ನ್ಯಾಮತಿ: ಲೋಕಸಭೆ ಚುನಾವಣೆ ಅಕ್ರಮ ತಡೆಗಾಗಿ ವಾಹನ ತಪಾಸಣೆ ಸಂದರ್ಭದಲ್ಲಿ ಸೂಕ್ತ ದಾಖಲೆ ಇಲ್ಲದೆ ಕೊಂಡ್ಯೊಯ್ಯುತ್ತಿದ್ದ 56.360ಗ್ರಾಂ(2.70.ಸಾವಿರ ಮೌಲ್ಯದ) ಬಂಗಾರದ ಆಭರಣಗಳು ಸೇರಿದಂತೆ 1.63.700 ನಗದನ್ನು ಶುಕ್ರವಾರ ರಾತ್ರಿ ನ್ಯಾಮತಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನಲೆ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ವಾಹನಗಳ ತಪಾಸಣೆ ವೇಳೆ ಪಟ್ಟಣದ ಚಿನ್ನದಂಗಡಿ ಮಾಲಿಕರೊಬ್ಬರಿಗೆ ಸೇರಿದ ವಾಹನ ತಪಾಸಣೆ ನಡೆಸಿದ ವೇಳೆ ಬೆಳಕಿಗೆ ಬಂದಿದೆ. ಸೂಕ್ತ ದಾಖಲೆ ಇಲ್ಲದ ಹಿನ್ನೆಲೆ ಆಭರಣ ಹಾಗೂ ನಗದನ್ನ ವಶಕ್ಕೆ ಪಡೆದು ಹೊನ್ನಾಳಿ ಉಪಖಜಾನೆ ಅಧಿಕಾರಿಗಳ ಸುಪರ್ಧಿಗೆಗೆ ನೀಡಿದ್ದಾರೆ.
ಸಿಕ್ಕ ಆಭರಣ
2ಗ್ರಾಂ ಲಾಕೇಟ್, 10ಗ್ರಾಂ ಚೈನು, 8ಗ್ರಾಂನ 3ಜೊತೆ ಓಲೆ, 3ಗ್ರಾಂ ಬ್ಯಾಕ್ ಚೈನು, 10ಗ್ರಾಂ ಗುಂಡು ಮತ್ತು ಮುಡಿ, 17.17 ಗ್ರಾಂ ಶುದ್ಧ ಬಂಗಾರ 3.75 ಗ್ರಾಂ ಬೇಬಿ ರಿಂಗ್, 2.44 ಗ್ರಾಂ ಪ್ಯಾನ್ಸಿ ಓಲೆ ಒಟ್ಟು 56.360ಗ್ರಾಂ. (ಬಂಗಾರದ ಮೌಲ್ಯ 2.70.000) ವಿವಿಧ ಆಭರಣಗಳಾಗಿವೆ.