ದಾವಣಗೆರೆ.
ಶಾಸಕ ಶಿವಗಂಗಾ ಬಸವರಾಜ್ ಅವರು, ಅವರ ಸ್ವ-ಪಕ್ಷದ ಜಿಲ್ಲಾ ಸಚಿವರು ಬಿಜೆಪಿ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಕ್ಕೆ ಬಿಜೆಪಿ ಮುಖಂಡರು ಯಾರೇಂದು ಬಹಿರಂಗ ಪಡಿಸಲಿ ಎಂದು
ಯಶವಂತರಾವ್ ಜಾದವ್ ಹೇಳಿದ್ದು, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇವರು ಯಾರೊಟ್ಟಿಗೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನ ಬಹಿರಂಗ ಪಡಿಸ ಬೇಕೆಂದು ಬಿಜೆಪಿ ಯುವ ಮುಖಂಡ ರಾಜುವೀರಣ್ಣ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಮೇಯರ್ ಚುನಾವಣೆಯ ಸಂದರ್ಭದಲ್ಲಿ ಅವರ ಪುತ್ರನನ್ನ ವಿದೇಶ ಪ್ರವಾಸಕ್ಕೆ ಯಾವ ಉದ್ದೇಶದಿಂದ ಕಳುಹಿಸಿದ್ದರು, ಆಗ ಅವರು ಯಾರೊಟ್ಟಿಗೆ ಒಳ ಒಪ್ಪಂದ ಮಾಡಿಕೊಂಡು ಕಳುಹಿಸಿದ್ದರು ಅದನ್ನ ಬಹಿರಂಗ ಪಡಿಸಬೇಕು ಎಂದು ಹೇಳಿದರು.
ಪಕ್ಷ ನಿಷ್ಠೆ ಎಂದು ಮಾತನಾಡುವ ನೀವು ಮಾಜಿ ಸಚಿವರು, ಹಿರಿಯರಾದ ಎಸ್.ಎ.ರವೀಂದ್ರನಾಥ್ ಅವರ ಬಗ್ಗೆ ಎಷ್ಟು ಬಾರಿ ಮಾತನಾಡಿದ್ದೀರಿ, ಇದೇನಾ ನಿಮ್ಮ ಪಕ್ಷ ನಿಷ್ಟೇ. ನೀವು ಎಳವರು ಎಂಬ ಪದ ಬಳಸಿದ್ದು, ಎಳವರಿಂದಲೇ ಇತಿಹಾಸ ಗೊತ್ತಾಗೋದು, ನಾವೆಲ್ಲಾ ಪಕ್ಷಕ್ಕೆ ಎಳವರಾಗಿದ್ದೇವೆ, ನೀವು ವ್ಯಕ್ತಿಗೆ ಎಳವರಾಗಿದ್ದೀರಿ. ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಉಂಟಾಗಲು ಯಾರು ಕಾರಣ ಎಂಬುದನ್ನ ಮೊದಲು ಅವರು ತಿಳಿದುಕೊಳ್ಳ ಬೇಕು, ವ್ಯಕ್ತಿ ಪೂಜೆ ಮಾಡುವವರಿಂದ ಸೃಷ್ಟಿಯಾಗಿದ್ದು ಇಂತಹವರಿಂದಲೇ ಪಕ್ಷಕ್ಕೆ, ನಿಷ್ಟಾವಂತ ಕಾರ್ಯಕರ್ತರಿಗೆ ಮುಜುಗರ ಉಂಟಾಗುತ್ತಿದೆ ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಚುನಾವಣೆ ಸ್ಪರ್ಧೆ ಮಾಡಿದ್ದೀರಿ, ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದೀರಿ, ದೂಡ ಅಧ್ಯಕ್ಷರಾಗಿದ್ದೀರಿ, ನಗರಸಭೆ ಅಧ್ಯಕ್ಷರಾಗಿದ್ದು ಇದಕ್ಕೆಲ್ಲಾ ಜಿಲ್ಲೆಯ ಎಲ್ಲಾ ನಾಯಕರು ಕಾರಣ, ಇನ್ನು ನಿಮಗೆ ವಯಸ್ಸಾಗಿದ್ದು ರಾಜಕೀಯ ನಿವೃತ್ತಿ ಪಡೆದು ಯುವಕರಿಗೆ ಮಾರ್ಗದರ್ಶನ ಮಾಡಿ, ಅದನ್ನ ಬಿಟ್ಟು ಇಲ್ಲ ಸಲ್ಲದ ಆರೋಪ ಮಾಡುವುದನ್ನ ಬಿಡಿ ಎಂದು ತಿಳಿಸಿದರು.
ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ಅವರ ಬಗ್ಗೆ ಮಾತನಾಡುವ ನಿಮಗೆ ಕಳೆದ ಕೆಲ ದಿನಗಳ ಹಿಂದೆ ದಾವಣಗೆರೆಯ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಅವರ ಸಂಘಟನೆ, ತಾಕತ್ತು ಏನು ಎಂದು ತೋರಿಸಿದ್ದಾರೆ ಎಂದು ಹೇಳಿದರು.
ಇನ್ನಾದರು ಪ್ರೆಸ್ ಮೀಟ್ ಮಾಡುವುದನ್ನು ನಿಲ್ಲಿಸಿ ಇಲ್ಲವಾದರೆ ನಾವು ಪ್ರೆಸ್ ಮೀಟ್ ಮಾಡುವುದರ ಮೂಲಕ ನಿಮ್ಮ ವಿರುದ್ಧ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಘೋಷ್ಟಿಯಲ್ಲಿ ಪ್ರವೀಣ್ ರಾವ್ ಜಾದವ್, ಪಂಜು ಪೈಲ್ವಾನ್, ಸುಮಂತ್, ಮಂಜುನಾಥ್, ವೆಂಕಟೇಶ್, ಧರ್ಮರಾಜ್, ಗಿರೀಶ್ ಇದ್ದರು.