಾಗುತ್ತಿದೆ.
ಚುನಾವಣೆಗಿಂತ ಅವಿರೋಧ ಆಯ್ಕೆಯೇ ಹೆಚ್ಚಿದ್ದರೂ, ಈ ಬಾರಿ ನಡೆಯುತ್ತಿದೆ ಚುನಾವಣೆ
ದಾವಣಗೆರೆ ಪ್ರೆಸ್ ಕ್ಲಬ್ ಗೆ ಹಲವಾರು ಬಾರಿ ಅಧ್ಯಕ್ಷೀಯ ಚುನಾವಣೆಗೆ ಅವಿರೋಧ ಆಯ್ಕೆ ನಡೆದಿದೆ. ಆದರೆ ಈ ಬಾರಿ ಚುನಾವಣೆ ನಡೆಯುತ್ತಿದೆ. ಸಾಮಾನ್ಯ ಸಭೆಯಲ್ಲೂ ಚುನಾವಣೆ ನಡೆಯಬೇಕೆಂಬ ತೀರ್ಮಾನವಾದ ಕಾರಣ ಎಲೆಕ್ಷನ್ ಜೋರಾಗಿದೆ.
ಎರಡು ಬಣಗಳ ನಡುವೆ ನೇರಾಹಣಾಹಣಿ
ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ ಹಾಗೂ ಬಿ.ಎನ್.ಮಲ್ಲೇಶ್ ಬಣದ ನಡುವೆ ನೇರಾಹಣಾಹಣಿ ಇದೆ. ಇವರಿಬ್ಬರು ಕೂಡ ಅಧ್ಯಕ್ಷರಾಗಿದ್ದು, ಬಸವರಾಜ್ ದೊಡ್ಮನಿ ಪರ ಹಿರಿಯ ಪತ್ರಕರ್ತ ವರದರಾಜ್ ನಿಂತಿದ್ದರೇ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಸ್ವತಃ ಸ್ಪರ್ಧೆಗೆ ಇಳಿದಿದ್ದಾರೆ. ಈ ನಡುವೆ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಲೋಕಲ್ ಪತ್ರಕರ್ತ ಕನ್ನಡಿಗ ರವಿ, ಹಿರಿಯ ಪತ್ರಕರ್ತ ಎಚ್ಎಂಪಿ ಕುಮಾರ್, ತಾರಾನಾಥ್ ಕೂಡ ಸ್ಪರ್ಧೆಗೆ ಇಳಿದಿದ್ದಾರೆ. ಈ ನಡುವೆ ನೇರ ಮಾತುಗಾರ ಪವನ್ ಸ್ಪರ್ಧೆಗೆ ಇಳಿದಿದ್ದಾರೆ. ಇನ್ನಷ್ಟು ಪತ್ರಕರ್ತರು ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.
ನೇರ ಮಾತುಗಾರ ಪವನ್ ಆಲಿಯಾಸ್ ದಾದಾ ಚುನಾವಣೆಗೆ ಸ್ಪರ್ಧೆ
ಪತ್ರಕರ್ತ, ನೇರ ಮಾತುಗಾರ ಪವನ್ ಆಲಿಯಾಸ್ ದಾದ ಚುನಾವಣೆಗೆ ನಿಂತಿದ್ದಾರೆ. ಅವರದ್ದೇ ಆದ ತಂಡ ಕಟ್ಟಿ, ಅವರ ಆಲಿಪ್ತ ಕೂಟದಲ್ಲಿ ಪ್ರತಿ ದಿನ ಚರ್ಚೆ ಮಾಡುತ್ತಿದ್ದಾರೆ. ಅಲ್ಲದೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ಸ್ಪರ್ಧೆಗಾಗಿ ಮೂರು ಸಾವಿರ ಠೇವಣಿ ಹಣ ಇಡಬೇಕೆಂಬ ನಿಯಮವನ್ನು ವಿರೋಧಿಸಿದ್ದಾರೆ. ಅಲ್ಲದೇ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇಲ್ಲಿಯೂ ಕೂಡ ಬಿಜೆಪಿ-ಕಾಂಗ್ರೆಸ್ ಬೆಂಬಲಿತರಿದ್ದಾರೆ
ದಾವಣಗೆರೆ ಪ್ರೆಸ್ ಕ್ಲಬ್ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್ ಬೆಂಬಲಿತರು ಸ್ಪರ್ಧೆ ಮಾಡಿದ್ದಾರೆ. ನೇರವಾಗಿ ಪಕ್ಷದ ಹೆಸರು ಹೇಳದೇ ಹೋದರೂ, ಒಳಳೊಗೆ ಇಬ್ಬರು ಕೂಡ ಪಕ್ಷದ ನಾಯಕರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ರಾತ್ರಿ ಕೂಟ, ಎಲೆಕ್ಷನ್ ಚರ್ಚೆ
ಎಲ್ಲ ಚುನಾವಣೆಯಲ್ಲಿಯೂ ನಡೆಯುವಂತೆ ದಾವಣಗೆರೆ ಪ್ರೆಸ್ ಕ್ಲಬ್ ನ ಅಭ್ಯರ್ಥಿಗಳು ಸಹ ಪಾನಗೋಷ್ಠಿ ಏರ್ಪಡಿಸುತ್ತಿದ್ದಾರೆ. ಅಲ್ಲಿ ಅಭ್ಯರ್ಥಿ ಗೆಲುವಿಗಿಂತ ಎದುರಾಳಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ನಡುವೆ ಮತದಾರ ಎಲ್ಲರ ಬಳಿ ಚೆನ್ನಾಗಿರಬೇಕೆಂದು ಪ್ರತಿಯೊಬ್ಬರ ಪಾನಗೋಷ್ಠಿಗೆ ಹೋಗುತ್ತಿದ್ದಾರೆ. ಅಲ್ಲಿ ಸದೀರ್ಘ ಚರ್ಚೆ ನಡೆಯುತ್ತಿದೆ.
ಪ್ರತಿಷ್ಠೆಗಾಗಿ ಸ್ಪರ್ಧೆ
ಕೇವಲ ಪ್ರತಿಷ್ಠೆಗಾಗಿ ಮಾತ್ರ ಚುನಾವಣೆ ನಡೆಯುತ್ತಿದೆ. ಇಲ್ಲಿ ಯಾರು ಅಧ್ಯಕ್ಷರಾಗುತ್ತಾರೆಯೋ ಅವರನ್ನು ಇಡೀ ದಾವಣಗೆರೆ ಗುರುತಿಸುತ್ತದೆ. ಪ್ರಮುಖ ರಾಜಕಾರಣಿಗಳ ಸಾಂಗ್ಯ ಬೆಳೆಯುತ್ತದೆ. ಅಲ್ಲದೇ ಹೆಚ್ಚು ಜನಸಂಪರ್ಕವಾಗುತ್ತದೆ. ಜತೆಗೆ ಬೇರೆ ರೀತಿಯ ಉಪಯೋಗವಾಗಲಿದೆ. ಆದ್ದರಿಂದ ಪ್ರೆಸ್ ಕ್ಲಬ್ ಚುನಾವಣೆ ಜೋರಾಗಿದೆ.
ಪ್ರತ್ಯೇಕ ವಾಟ್ಸ್ ಗ್ರೂಪ್
ಪ್ರೆಸ್ ಕ್ಲಬ್ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ, ಬೆಂಬಲಿಗರು ಪ್ರತ್ಯೇಕ ವಾಟ್ಸ್ ಅಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಅದರಲ್ಲಿ ತಮ್ಮ ಬೆಂಬಲಿಗರನ್ನು ಸೇರಿಸಿಕೊಂಡು ಚರ್ಚೆ ಮಾಡುತ್ತಿದ್ದಾರೆ. ಅಲ್ಲದೇ ತಮಗೆ ಮತ ಹಾಕುವಂತೆ ಮನವೊಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನು ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.
ಇಡೀ ಜಿಲ್ಲೆಯ ಪತ್ರಕರ್ತರಿಗೆ ಕುತೂಹೂಲ
ಚುನಾವಣೆ ಅಂದ್ರೆ ಸಾಕು ಕುತುಹೂಲ ಇದ್ದೇ ಇರುತ್ತೇ, ಹಾಗೆಯೇ ಪ್ರೆಸ್ ಕ್ಲಬ್ ಚುನಾವಣೆ ಬಗ್ಗೆ ಜಿಲ್ಲೆಯ ಇಡೀಪತ್ರಕರ್ತರಿಗೆ ಕುತೂಹೂಲವಿದೆ. ಅಲ್ಲದೇ ಪ್ರತಿ ದಿನ ಆಗುವ ಅಪ್ಡೇಟ್ ಬಗ್ಗೆ ಪೋನ್ ಮಾಡಿ ಕುತುಹೂಲದಿಂದ ಕೇಳುತ್ತಿದ್ದಾರೆ. ಒಟ್ಟಾರೆ ಪ್ರೆಸ್ ಕ್ಲಬ್ ಚುನಾವಣೆ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದ್ದು, ಅಭಿ ಫಿಚ್ಚರ್ ಬಾಕಿ ಹೈ….