ಬೆಂಗಳೂರು: ಇತ್ತೀಚಿನ ದಿನದಲ್ಲಿ ಎಲ್ಲ ದರಗಳು ಏರುತ್ತಿದ್ದು, ಈಗ ಶ್ರೀ ಸಾಮಾನ್ಯ ಕುಡಿಯುವ ಹಾಲಿನ ದರವನ್ನು ಸಹ ಏರಿಸುವ ಸಾಧ್ಯತೆ ಇದೆ. ಒಂದು ಕಡೆಗೆ ರೈತರಿಗೆ ಇನ್ನೂ ಪ್ರೋತ್ಸಾಹ ಧನ ದೊರೆತ್ತಿಲ್ಲ..ಈ ನಡುವೆ ಸರಕಾರ ರೈತರಿಗೆ ಹೊಸ ವರ್ಷಕ್ಕೆ ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ರೈತರಿಗೆ ಕನಿಷ್ಠ 5 ರೂ.ನಷ್ಟು ಹಾಲಿನ ದರ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಲಿದ್ದೇವೆ ಎಂದು ಕೆಎಂಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ಆರು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ನಂದಿನಿ ಹಾಲಿನ ಪ್ರಮಾಣ ಮತ್ತು ದರ ಏರಿಕೆಯಾಗಿದ್ದು, ಈಗ ಪ್ರತಿ ಲೀಟರ್‌ಗೆ 5 ರೂ. ಏರಿಸುವ ಕುರಿತು ಕೆಎಂಎಫ್ ಮುಂದಾಗಿದೆ. ಈ ಸಂಬAಧ ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಲ್. ಭೀಮಾನಾಯ್ಕ ಅವರು ಗುರುವಾರ ಮುನ್ಸೂಚನೆ ನೀಡಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಹೋಗಿದ್ದು, ಸರ್ಕಾರದ ಹಂತದಲ್ಲಿ ದರ ಏರಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದಾರೆ.
‘ಹಾಲು ಉತ್ಪಾದಕ ರೈತರು ತೀವ್ರ ಸಂಕಷ್ಟದಲ್ಲಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ರೈತರಿಗೆ ಕನಿಷ್ಠ 5 ರೂ.ನಷ್ಟು ಹಾಲಿನ ದರ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಲಿದ್ದಾರೆ. ಸಿಎಂ ಶೀಘ್ರದಲ್ಲೆ ರಾಜ್ಯದ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಹಾಲು ಉತ್ಪಾದಕ ರೈತರಹಿತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ದರ ಏರಿಕೆ, ಸ್ಪಷ್ಟನೆ ನೀಡಿದ ಭೀಮಾನಾಯ್ಕ
ಈ ಹಿಂದೆ ‘ದಕ್ಷಿಣ ಭಾರತದ ಇತರೆ ರಾಜ್ಯಗಳು ಮತ್ತು ಅಮುಲ್ ಹಾಲಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನದರ ಕಡಿಮೆಯೇ ಇದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕರ್ನಾಟಕ ಹಾಲು ಮಹಾಮಂಡಳ ನೀಡುತ್ತಿದೆ ಎಂದು ಆರು ತಿಂಗಳ ದರ ಏರಿಕೆ ಮಾಡಿದಾಗ ಭೀಮಾನಾಯ್ಕ ಹೇಳಿದ್ದು, ಈಗ ಪುನಃ ದರ ಏರಿಕೆಗೆ ಮುಂದಾಗಿದ್ದಾರೆ.
ನಂದಿನಿ ಹಾಲಿನ ದರ 2 ರೂ ಇಳಿಕೆ, 500 ಎಂಎಲ್‌ಹೆಚ್ಚುವರಿ ಹಾಲು ಕಡಿತ
ಈ ಹಿಂದೆ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 50 ಎಂಎಲ್ ಹೆಚ್ಚುವರಿ ಹಾಲನ್ನು ಕಡಿತ ಮಾಡಿ ಅದರ ದರವನ್ನೂ ಕೂಡ 2 ರೂನಷ್ಟು ಇಳಿಕೆ ಮಾಡಲಾಗುತ್ತದೆ ಎಂದು ಭೀಮಾನಾಯ್ಕ್ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಕೆಎಂಎಫ್‌ಗೆ ಹೆಚ್ಚಿನ ಹಾಲು ಹರಿದು ಬಂದಿದ್ದ ಹಿನ್ನೆಲೆಯಲ್ಲಿ ಪ್ಯಾಕೆಟ್‌ನಲ್ಲಿ ನೀಡಲಾಗುತ್ತಿದ್ದ ಹಾಲಿನ ಪ್ರಮಾಣವನ್ನು 50 ಎಂಎಲ್ ಹೆಚ್ಚಿಸಿ ದರವನ್ನೂ 2 ರೂ. ಏರಿಕೆ ಮಾಡಲಾಗಿತ್ತು. ಇದೀಗ ಹಾಲಿನ ಜೊತೆ ದರವನ್ನೂ ಹಿಂಪಡೆಯುವುದಾಗಿ ಭೀಮಾನಾಯ್ಕ್ ತಿಳಿಸಿದ್ದಾರೆ. ಈ ಹಿಂದೆ ಜೂನ್ 25ರಂದು 1000 ಎಂಎಲ್ ಹಾಲಿಗೆ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡುವ ಘೋಷಣೆ ಮಾಡಲಾಗಿತ್ತು.
ಜೂನ್ 26ರಿಂದಲೇ ಹೊಸ ತೀರ್ಮಾನ ಜಾರಿಗೆ ಬಂದಿತ್ತು. ಈ ವೇಳೆ ಹಾಲಿನ ದರವನ್ನು ಲೀಟರ್‌ಗೆ 44 ರೂ.ನಿಂದ 46 ರೂ.ಗೆ ಏರಿಕೆ ಮಾಡಲಾಗಿತ್ತು. ಹಾಗೆಯೇ 22 ರೂ. ಇದ್ದ 500 ಎಂಎಲ್ ಪ್ಯಾಕೆಟ್ ಹಾಲಿಗೂ 50 ಎಂಎಲ್ ಹೆಚ್ಚುವರಿ ಸೇರಿಸಲಾಗಿತ್ತು. ಹಾಗೂ ದರವನ್ನು 24 ರೂ.ಗೆ ಏರಿಕೆ ಮಾಡಲಾಗಿತ್ತು.