ನಂದೀಶ್ ಭದ್ರಾವತಿ, ದಾವಣಗೆರೆ
ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ 56 ಕಡೆ ದಾಳಿ ನಡೆಸಿದೆ.
ದಾವಣಗೆರೆ ಕೆಪಿಟಿಸಿಇಎಲ್ ಇಇ ಡಿ.ಹೆಚ್ ಉಮೇಶ್. ಎಎಇಇ ಪ್ರಭಾಕರ್ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಲಂಚಗುಳಿತನ, ಭ್ರಷ್ಟ ಆಡಳಿತ ನಡೆಸಿ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಗುಪ್ತಮಾಹಿತಿ, ದೂರುದಾರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಒಟ್ಟು ಎಂಟು ಕಡೆ ದಾವಣಗೆರೆ ಖಡಕ್ ಆಫೀಸರ್ ಲೋಕಾಯುಕ್ತ ಕೌಲಾಪುರೇ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಈ ಅಧಿಕಾರಿಗಳು ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಅಕ್ರಮ ಆಸ್ತಿ ಮಾಡಿದ್ದು, ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿದ್ದು, ಲೋಕಾಯುಕ್ತರು ಸರ್ಚ್ ಮಾಡುತ್ತಿದ್ದಾರೆ.
ಎಲ್ಲೆಲ್ಲಿ ದಾಳಿ
ಚಿಕ್ಕಮಗಳೂರು ಜಿಲ್ಲೆಯ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಚ್.ಉಮೇಶ್ ಮಾಡಿದ ಆಸ್ತಿಗಳ ಮೇಲೆ ಲೋಕಾಯುಕ್ತ ಪಿಐ ಪ್ರಭು ನೇತೃತ್ವದ ತಂಡ ದಾಳಿ ನಡೆಸಿದೆ. ದಾವಣಗೆರೆ ನಗರದ ಎರಡನೇ ಹಂತದ ಶಿವಕುಮಾರಸ್ವಾಮಿ ಬಡಾವಣೆ, ಹಂತದಲ್ಲಿರುವ ಮನೆ, ಇನ್ನು ಲೋಕಾಯುಕ್ತ ಪಿಐ ರಾಷ್ಟ್ರಪತಿ ಆವರಗೆರೆಯಲ್ಲಿರುವ ಹೊಸ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಪಿಐ ಲೋಕಾಯುಕ್ತ ಎನ್.ಎಚ್.ಆಂಜನೇಯ ಚಿಕ್ಕಮಗಳೂರಿನ ಟಿಎಲ್ ಹಾಗೂ ಎಸ್ಎಸ್ ವಿಭಾಗ (ಕೆಪಿಟಿಸಿಎಲ್) ಮೇಲೆ ದಾಳಿ, ಹಾವೇರಿ ಲೋಕಾಯುಕ್ತ ಪಿಐ ಮುಸ್ತಾಕ್ ಅಹಮ್ಮದ್ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗವಿರಂಗಾಪುರದಲ್ಲಿರುವ ಮನೆ, ಬಳ್ಳಾರಿ ಲೋಕಾಯುಕ್ತ ಪಿಐ ಸಂಗಮೇಶ್ ದಾವಣಗೆರೆ ನಗರದಲ್ಲಿರುವ ಕೆಐಎಡಿಬಿ ಉಗ್ರಾಣದ ಮೇಲೆ ದಾಳಿ ನಡೆಸಿದ್ದಾರೆ.
ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಅಧಿಕಾರಿ ಎಇಇ ಪ್ರಭಾಕರ್ ಗೂ ಶಾಕ್ ನೀಡಿದ ಲೋಕಾಯುಕ್ತ ಸಾಕಷ್ಟು ಕಡೆ ದಾಳಿ ನಡೆಸಿದೆ. ದಾವಣಗೆರೆ ಡಿಎಸ್ಪಿ ಕಲಾವತಿ ಗದಗ ಪಿಐ ಪುರುಷತ್ತೋಮ ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ 13 ಮೇನ್ ನಲ್ಲಿರುವ ವಾಸದ ಮನೆ, ಹಾವೇರಿ ಡಿಎಸ್ಪಿ ಬಿ.ಪಿ.ಚಂದ್ರಶೇಖರ್ ದಾವಣಗೆರೆ ನಗರದ ತರಳಬಾಳು ಬಡಾವಣೆಯಲ್ಲಿರುವ ಮಾವನ ಮನೆ ಬಳ್ಳಾರಿ ಲೋಕಾಯುಕ್ತ ಮಹಮ್ಮದ್ ರಫೀಕ್ ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ 56 ಕಡೆಗಳಲ್ಲಿ ವಿವಿಧ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
11 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೋಲಾರದ ತಹಶೀಲ್ದಾರ್ ವಿಜಣ್ಣ, ಹಾಸನದಲ್ಲಿ ಗ್ರೇಡ್-1 ಕಾರ್ಯದರ್ಶಿ ಜಗದೀಶ್ ಮೇಲೆಯೂ ದಾಳಿ ನಡೆದಿದೆ.