
ದಾವಣಗೆರೆ (ಮಾಯಕೊಂಡ ) : ಕರೋನ ಸಂದರ್ಭದಲ್ಲಿ ಶುದ್ಧವಾದ ಗಾಳಿ ಸಿಗದೇ ಅದೆಷ್ಟು ಜನರು ಪ್ರಾಣ ಹಾನಿ ಮಾಡಿಕೊಂಡಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟುಗಳನ್ನು ಪೋಷಿಸಿ ಉತ್ತಮ ಪರಿಸರ ಕಲ್ಪಿಸುಕೊಳ್ಳಬೇಕಾಗಿದೆ ಎಂದು ರಾಮಗೊಂಡನಹಳ್ಳಿ ಆರೋಗ್ಯ ಮತ್ತು ಪ್ರಾಥಮಿಕ ಕೇಂದ್ರದ ವೈದ್ಯಧಿಕಾರಿ ಡಾ. ಮಂಜುನಾಥ್ ಅವರು ತಿಳಿಸಿದರು.
ತಾಲೂಕಿನ ಮಾಯಕೊಂಡ ಹೋಬಳಿಯ ರಾಮಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಮಾತೃಶ್ರೀ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಪರಿಸರ ದಿನಾಚರಣೆ ಹಾಗೂ ಸಸಿಗಳ ನಡುವೆ ಕಾರ್ಯಕ್ರಮವನ್ನು ಆಯೋಜಿಸಿದ ಕಾರ್ಯಕ್ರಮವನ್ನು ಸಸಿಗಳನ್ನು ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಸೇವೆಗಳಲ್ಲಿ ಸಾಕಷ್ಟು ಸಮಸ್ಯೆಗಳು ಕಾರ್ಯನಿರ್ವಹಿಸುತ್ತಿದ್ದು ಸರ್ಕಾರದ ಒಂದು ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿದೆ ಇಂತಹ ಸಂಸ್ಥೆಗಳಿಗೆ ಸರ್ಕಾರದಿಂದ ಸೌಲಭ್ಯಗಳು ಬೇಕಾಗಿದೆ ಎಂದು ತಿಳಿಸಿದರು.


ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಅಂತಹ ದೌರ್ಜನ್ಯಗಳನ್ನು ತಡೆಗಟ್ಟುವ ಅರಿವು ಕಾರ್ಯಕ್ರಮ ಮಾಡಬೇಕಾಗಿದೆ ಎಂದು ತಿಳಿಸಿದರು.
ಮಾತೃಶ್ರೀ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎ.ಎಲ್ ಕಿರಣ್ ಕುಮಾರ್ ಮಾತನಾಡಿ ಹಣ ಇದ್ದವನು ಶ್ರೀಮಂತ ಅಲ್ಲ ಆರೋಗ್ಯ ಇದ್ದವನು ಶ್ರೀಮಂತ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಅವಂದು ನಿಟ್ಟಿನಲ್ಲಿ ಪರಿಸರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ಪರಿಸರವನ್ನು ನಾವು ಅಭಿವೃದ್ದಿ ಮಾಡಿದರೆ ಮುಂದಿನ ಪೀಳಿಗೆಗೆ ನಾವು ಉತ್ತಮ ಪರಿಸರವನ್ನು ನಾವು ಕೊಡುಗೆಯಾಗಿ ನೀಡಬಹುದು ಒಂದು ಮರ ಕಡಿದರೆ ಎರಡು ಗಿಡಗಳನ್ನು ನೀಡಬೇಕು ಎನ್ನುವ ನಿಯಮವನ್ನು ಅನುಸರಿಸಿದರೆ ಮುಂದೊಂದು ದಿನ ಪರಿಸರ ಅಭಿವೃದ್ಧಿಯಾಗುವುದು ಖಂಡಿತ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶಮಲಿಂಗಪ್ಪ, ಉಪಾಧ್ಯಕ್ಷ ಶೋಭಾ,
ಆಶಾ ಕಾರ್ಯಕರ್ತೆ ವನಜಾಕ್ಷಿ, ಶಿಕ್ಷಕರಾದ ವನಿತಾ, ವೇದಾವತಿ, ಹೆಲ್ತ್ ಇನ್ಸ್ಪೆಕ್ಟರ್ ಕೊಟ್ರಯ್ಯ, ಸಂಸ್ಥೆಯ ಉಪಾಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಯೋಗೇಶ್, ಸದಸ್ಯರಾದ ಪ್ರದೀಪ, ಲಕ್ಷ್ಮಿ.ಪಿ. ಆನಂದ್. ಡಿ, ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.