ಭದ್ರಾವತಿ: ನಗರದ ಡಿ.ಸಿ.ಮಾಯಣ್ಣ ಅಭಿಮಾನಿಗಳ ಸಂಘದ ವತಿಯಿಂದ
ಕಾರ್ಮಿಕ ಹಿರಿಯ ಮುಖಂಡ ಡಿ.ಸಿ. ಮಾಯಣ್ಣ ರವರ ಜನ್ಮ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಸಂಚಾಲಕ ಬಿ.ಎನ್.ರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಮ್ರೆಡ್ ಡಿ.ಸಿ.ಮಾಯಣ್ಣ ಅವರ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ರವರು ಉದ್ಘಾಟಿಸಲಿದ್ದಾರೆ.
ಶಾಸಕ ಬಿ.ಕೆ.ಸಂಗಮೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ ಉಪನ್ಯಾಸಕ ನೀಡಲಿದ್ದು, ರಾಜ್ಯ ರೈತ ಸಂಘದ ಮುಖಂಡರಾದ ಕೆ.ಟಿ. ಗಂಗಾಧರ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್ ಕರುಣಾಮೂರ್ತಿ, ದಲಿತ ಮುಖಂಡ ರಾದ ವಿಜಯಮ್ಮ ಎನ್ ಗಿರಿಯಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಚಂದ್ರಶೇಖರಯ್ಯ, ಸಂಘದ ಅಧ್ಯಕ್ಷ ಸೀತಾರಾಂ ಭಾಗವಹಿಸಲಿದ್ದಾರೆ ಎಂದರು.
ಸಂಘದ ಅಧ್ಯಕ್ಷ ವಿ.ಐ.ಎಸ್.ಎಲ್ ಸೀತಾರಾಂ, ವಿ.ಐ.ಎಸ್.ಎಲ್ ನಾರಾಯಣ್, ಎಂಪಿಎಂ ಬಸವರಾಜಯ್ಯ, ಚನ್ನೇಗೌಡ ಅವರು ಮಾತನಾಡಿ, ಕಾಮ್ರೆಡ್ ಡಿ ಸಿ ಮಾಯಣ್ಣ ಅವರು ವಿ ಐ ಎಸ್ ಎಲ್ ಮತ್ತು ಎಂ.ಪಿ.ಎಂ ಕಾರ್ಖಾನೆಗಳಲ್ಲಿ ಕಾರ್ಮಿಕರ ಬೆನ್ನೆಲುಬಾಗಿ ನಿರಂತರ ಹೋರಾಟಗಳನ್ನು ನಡೆಸುತ್ತ ಬಂದಿದ್ದು ಕೂಲಿ ಕಾರ್ಮಿಕರ, ರೈತರ ಮತ್ತು ಸಾರ್ವಜನಿಕರ ಪರವಾಗಿ ಪ್ರಾಮಾಣಿಕ ಹೋರಾಟಗಳನ್ನು ನಡೆಸುತ್ತ ಬಡವರ ಪರ ಧ್ವನಿಯಾಗಿದ್ದಾರೆ ಎಂದು ತಿಳಿಸಿದರು.
ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಯ್ಯಮಾತನಾಡಿ, ಕಾಮ್ರೆಡ್ ಡಿಸಿ ಮಾಯಣ್ಣ ಅವರು ನಡೆದು ಬಂದ ದಾರಿಯ ಕುರಿತು ಸಂಘದ ಎಲ್ಲರ ಸಲಹೆಯೊಂದಿಗೆ ಪುಸ್ತಕ ಬಿಡುಗಡೆ ಮಾಡುವ ಯೋಜನೆ ರೂಪಿಸುತ್ತೇವೆ ಎಂದರು.
ಕಾಮ್ರೆಡ್ ಡಿಸಿ ಮಾಯಣ್ಣ ಅಭಿಮಾನಿಗಳ ಸಂಘದ ಗೌರವ ಅಧ್ಯಕ್ಷರಾಗಿ ಪ್ರೊ. ಎಮ್. ಚಂದ್ರಶೇಖರಯ್ಯ, ಗೌರವ ಸಲಹೆಗಾರರಾಗಿ ಕಾರ್ಮಿಕ ಮುಖಂಡ ಟಿ ಜಿ ಬಸವರಾಜಯ್ಯ, ಎಸ್. ಆಂಜನೇಯ, ಅಧ್ಯಕ್ಷರಾಗಿ ವಿ.ಐ.ಎಸ್.ಎಲ್ ಸೀತಾರಾಂ, ಕಾರ್ಯಾಧ್ಯಕ್ಷರಾಗಿ ಬ್ರಹ್ಮಲಿಂಗಯ್ಯ, ಗವಿಸಿದ್ದಯ್ಯ, ಪೀರ್ ಷರೀಫ್, ಸಿದ್ದಲಿಂಗಯ್ಯ, ಉಪಾಧ್ಯಕ್ಷರಾಗಿ ನರಸಿಂಹಾಚಾರ್, ವರ್ಮಾ, ಸೆಲ್ವರಾಜ್, ನಾರಾಯಣ್ ವಿ.ಐ.ಎಸ್.ಎಲ್. ಅನಂತರಾಮು ಎಸ್. ರಾಜಪ್ಪ ವಿ.ಐ.ಎಸ್.ಎಲ್, ಪ್ರಧಾನ ಸಂಘಟನಾ ಸಂಚಾಲಕರಾಗಿ ಲಿಂಗೋಜಿರಾವ್, ಚನ್ನೇಗೌಡ, ಜಮೀರ್, ಕಾರ್ಯದರ್ಶಿಗಳಾಗಿ ಎಂ ಪಿ ಎಂ ಮುತ್ತು, ಜಯಪಾಲ್, ಶ್ರೀನಿವಾಸ್, ಪತ್ರೇಶ್, ಅಕ್ರಂಖಾನ್ ಮುಂತಾದವರು ಸಮಿತಿಯಲ್ಲಿ ಪದಾಧಿಕಾರಿ ಗಳನ್ನಾಗಿ ನೇಮಕ ಮಾಡಲಾಗಿದೆ ಎಂದ