ಪ್ರತಿವರ್ಷ 12 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, 2.75 ಲಕ್ಷಕ್ಕೂ ಅಧಿಕ ನಾಲ್ಕು ಚಕ್ರ ವಾಹನಗಳು ನೋಂದಣಿ.
ಬೆಂಗಳೂರು.
ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳ ಕೊಳ್ಳುವರ ಸಂಖ್ಯೆ ಹೆಚ್ಚಾಗುತ್ತಿದ್ದು, ನಾಲ್ಕು ಚಕ್ರ ವಾಹನಗಳನ್ನು ಖರೀದಿ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
2023ರಲ್ಲಿ ಏಪ್ರಿಲ್ 1ರಿಂದ ನ. 30ರವರೆಗೆ 8.41 ಲಕ್ಷ ದ್ವಿಚಕ್ರ ವಾಹನಗಳು. 1.84 ಲಕ್ಷ ನಾಲ್ಕುಚಕ್ರ ವಾಹನಗಳು ನೋಂದಣಿಯಾಗಿದ್ದವು. 2024ರಲ್ಲಿ ಇದೇ ಅವಧಿಯಲ್ಲಿ 8.42 ಲಕ್ಷ ದ್ವಿಚಕ್ರವಾಹನಗಳು, 1.74 ಲಕ್ಷ ನಾಲ್ಕು ಚಕ್ರ ವಾಹನಗಳು ನೋಂದಣಿ ಯಾಗಿವೆ. ದ್ವಿಚಕ್ರ ವಾಹನಗಳು ಒಂದು ಸಾವಿರದಷ್ಟು ಅಧಿಕವಾಗಿದ್ದರೆ, ನಾಲ್ಕು ಚಕ್ರ ವಾಹನಗಳು 10 ಸಾವಿರದಷ್ಟು ಕಡಿಮೆಯಾಗಿವೆ.
ದ್ವಿಚಕ್ರ ವಾಹನ ಹೆಚ್ಚು ಖರೀದಿ.
ಏರುತ್ತಿರುವ ಪೆಟ್ರೋಲ್ ಬೆಲೆ, ಸಾಮಾಗ್ರಿಗಳ ದುಬಾರಿ, ಅಧಿಕ ತೂಕ, ಕಡಿಮೆ ಹಣದಲ್ಲಿ ಹೆಚ್ಚು ಮೈಲೇಜ್, ಪರಿಸರಕ್ಕೆ ಪೂರಕವಾದ, ಇಂಧನ ವೆಚ್ಚವೂ ಕಡಿಮೆ ಇರುವ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ನಾಲ್ಕು ಚಕ್ರ ವಾಹನಗಳು ತುಸು ಇಳಿಕೆಯಾಗಿದೆ.
ಎಲೆಕ್ಟ್ರಿಕ್ ವಾಹನಗಳ ಕಡೆಗೆ ಹೆಚ್ಚು ಆಸಕ್ತಿ.
ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪೆಟ್ರೋಲ್, ಡೀಸೆಲ್ ವಾಹನಗಳಿಗಿಂತ ಬೆಲೆ ಸ್ವಲ್ಪ ಅಧಿಕ ಇರಬಹುದು. ಆದರೆ, ಒಮ್ಮೆ ಖರೀದಿಸಿದ ಬಳಿಕ ವೆಚ್ಚ ಬಹಳ ಕಡಿಮೆ ಇರುವುದರಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ಪಟ್ಟಣಗಳಲ್ಲಿ ಚಾರ್ಜಿಂಗ್ ಪಾಯಿಂಟ್ಗಳು ಇರುವುದರಿಂದ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಅನುಕೂಲವಾಗಿದೆ. ಕಾರು, ಬೈಕ್ಗಳಷ್ಟೇ ಅಲ್ಲದೇ ಎಲೆಕ್ಟ್ರಿಕ್ ಟ್ಯ್ರಾಕ್ಟರ್, ಬಸ್ಗಳು ಕೂಡ ಇವೆ. ಬಿಎಂಟಿಸಿ, ಕೆಎಸ್ಆರ್ಟಿಸಿಯಲ್ಲಿ ಹಲವು ಎಲೆಕ್ಟ್ರಿಕ್ ಬಸ್ಗಳಿವೆ. ರೈತರು ಎಲೆಕ್ಟ್ರಿಕ್ ಟ್ರ್ಯಾಕ್ಟರ್ಗಳನ್ನು ಖರೀದಿಸುತ್ತಿದ್ದಾರೆ. ಹಾಗಾಗಿ ಈ ಡಿಸೆಂಬರ್ ತಿಂಗಳ ಮೊದಲ 10 ದಿನಗಳಲ್ಲಿ 4,749 ದ್ವಿಚಕ್ರವಾಹನಗಳು, 2,597 ನಾಲ್ಕುಚಕ್ರದ ವಾಹನಗಳು ನೋಂದಣಿಯಾಗಿವೆ.
3.5 ಕೋಟಿ ವಾಹನ.
‘ರಾಜ್ಯದಲ್ಲಿ 3.5 ಕೋಟಿ ವಾಹನ ಗಳಿದ್ದು, ಅದರಲ್ಲಿ ಶೇ 10ರಷ್ಟು ವಾಹನ ಗಳು ಎಲೆಕ್ಟ್ರಿಕ್ ವಾಹನಗಳಾಗಿವೆ. ಪ್ರತಿವರ್ಷ 12 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, 2.75 ಲಕ್ಷಕ್ಕೂ ಅಧಿಕ ನಾಲ್ಕು ಚಕ್ರ ವಾಹನಗಳು ನೋಂದಣಿಯಾಗುತ್ತಿವೆ. ಇನ್ನು ಬಸ್, ಆಟೊ, ಕಾರು ಸಹಿತ ವಾಣಿಜ್ಯ ಬಳಕೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ ಪ್ರತಿ ವರ್ಷ ತೆರಿಗೆ ಕಟ್ಟುವ ಪ್ರಮೇಯ ಕೂಡ ಇರುವುದಿಲ್ಲ. ಖರೀದಿ ಮಾಡುವಾಗಲೂ 25 ಲಕ್ಷಕ್ಕಿಂತ ಅಧಿಕ ಬೆಲೆಯ ಕಾರುಗಳಿಗೆ ಮಾತ್ರ ಒಟ್ಟು ಬೆಲೆಯ ಶೇ 10ರಷ್ಟು ಪಾವತಿ ಮಾಡಬೇಕಾಗಿರುವುದರಿಂದ ಎಲೆಕ್ಟಿçÃಕ್ ವಾಹನಗಳಿಗೆ ನಿಧಾನವಾಗಿ ಜನರು ಜಾರುತ್ತಿದ್ದಾರೆ.
ಕನಿಷ್ಠ 200 ಕಿ.ಮೀ. ಸಂಚರಿಸಬಹುದು.
ಒಮ್ಮೆ ಚಾರ್ಜ್ ಮಾಡಿದರೆ ಕನಿಷ್ಠ 200 ಕಿ.ಮೀ. ಸಂಚರಿಸಬಹುದು. 300 ಕಿ.ಮೀ., 400 ಕಿ.ಮೀ. ಸಂಚರಿಸ ಬಹುದಾದ ಕಾರುಗಳು ಕೂಡ ಬಂದಿವೆ. ಒಮ್ಮೆ ಚಾರ್ಜ್ ಮಾಡಿದಾಗ 200 ಕಿ.ಮೀ. ಸಂಚರಿಸುವ ಕಾರು ಮಾತ್ರ ನಮ್ಮಲ್ಲಿದ್ದರೆ ಮನೆಯಿಂದ ಹೊರಟರೆ 150ರಿಂದ 200 ಕಿ.ಮೀ. ನಡುವೆ ಚಾರ್ಜಿಂಗ್ ಪಾಯಿಂಟ್ ಎಲ್ಲಿದೆ ಎಂದು ಗುರುತಿಸಿಕೊಂಡು, ಅಲ್ಲೇ ತಿಂಡಿ ತಿನ್ನುವ ಯೋಜನೆ ಹಾಕಿಕೊಳ್ಳಬೇಕು. ಆಗ ಅಲ್ಲಿ ಕಾರು ಚಾರ್ಜಿಂಗ್ಗೆ ಹಾಕಿ ಉಪಾಹಾರ ಮುಗಿಸಬಹುದು. ಮತ್ತೆ 150-200 ಕಿ.ಮೀ. ದೂರದಲ್ಲಿ ಊಟಕ್ಕೆ ಯೋಜನೆ ಹಾಕಿಕೊಳ್ಳಬೇಕು. ಈ ರೀತಿ ಮಾಡಿದರೆ ಎಷ್ಟು ದೂರ ಬೇಕಾದರೂ ಹೋಗಬಹುದು. ಈಗ ಸ್ಪೀಡ್ ಚಾರ್ಜರ್ ಇರುವುದರಿಂದ ಒಂದು ಗಂಟೆಯಲ್ಲಿ ಫುಲ್ಚಾರ್ಜ್ ಆಗುತ್ತದೆ’ ಎಂಬುದು ಸಾರಿಗೆ ಅಧಿಕಾರಿ ಅಭಿಪ್ರಾಯ.
———–
ಬೆಂಗಳೂರಿನಲ್ಲಿಯೇ 4,462 ಚಾರ್ಜಿಂಗ್ ಪಾಯಿಂಟ್.
ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ನಲ್ಲಿ ದೇಶದಲ್ಲಿ ಕರ್ನಾಟಕವೇ ಮೊದಲ ಸ್ಥಾನ ದಲ್ಲಿದೆ. 5,765 ಚಾರ್ಜಿಂಗ್ ಪಾಯಿಂಟ್ ಗಳಿದ್ದು, ಅದರಲ್ಲಿ ಬೆಂಗಳೂರಿನಲ್ಲಿಯೇ 4,462 ಇವೆ. ಬೆಸ್ಕಾಂ, ವಿವಿಧ ಖಾಸಗಿ ಸಂಸ್ಥೆಗಳು, ವಾಹನ ತಯಾರಿಕಾ ಕಂಪನಿಗಳು ಚಾರ್ಜಿಂಗ್ ಪಾಯಿಂಟ್ ಗಳನ್ನು ನಿರ್ಮಿಸಿವೆ. ಇದಲ್ಲದೇ 2,500 ಚಾರ್ಜಿಂಗ್ ಪಾಯಿಂಟ್ಗಳನ್ನು ಆರಂಭಿ ಸಲಾಗುವುದು ಎಂದು ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. ರಾಜ್ಯದ ವಿವಿಧ ನಗರಗಳಲ್ಲಿ ಅಲ್ಲದೇ ಮಂಗಳೂರು, ದಾವಣಗೆರೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ವಿವಿಧ ಪ್ರವಾಸಿ ತಾಣಗಳ ಲ್ಲಿಯೂ ಚಾರ್ಜಿಂಗ್ ಪಾಯಿಂಟ್ಗಳನ್ನು ಆರಂಭಿಸಿರುವುದು ಎಲೆಕ್ಟ್ರಿಕ್ ವಾಹನ ಸವಾರರಿಗೆ ಅನುಕೂಲವಾಗಿದೆ.
———-
ರಾಜ್ಯದಲ್ಲಿ ಎಲೆಕ್ಟ್ರಿಕಲ್ ವಾಹನ ಅಂಕಿ-ಸಂಖ್ಯೆ 2023
ತಿಂಗಳು ದ್ವಿಚಕ್ರ ತ್ರಿಚಕ್ರ
ಏಪ್ರಿಲ್ 92070 20,904
ಮೇ 97,074 20,895
ಜೂನ್ 1,02,249 23,042
ಜುಲೈ 95,576 21,962
ಆಗಸ್ಟ್ 1,01,960 26,163
ಸೆಪ್ಟೆಂಬರ್ 1,06,226 22,818
ಅಕ್ಟೋಬರ್ 1,09,188 24,159
ನವೆಂಬರ್ 1,36,933 25,004
————-
ರಾಜ್ಯದಲ್ಲಿ ಕಲ್ ವಾಹನ ಅಂಕಿ-ಸಂಖ್ಯೆ 2024
ತಿಂಗಳು ದ್ವಿಚಕ್ರ ತ್ರಿಚಕ್ರ
ಏಪ್ರಿಲ್ 1,04,710 21,104
ಮೇ 1,12,027 21,284
ಜೂನ್ 1,06,578 20,839
ಜುಲೈ 97,680 18,714
ಆಗಸ್ಟ್ 1,11,850 26,803
ಸೆಪ್ಟೆಂಬರ್ 93,460 17,571
ಅಕ್ಟೋಬರ್ 1,29,450 29,960
ನವೆಂಬರ್ 86,589 18,177
—
ರಾಜ್ಯದ ವಿವಿಧ ನಗರಗಳಲ್ಲಿ ಅಲ್ಲದೇ ಮಂಗಳೂರು, ದಾವಣಗೆರೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ವಿವಿಧ ಪ್ರವಾಸಿ ತಾಣಗಳ ಲ್ಲಿಯೂ ಚಾರ್ಜಿಂಗ್ ಪಾಯಿಂಟ್ಗಳನ್ನು ಆರಂಭಿಸಿರುವುದು ಎಲೆಕ್ಟ್ರಿಕ್ ವಾಹನ ಸವಾರರಿಗೆ ಅನುಕೂಲವಾಗಿದೆ.
–ಸಿ. ಮಲ್ಲಿಕಾರ್ಜುನ, ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ