ಶಿವಮೊಗ್ಗ
ಗಾಂಜಾ ಹಾಗೂ ನಶಾ ಪದಾರ್ಥಗಳ ಅನಧಿಕೃತ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವ್ಯಾಪಾರ & ವಾಣಿಜ್ಯ ಪ್ರಕೊಷ್ಠ ವತಿಯಿಂದ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಗಾಂಜಾ ಹಾಗೂ ಇನ್ನಿತರ ಮಾದಕ ಪದಾರ್ಥಗಳು ಯಥೇಚ್ಛವಾಗಿ ಯಾವ ಹೆಗ್ಗಿಲ್ಲದೆ ಮಾರಾಟವಾಗುತ್ತಿದೆ. ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲಿ ಗಾಂಜಾವನ್ನು ಹೊಲಗಳಲ್ಲಿ ಬೆಳೆದು ಮಾರಾಟ ಮಾಡಲಾಗುತ್ತಿದೆ ಇದು ಆತಂಕ ವಿಷಯ ಎಂದು ಮನವಿದಾರರು ತಿಳಿಸಿದರು.
ಅಲ್ಲದೇ ಮಾದಕ ವ್ಯಸನದಿಂದ ಯುವ ಜನಾಂಗ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಲವರು ಹುಚ್ಛರಾಗಿದ್ದಾರೆ. ಮಕ್ಕಳ ಈ ದಾರಿ ತಪ್ಪುವಿಕೆಯಿಂದ ಪೋಷಕರು ಆತಂಕದಲ್ಲಿದ್ದಾರೆ. ಮಾದಕ ವ್ಯಸನಗಳಿಂದ ಕೊಲೆ ಸುಲಿಗೆ ದರೋಡೆಯಂತಹ ಘಟನೆಗಳು ಕೂಡ ನಡೆಯುತ್ತಿದೆ ಎಂದು ದೂರಿದರು.
ಆದ್ದರಿಂದ ತಕ್ಷಣವೇ ಈ ಮಾದಕ ಪದಾರ್ಥಗಳ ಮಾರಾಟವನ್ನು ತಡೆಯಬೇಕು. ಅಲ್ಲದೇ ಗಾಂಜಾ ಬೆಳೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ರಾಜ್ಯ ಪ್ರಕೋಷ್ಠ ಸಂಯೋಜಕ ಎಸ್.ದತ್ತಾತ್ರಿ, ರಾಜ್ಯ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ಸಂಚಾಲಕರಾದ ಭವಾನಿ ರಾವ್ ಮೋರೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಸಿ ಹೆಚ್, ಜಿಲ್ಲಾ ಕಾರ್ಯದರ್ಶಿಗಳಾದ ಜಗದೀಶ್ ಎನ್ ಕೆ, ಶ್ರೀಮತಿ ಸುಮಲತಾ ಭೂಪಲಂ,ಜಿಲ್ಲಾ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ಅಧ್ಯಕ್ಷರಾದ ರಾಕೇಶ್ ಗೌಡ ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಹರೀಶ್ ನಾಯಕ,ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದರ್ಶನ್ ಆರ್ ವಿ, ನಗರ ಯುವ ಮೋರ್ಚಾ ಅಧ್ಯಕ್ಷರಾದ ರಾಹುಲ್ ಬಿದರೆ, ಹಾಗೂ ಜಿಲ್ಲಾ ವಿವಿಧ ಪ್ರಕೋಷ್ಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು…