
ಶಿವಮೊಗ್ಗ: ಭದ್ರಾ ಜಲಾಶಯದ ಒಳಹರಿವು ಆರಂಭವಾಗಿದ್ದು, 1,395 ಕ್ಯುಸೆಕ್ ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಬುಧವಾರ 117.11 ಅಡಿಯಷ್ಟು ನೀರಿನ ಸಂಗ್ರಹ ಇತ್ತು. ಮಂಗಳವಾರ ಒಳಹರಿವು 2,911 ಕ್ಯುಸೆಕ್ಗೆ ಏರಿಕೆಯಾಗಿತ್ತು.
ಕಳೆದ ವರ್ಷ ಇದೇ ದಿನ 137.4 ಅಡಿಯಷ್ಟು ನೀರು ಇತ್ತು. ಜಲಾಶಯದಿಂದ 342 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819 ಅಡಿ ಇದೆ. ಬುಧವಾರ 1,745.40 ಅಡಿ ಇತ್ತು. ಜಲಾಶಯಕ್ಕೆ 3,450 ಕ್ಯುಸೆಕ್ ಒಳಹರಿವು ಇದ್ದು, 1,924.21 ಕ್ಯುಸೆಕ್ ನೀರು ಶರಾವತಿ ನದಿಗೆ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1,743.70 ಅಡಿ ಇತ್ತು. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 6.83 ಸೆಂ.ಮೀ ಮಳೆ ಸುರಿದಿದೆ. ಜೂನ್ ತಿಂಗಳ ವಾಡಿಕೆ ಮಳೆ 33.66 ಸೆಂ.ಮೀ ಇದ್ದು, 12 ದಿನಗಳಲ್ಲಿ 9.74 ಸೆಂ.ಮೀ ಸರಾಸರಿ ಮಳೆ ದಾಖಲಾಗಿದೆ. ಸಾಗರ ತಾಲ್ಲೂಕಿನಲ್ಲಿ 3.16 ಸೆಂ.ಮೀ ಮಳೆ ಸುರಿದಿದೆ.