ದಾವಣಗೆರೆ: ಹಿಂದೂ ಮುಸ್ಲಿರಿಬ್ಬರೂ ಭಾವೈಕ್ಯತೆಯಿಂದ ಜೊತೆಗೂಡಿ ಸಂಭ್ರಮದಿಂದ ಆಚರಣೆ ಮಾಡುವ ಹಬ್ಬವೇ ಮೊಹರಂ. ಈ ಹಬ್ಬಕ್ಕೆ ಹಳೇ ಕುಂದವಾಡ ಗ್ರಾಮವೇ ಸಜ್ಜಾಗಿತ್ತು. ಇದೀಗ ಹಬ್ಬಕ್ಕೆ ಒಂದು ವಾರ ಬಾಕಿ ಉಳಿದಿದ್ದು, ಕಿಡಿಗೇಡಿಗಳು ಪೆಟ್ಟಿಗೆ ಒಡೆದು ದೇವರನ್ನೇ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ವರ್ಷಕ್ಕೆ ಒಂದು ಬಾರಿ ದೇವರನ್ನು ಹೊರ ತೆಗೆದು ಐದು ದಿನಗಳ ಕಾಲ ಗ್ರಾಮದ ರಾಜಬೀದಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷವಾಗಿ ಮೊಹರಂ ಹಬ್ಬವನ್ನು ಆಚರಣೆ ಮಾಡುವುದು ಇಲ್ಲಿನ ಪದ್ಧತಿಯಾಗಿದೆ. ಆದರೆ ಇದೀಗ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು. ಪೆಟ್ಟಿಗೆಯಲ್ಲಿ ಇದ್ದಂತಹ ಮೊಹರಂ ಹಬ್ಬದ ಅಲಿ ದೇವರನ್ನು ಯಾರೋ ಖದೀಮರು ಕದ್ದೋಯ್ದಿದ್ದಾರೆ. ಪೆಟ್ಟಿಗೆಯಲ್ಲಿದ್ದ ಐದು ದೇವರಲ್ಲಿ ಎರಡು ದೇವರುಗಳನ್ನು ಮಾತ್ರ ಖದೀಮರು ಕದ್ದೋಯ್ದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಒಟ್ಟಿನಲ್ಲಿ ಪೀರಾ ದೇವರು ಕಳ್ಳತನವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.