ದಾವಣಗೆರೆ : ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಪದ್ದತಿಯು ಎಷ್ಟರಮಟ್ಟಿಗೆ ಹಳ್ಳ ಹಿಡಿಯುತ್ತಿದೆ ಎಂದರೆ ಪಿಯುಸಿ , ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಯು ಕೇವಲ ಮಾರ್ಕ್ಸ್ ಕಾರ್ಡ್ ಆಧಾರಿತ ವಾಗಿವೆ ಹೊರತು ವಿದ್ಯಾರ್ಥಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಕೌಶಲ್ಯಗಳು ನಶಿಸಿ ಹೋಗುತ್ತಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವುದಕ್ಕಿಂತ ಉದ್ಯೋಗ ಸಂಸ್ಥೆಗಳು ಕೇಳುವ ವಿಶೇಷ ಕೌಶಲ್ಯ ಗಳಿಗೂ ಅಜಗಜಾಂತರ ಅಂತರ ಸೃಷ್ಟಿಯಾಗಿದೆ.

ಜೊತೆಗೆ ಕೆಲ ರಾಜಕೀಯ ಕೆಟ್ಟ ನಿರ್ಧಾರಗಳು ದೇಶದಲ್ಲಿ ಯುವ ಪೀಳಿಗೆಯನ್ನು ನಿರುದ್ಯೋಗ ಸಮಸ್ಯೆಯನ್ನು ಎದುರಿಸಿ ಕಂಗಾಲಾಗುತ್ತಿದ್ದಾರೆ.

ಬಹುತೇಕ ಈಗಿನ ಶಿಕ್ಷಣ ಪದ್ದತಿ ಮಾರ್ಕ್ಸ್ ವಾದಿ ದೃಷ್ಟಿಕೋನ ಸ್ವರೂಪವಾಗಿದೆ ಹೊರತು ಉದ್ಯೋಗಕ್ಕೆ ಬೇಕಾದಂತಹ ಕೌಶಲ್ಯವನ್ನು ಯುವಪೀಳಿಗೆಯಲ್ಲಿ ಭರಿಸುವ ಕಾರ್ಯಗಳು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮರೆಮಾಚಿ ಹೋಗಿದೆ.
ಅದರ ಸಲುವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿಧರರು ನಿರಂತರ ಕೆಲಸ ಹುಡುಕುವ ಕಾರ್ಯದಲ್ಲಿ ತೊಡಗಿ ಕಂಗೆಟ್ಟು ಹೋಗಿದ್ದಾರೆ. ಶಿಕ್ಷಣ ಪದ್ಧತಿ ಪರಿಪೂರ್ಣ ವಾಗಿರಬೇಕೆಂದರೆ ಪದವಿಯ ವಿಷಯವಾರು ಅಭ್ಯಾಸದ ಜತೆಗೆ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಮತ್ತು ವೈಜ್ಞಾನಿಕ ಪರಿಕಲ್ಪನೆ ಬರುವಂತೆ ಪ್ರಚೋದಿಸಬೇಕು.

ಬಹುಶಿಸ್ತೀಯ ಅಧ್ಯಯನದ ಉದ್ದೇಶ ಸ್ವಾಭಾವಿಕವಾಗಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಿಕೆಗೆ ಪೂರಕವಾಗಿರುತ್ತದೆ. ಶಿಕ್ಷಣ ಮತ್ತು ಉದ್ಯೋಗದ ನಡುವೆ ಸಂಬಂಧಗಳನ್ನು ಏರ್ಪಡುತ್ತದೆ.

ಬದಲಾಗಿರುವ ಆರ್ಥಿಕತೆಯಲ್ಲಿ ಖಾಸಗಿ ಕ್ಷೇತ್ರಕ್ಕೆ ಬಹಳಷ್ಟು ಮಹತ್ವ ಇರುವುದರಿಂದ ಈ ಖಾಸಗಿ ಕ್ಷೇತ್ರ ಪರಿಣಿತಿಗೆ ಮಹತ್ವವನ್ನು ಹೆಚ್ಚು ಕೊಡುತ್ತವೆ. ಖಾಸಗಿ ಕ್ಷೇತ್ರಗಳು ಹೆಚ್ಚು ಹುದ್ದೆಗಳನ್ನು ಸೃಷ್ಟಿಸುತ್ತಿವೆ. ಶಿಕ್ಷಣಕ್ಕೂ ಮತ್ತು ಉದ್ಯೋಗಕ್ಕೂ ಇರುವ ಕೊಂಡಿಯಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ.
ಪದವಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕೆಂದರೆ ಎಲ್ಲ ವಿಶ್ವವಿದ್ಯಾಲಯಗಳ ವಿಷಯವಾರು ಪಠ್ಯ ಕ್ರಮದಲ್ಲಿ ಬದಲಾವಣೆಯಾದರೆ ಉದ್ಯೋಗ ಆಧಾರಿತ ಶಿಕ್ಷಣ ಪದ್ಧತಿ ಎಂದು ನಾವು ಭಾವಿಸಬಹುದು. ಕೆಲಸ ಮಾಡುವ ಸ್ಥಳದಲ್ಲಿ ಕೆಲಸವನ್ನು ಕಲಿಯುವುದರಿಂದ ಶಿಕ್ಷಣಕ್ಕೂ ಮತ್ತು ಕೆಲಸಕ್ಕೂ ಸಂಬಂಧವಿರುವುದಿಲ್ಲ. ಆದರೆ ಕೆಲಸದ ಸ್ಥಳದಲ್ಲಿಯೇ ಕೆಲಸವನ್ನು ಕಲಿಯುವುದು ವಾಸ್ತವದಲ್ಲಿ ಉದ್ಯೋಗವನ್ನು ಹೆಚ್ಚು ಯಶಸ್ವಿಗೊಳಿಸುವ ವಿಧಾನವಾಗಿದೆ.

ಯುವಜನತೆ ಬಹು ವ್ಯಕ್ತಿತ್ವದೊಂದಿಗೆ ಶಿಕ್ಷಣದ ಜೊತೆಗೆ ಉದ್ಯೋಗದ ಕುರಿತು ಮಾಹಿತಿಯನ್ನು ಸಶಕ್ತವಾಗಿ ಪಡೆದರೆ ಸಾರ್ಥಕವಾಗುತ್ತದೆ.

ಬಹುಶಿಸ್ತೀಯ ಕಲಿಕೆಯು ವಿದ್ಯಾರ್ಥಿಯ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಪದವಿಯ ಜೊತೆಗೆ ಒಂದಿಷ್ಟು ಕಂಪ್ಯೂಟರ್ ಜ್ಞಾನ, ಸಂವಹನ ಕಲೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಂಡರೆ ಶಿಕ್ಷಣದ ನಂತರ ಉದ್ಯೋಗ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.
ತಾನು ಪದವಿಯಲ್ಲಿ ಒಳ್ಳೆಯ ಅಂಕ ಮತ್ತು ರ್ಯಾಂಕ್ ಪಡೆದಿದ್ದೇನೆ ಎನ್ನುವುದು ಸಾಲುವುದಿಲ್ಲ. ಅಂಕಗಳು ಸೂಚಿಸುವ ಪ್ರತಿಭೆ ಕಾರ್ಯನಿರ್ವಹಣೆಯಲ್ಲಿ ಕಾಣಬೇಕಾಗುತ್ತದೆ.

ಸರ್ಕಾರಗಳು ಕೇವಲ ಆಶ್ವಾಸನೆಗಳನ್ನು ನೀಡುತ್ತಾ ಬಂದಿರುತ್ತವೆ ಹೊರತು ಶಿಕ್ಷಣ ಪದ್ಧತಿಯಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತಂದೊಡ್ಡಿರುವುದಿಲ್ಲ . ಈ ಸಲುವಾಗಿ ಹಲವಾರು ಯುವಕರು ಉದ್ಯೋಗ ಗಿಟ್ಟಿಸಿಕೊಳ್ಳುವುದರಲ್ಲಿ ಬಹಳಷ್ಟು ವಿಫಲರಾಗುತ್ತಿದ್ದಾರೆ ಇದರ ಪರಿಣಾಮ ಮುಂಬರುವ ದಿನಗಳಲ್ಲಿ ದೇಶ ಬಹು ದೊಡ್ಡ ಬೆಲೆ ತೆರಬೇಕಾಗುತ್ತದೆ .

ಪದವಿ ವಿದ್ಯಾರ್ಥಿಗಳ ಪರಿಸ್ಥಿತಿ ಹೇಗಿದೆ ಎಂದರೆ?
ಅಂಕದ ಆಧಾರದ ಮೇಲೆ ಶಿಕ್ಷಣವನ್ನು ಪಡೆಯುವುದಕ್ಕೆ 3 ರಿಂದ 5 ವರ್ಷ ಪದವಿಯಲ್ಲಿ ಮೋಜು ಮಸ್ತಿ ಮಾಡಿ ತದನಂತರ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ವರಸಿ ಅಲೆಯುತ್ತಾರೆ .

ಕಳೆದ 5 ರಿಂದ 6 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಬಹಳಷ್ಟು ಕುಂಠಿತಗೊಂಡಿದೆ ಇದರ ಪರಿಣಾಮವಾಗಿ ವಿದ್ಯಾಭ್ಯಾಸ ಪಡೆದ ಯುವಕರು ಅಲ್ಲಿ ಇಲ್ಲಿ ಸಣ್ಣ ಪುಟ್ಟ ಉದ್ಯೋಗವನ್ನು ಪಡೆಯಲು ಪರದಾಡುತ್ತಿದ್ದಾರೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಬಹಳಷ್ಟು ಹೆಚ್ಚಾಗಿದ್ದು.ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೂ ಮತ್ತು ಸಾಮಾನ್ಯ ವ್ಯಕ್ತಿಗಳಿಗೂ ವ್ಯತ್ಯಾಸವಿಲ್ಲದಂತಾಗಿದೆ.ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾಗಲಿ ಜತೆಗೆ ಶಿಕ್ಷಣದಲ್ಲಿರುವ ಕಲಿಕೆಯು ಪ್ರಾಯೋಗಿಕವಾಗಿ ಉದ್ಯೋಗಕ್ಕೆ ನಾಂದಿಯನ್ನು ನೀಡಲಿ ಎನ್ನುವುದು ಈ ಲೇಖನದ ಆಶಯ …

ಮಲ್ಲೇಶ್ ನಾಯ್ಕ ಎಂ.
ಉಪನ್ಯಾಸಕರು. ದಾವಣಗೆರೆ
ಪ್ರತಿಕ್ರಿಯಿಸಿ : 9632818431..

Share.
Leave A Reply

Exit mobile version