ಹೊನ್ನಾಳಿ : ತಾಲೂಕಿನ ಹರಳಹಳ್ಳಿ ಗ್ರಾಮದ ರೈತ ಡಿಕೆ ಕಡೂರಪ್ಪ ಬಿನ್ ಕಾಳಿಂಗಪ್ಪ 45 ವರ್ಷ ಸಾಲಭಾದೆಯಿಂದ ತಾಳಲಾರದೆ ಮಂಗಳವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲೂಕಿನ ದೇವನಾಯಕನಹಳ್ಳಿ ಸಹಕಾರ ಸಂಘದಲ್ಲಿ 40,000 ಹಾಗೂ ಖಾಸಗಿ ವ್ಯಕ್ತಿಗಳಿಂದ ಐದಾರು ಲಕ್ಷ ಸಾಲ ಮಾಡಿದ್ದರು. ಕಳೆದ ಎರಡು ವರ್ಷದಿಂದ ಮಳೆ ಇಲ್ಲದೇ ಬರಗಾಲ ಎದುರಿಸಲು ಆಗದ ಕಾರಣ ವಿಷ ಸೇವಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.