ದಾವಣಗೆರೆ: ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಪ್ ಸಿನಿಮಾ ಹೆಜ್ಞಾರು ತನ್ನ ಮೊದಲ ಟೀಸರ್ ಮೂಲಕವೇ ಇಂಡಸ್ಟ್ರಿಗೆ ಒಳ್ಳೆಯ ಕಂಟೆಂಟ್ ಸಿನಿಮಾ ಜುಲೈ 19ರಂದು ರಾಜಾದ್ಯಂತ ಬಿಡುಗಡೆ ಆಗಲಿದೆ ಎಂದು ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಗಿರೀಶ್ ಕನಕಪುರ ತಿಳಿಸಿದರು.
ಕನ್ನಡದ ಎಲ್ಲಾ ವಾಹಿನಿಗಳಲ್ಲೂ 13ಕ್ಕೂ ಅಧಿಕ ಜನಪ್ರಿಯ ಧಾರಾವಾಹಿಗಳನ್ನು ನೀಡಿರುವ ನಿರ್ದೇಶಕ ಕೆ.ಎಸ್. ರಾಮ್ಜಿ ಅವರು, ಗಗನ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಬೆಳ್ತಂಗಡಿ, ಬೆಂಗಳೂರು ಸೇರಿದಂತೆ ಇತರೆ ಕಡೆ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ನಾಯಕರಾಗಿ ಬೆಳ್ಳಿತೆರೆಗೆ ಪರಿಚಿತರಾಗುತ್ತಿರುವ ಭಗತ್ ಆಳ್ವಾ ಹಾಗೂ ತಮ್ಮ ಅಭಿನಯ ಮತ್ತು ತೂಕದ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆಯಿತ್ತಿರುವ ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಕಥಾನಾಯಕರು.
ನಾಯಕಿಯಾಗಿ ಶ್ವೇತ ಲೀಯೊನಿಲ್ಲಾ ಡಿಸೋಜಾ, ಮೊದಲ ಬಾರಿಗೆ ನವೀನ್ ಕೃಷ್ಣ ವಿಲನ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರುಣಾ ಬಾಲರಾಜ್, ಮುನಿರಾಜ್, ವಿನೋದ್ ಭಾರತಿ ಒಳಗೊಂಡಂತೆ ಬಹುತೇಕ ಕನ್ನಡದ ಪರಿಚಿತ ಕಲಾವಿದರು ಹೆಜ್ಜಾರಿನಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಎಲ್ಲರನ್ನು ರಂಜಿಸಲಿದ್ದಾರೆ.
ಪುಟ್ಟಗೌರಿ ಮದುವೆ, ಕಿನ್ನರಿ, ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು. ಮಹಾನಾಯಕ ಅಂಬೇಡ್ಕರ್, ಹೆಬ್ಬುಲಿಯ ದೇವರೆ ನೀನು ಇರೊ. ವಿಳಾಸವು ಬೇಕಾಗಿದೆ ಹೀಗೆ ಎಂದೂ ಮರೆಯಲಾಗದಂತಹ ಹಾಡುಗಳ ಸಾಹಿತಿಯಾಗಿ, ಕಥೆಗಾರನಾಗಿ, ಸಂಭಾಷಣಕಾರನಾಗಿ ಹಾಗೂ ಝೀ ಕನ್ನಡದ ಫಿಕ್ಷನ್ ಹೆಡ್ ಆಗಿ ಹಲವಾರು ಹಿಟ್ ಧಾರಾವಾಹಿಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ಹರ್ಷಪ್ರಿಯ ಹೆಜ್ಞಾರು ಮೂಲಕ ತಮ್ಮ ಡೈರೆಕ್ಷನಲ್ ಡೆಬ್ಯೂ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ನಾಯಕ ನಟ ಭಗತ್ ಆಳ್ವ, ನಟಿ ಶ್ವೇತಾ ಲೀಯೋನಿಲ್ಲಾ ಡಿಸೋಜ, ನಿರ್ದೇಶಕ ತಂಡದ ಭರತ್ ಲಿಂಗರಾಜ ಇದ್ದರು.