ದಾಣಗೆರೆ: ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮರ್ಮಾಂಗ ಕತ್ತರಿಸಿಕೊಳ್ಳಲು ಮುಂದಾಗಿದ್ದು, ಪೊಲೀಸರು ತಡೆದಿದ್ದಾರೆ. ಅಲ್ಲದೇ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.
ಹೌದು…ಹರಿಹರ ಮೂಲದ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥನಾಗಿದ್ದು, ಭ್ರಮೆಯಲ್ಲಿ ಮುಳುಗಿದ್ದ. ಅಲ್ಲದೇ ತನಗೆ ಯಾರೋ ಒಡೆಯಲು ಬರುತ್ತಾರೆ ಎಂದು ತನ್ನ ಮರ್ಮಾಮಂಗವನ್ನು ಕತ್ತರಿಸಿಕೊಳ್ಳಲು ಮುಂದಾಗಿದ್ದ.ಅಲ್ಲದೇ ಮೊದಲು ಕತ್ತು ಕೊಯ್ದುಕೊಂಡ ಆತ ನಂತರ ಮರ್ಮಾಂಗವನ್ನು ಕತ್ತರಿಸಿಕೊಳ್ಳಲು ಮುಂದಾದ. ತಕ್ಷಣ ಮಾನಸಿಕ ಅಸ್ವಸ್ಥನನ್ನು ತಡೆದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಆಂಬುಲೆನ್ಸ್ ಮೂಲಕ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು.
ಈ ಹಿಂದೆ ಮೂರು ಬಾರಿ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಕೊಡಲಾಗಿತ್ತು. ಆದರೆ ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಅಲ್ಲದೇ ಶಾಮನೂರು ರಸ್ತೆ ಮೂಲಕ ಓಡಿ ಹೋಗಿ ಹೊಟ್ಟೆಗೆ ಚಾಕು ಇರಿದುಕೊಂಡು, ನಂತರ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ರಕ್ಷಿಸಿದ್ದು, ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಪೊಲೀಸರ ಕಣ್ಗಾವಲಿನಲ್ಲಿ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಸಂಬಂಧಿಕರು ಬಂದಿದ್ದು, ಮುಂದಿನ ಘಟನೆಗೆ ಕುಟುಂಬಸ್ಥರೇ ಹೊಣೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ