ದಾವಣಗೆರೆ : ವಿಶ್ವ ಪರಿಸರ ದಿನದ ಅಂಗವಾಗಿ ದಾವಣಗೆರೆ ಪ್ರಧಾನ ಅಂಚೆ ಕಛೇರಿಯ ಆವರಣದಲ್ಲಿ ಇಂದು ಪರಿಸರ ದಿನಾಚರಣೆ ಆಚರಿಸಲಾಯಿತು. ಅಂಚೆ ಅಧೀಕ್ಷಕ ಚಂದ್ರಶೇಖರ್ ಗಿಡಕ್ಕೆ ನೀರೆರುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ನಂತರ ಮಾತನಾಡಿ, ಜೂ.೫ಕ್ಕೆ ಮಾತ್ರ ಪರಿಸರ ದಿನಾಚರಣೆ ಮಾಡಬೇಡಿ ವರ್ಷಪೂರ್ತಿ ಪರಿಸರದ ಬಗ್ಗೆ ಅರಿವಿರಲಿ. “ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ” ಎನ್ನುವ ವೇದವಾಕ್ಯದೊಂದಿಗೆ ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಅಧೀಕ್ಷಕ ನರೇಂದ್ರ ನಾಯ್ಕ್ ಕೆ.ಎಮ್, ಪ್ರಧಾನ ಅಂಚೆ ಪಾಲಕ ಓಂಕಾರಮೂರ್ತಿ ಎಮ್, ಅಂಚೆ ನಿರೀಕ್ಷಕ ಸ್ವಾಮಿ ಜೆ ಡಿ ಹಾಗೂ ವಿ ಅಶ್ವತ್ಥ್ ಹಾಗೂ ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ ಹಾಗೂ ದಾವಣಗೆರೆ ಅಂಚೆ ವಿಭಾಗೀಯ ಸಿಬ್ಬಂದಿ ಉಪಸ್ಥಿತಿರಿದ್ದರು.