ದಾವಣಗೆರೆ : BJPಗರ ಐಡಿಯಾ ಮತ್ತು ಐಡಿಯಾಲಾಜಿ ಇದೀಗ ರಾಜ್ಯದ ಮತ್ತು ದೇಶದ ಪ್ರತಿಯೊಬ್ಬ ಹಿಂದೂವಿಗೂ ಚನ್ನಾಗಿ ಅರ್ಥ ಆಗ್ತಾಯಿದೆ. ಬಹುಸಂಖ್ಯಾತ ಹಿಂದೂಗಳ ವೋಟ್​ಬ್ಯಾಂಕ್​ಅನ್ನ ತಮ್ಮತ್ತ ತಿರುಗಿಸಿಕೊಳ್ಳಲು ಬಿಜೆಪಿ ಸಾವಲ್ಲೂ ರಾಜಕೀಯ ಮಾಡ್ತಾಯಿದೆ. ಇದನ್ನ ಸಚಿವ ಸಂತೋಷ್ ಲಾಡ್ ಹೈಲೈಟ್ ಮಾಡಿ ಬಿಜೆಪಿಗರಿಗೆ ತಿರುಗೇಟನ್ನ ಕೊಟ್ಟಿದ್ದಾರೆ. ಹಾಗಾದ್ರೆ ‘ಹಿಂದೂಗಳ ಹತ್ಯೆಯಾದರೆ ಬಿಜೆಪಿಗೆ ಹಬ್ಬನಾ..? ಸಚಿವ ಸಂತೋಷ್‌ ಲಾಡ್‌ ಅವರ ಮಾತಿನ ಅರ್ಥ ಏನ್ ಗೊತ್ತಾ?

BJP ನಾಯಕರ ಐಡಿಯಾ ಮತ್ತು ಐಡಿಯಾಲಜಿ ತುಂಬಾ ಸಿಂಪಲ್.. ಇವರ ನಡತೆ ಮತ್ತು ನಡವಳಿಕೆಯನ್ನ ಸೂಕ್ಷ್ಮವಾಗಿ ನೋಡಿದ್ರೆ ಕಾಮನ್ ಸೆನ್ಸ್ ಇರೋ ಯಾರಿಗಾದ್ರೂ ಸುಲಭವಾಗಿ ಅರ್ಥ ಆಗುತ್ತೆ. ಚುನಾವಣಾ ಲಾಭ ಗಿಟ್ಟಿಸಿಕೊಳ್ಳಲು ಮಾತ್ರವೇ ಬಿಜೆಪಿ ನಾಯಕರು ಹಿಂದೂಗಳ ಪರ ದನಿ ಎತ್ತುತ್ತಾರೆ ಅನ್ನೋದು ಸ್ಪಷ್ಟವಾಗಿ ಎದ್ದು ಕಾಣ್ತಾಯಿದೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರೋ ಸಚಿವ ಸಂತೋಷ್ ಲಾಡ್, ರಾಜ್ಯದಲ್ಲಿ ಅನೇಕ ಹಿಂದೂ ಮಹಿಳೆಯರ ಹತ್ಯೆ ಹಾಗೂ ದೌರ್ಜನ್ಯ ನಡೆದರೆ ಪ್ರತಿಭಟನೆ ನಡೆಸದ ಬಿಜೆಪಿ, ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕ ಹಿಂದೂ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವುದರಿಂದ ಪ್ರಚಾರ ಪಡೆಯುತ್ತಿದೆ. ಬಿಜೆಪಿಗೆ ಹಿಂದೂಗಳ ಹತ್ಯೆಯಾದರೆ ಹಬ್ಬ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.

ಇತ್ತೀಚೆಗೆ ಹತ್ಯೆಗೀಡಾದ ನೇಹಾ ಹಿರೇಮಠ ಮನೆಯನ್ನು ಬಿಜೆಪಿಯವರು ಪ್ರಚಾರ ತಾಣವನ್ನಾಗಿಸಿಕೊಂಡಿದ್ದಾರೆ. ಬಿಜೆಪಿ ನಾಯಕರು ನಿತ್ಯ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರ ಮನಸ್ಸಿಗೆ ನೋವನ್ನುಂಟು ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಹಿನ್ನಡೆಯಾಗುವುದಿಲ್ಲ ಅಂತೇಳಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಇನ್ನ ಕೊಲೆಗೀಡಾದ ವಿದ್ಯಾರ್ಥಿನಿ ನೇಹಾಳ ತಂದೆ ನಿರಂಜನ ಹಿರೇಮಠ ನನ್ನ ಸ್ನೇಹಿತ. ಬಿಜೆಪಿಯವರು ನಿಮ್ಮನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ನೈಜತೆ ನಿರಂಜನ ಅವರಿಗೆ ತಿಳಿಯಬೇಕು. ಆ ಕುಟುಂಬದ ದುಃಖ ನಮಗೆ ಅರ್ಥವಾಗುತ್ತದೆ. ಕೈ ಮುಗಿದು ಕೇಳುತ್ತೇನೆ ಪಕ್ಷದ ಬಗ್ಗೆ ಮಾಡನಾಡುವುದನ್ನು ಬಿಡಬೇಕು ಎಂದು ಹೇಳಿದರು.

BY ವಿಜಯೇಂದ್ರಗೂ ಬಿಸಿ ಮುಟ್ಟಿಸಿದ ಲಾಡ್?
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮೊದಲ ಬಾರಿಗೆ ಶಾಸಕರಾದವರು. ಯಡಿಯೂರಪ್ಪ ಅವರ ಹೆಸರು ಇಲ್ಲದಿದ್ದರೆ ವಿಜಯೇಂದ್ರ ಝೀರೋ. ಅಂತವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ವಿಜಯೇಂದ್ರ ಅವರು ತಕ್ಷಣ ಮುಖ್ಯಮಂತ್ರಿಯವರ ಕ್ಷಮೆ ಕೇಳಬೇಕು ಅಂತೇಳಿ ಸಚಿವ ಸಂತೋಷ್ ಲಾಡ್ ಕುಟುಕಿದ್ದಾರೆ.

ಅದೇನೇ ಇರ್ಲಿ, ನೇಹಾ ಹಿರೇಮಠ ಕೊಲೆ ಪ್ರಕರಣ ರಾಜಕೀಯ ತಿರುವು ಪಡ್ಕೊಂಡಿದೆ. ಇದ್ರ ಮಧ್ಯೆಯೂ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಹಾಗಾದ್ರೆ ಸಚಿವ ಸಂತೋಷ್ ಲಾಡ್ ಅವರ ಹೇಳಿಕೆಗಳ ಬಗ್ಗೆ ನೀವೇನಂತಿರಾ?

Share.
Leave A Reply

Exit mobile version