
ನಂದೀಶ್ ಭದ್ರಾವತಿ, ದಾವಣಗೆರೆ
ದಾವಣಗೆರೆ ಜಿಲ್ಲೆ ಜಿಲ್ಲಾಧಿಕಾರಿಯಾಗಿ ಡಾ.ಎಂ.ವಿ.ವೆಂಕಟೇಶ್ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಸದಾ ಹೊಸತನಕ್ಕೆ ಹೆಸರುವಾಗಿರುವ ಡಾ.ಎಂ.ವಿ.ವೆಂಕಟೇಶ್ ಬಡವರ ಪರವಾಗಿದ್ದು, ಕಾನೂನು ನಿಯಮಗಳನ್ನು ಪಾಲಿಸುವ ಮೂಲಕ ಜನಮನ ಗೆದ್ದಿದ್ದಾರೆ. ಈ ಹಿಂದೆ ಮಂಡ್ಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ವೇಳೆ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಮತ್ತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಂತೆಯೇ ದಾವಣಗೆರೆ ಡಿಸಿಯಾಗಿ ಕೆಲಸ ಮಾಡುವ ವೇಳೆ ಎಲ್ಲ ತಾಲೂಕುಗಳಲ್ಲಿಯೂ ಮೂಲ ಸೌಕರ್ಯವನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ. ಆಡಳಿತವನ್ನು ಚುರುಕುಗೊಳಿಸುವಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ.
ರೈತರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದನೆ, ಕೇವಲ ಜಿಲ್ಲಾಮಟ್ಟದ ಅಧಿಕಾರಿಗಳು ಮಾತ್ರವಲ್ಲದೆ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ಮೇವಿನ ವ್ಯವಸ್ಥೆ, ರೈತರು, ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿರುವುದು ಇವರ ವಿಶೇಷ.
ಒಟ್ಟಾರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇವರ ಅವಧಿಯಲ್ಲಿ ಶ್ರಮವಹಿಸಿದ್ದಾರೆ.


ಬೆಂಗಳೂರು(ಗ್ರಾಮೀಣ) ಜಿಲ್ಲೆಯ ನೆಲಮಂಗಲ ತಾಲೂಕಿನ ಮಹದೇವಪುರದ ಡಾ. ಎಂ ವಿ ವೆಂಕಟೇಶ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಡಾಕ್ಟರೇಟ್ ಪದವಿ ಪಡೆದರು. ಬಳಿಕ ಜನರಲ್ ಮೆಡಿಸಿನ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2009 ರಲ್ಲಿ ಅವರು ಭಾರತೀಯ ಆಡಳಿತ ಸೇವೆಗೆ ಸೇರಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದರು. ನಂತರ 2013ರಲ್ಲಿ ಮಂಗಳೂರು ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ರಾಮನಗರದಲ್ಲಿ ಸಿಇಒ ಆಗಿ ಸೇವೆ ಸಲ್ಲಿಸಿದ ರೇಷ್ಮೆ ಕೃಷಿ, ತೋಟಗಾರಿಕೆ, ಕೃಷಿ ಮತ್ತು ನರೇಗಾನಂತಹ ಕಾರ್ಯಕ್ರಮಗಳನ್ನು ನೀಡಿದ್ದರು. ಈ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮೆಚ್ಚುಗೆ ಪಡೆದಿದ್ದಾರೆ.ರಾಮನಗರ ಜಿಲ್ಲೆಯನ್ನು ಬಯಲು ಶೌಚ ಮುಕ್ತಗೊಳಿಸಿರುವುದು ವಿಶೇಷ.
ರಾಜ್ಯದಲ್ಲಿಯೇ ಅತಿ ಹೆಚ್ಚು ರೈತರ ಅನುಕೂಲಕ್ಕಾಗಿ 50000 ಗೋಶಾಲೆಗಳ ನಿರ್ಮಾಣ ಮಾಡಿರುವುದು ಇವರ ಆಡಳಿತಕ್ಕೆ ಹಿಡಿದ ಕೈಗನ್ನಡಿ. 2014-16 ರಿಂದ ಚಿಕ್ಕಬಳಾಪುರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಕಾಲದಲ್ಲಿ ನಂ-1 ಮಾಡಿದ ಪ್ರಶಸ್ತಿ ಪಡೆದಿದ್ದಾರೆ.
2016-19 ರಿಂದ ಹಾವೇರಿಯಲ್ಲಿ ಜಿಲ್ಲಾಧಿಕಾರಿಯಾಗಿ ರಾಜ್ಯ ಪರಿಸರ ಪ್ರಶಸ್ತಿ ಪಡೆದಿದ್ದರು.ಜಿಲ್ಲಾ ಕಾರಾಗೃಹದಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿದ್ದಕ್ಕಾಗಿ ಮತ್ತು ಅನೇಕ ಹಿತಚಿಂತಕ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಸಾರ್ವಜನಿಕ ಹೀರೋ ಎಂದು ಘೋಷಿಸಲಾಯಿತು.
2019 ರಿಂದ 2020 ರ ಅವಧಿಯಲ್ಲಿ ಅವರು ತೋಟಗಾರಿಕೆ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಪರಿಸರ ಸ್ನೇಹಿ ಕ್ರಮಗಳನ್ನು ಪರಿಚಯಿಸುವ ಮೂಲಕ ಲಾಲ್-ಬಾಗ್ನ್ನು ಕಾರ್ಬನ್ ಮುಕ್ತ ಉದ್ಯಾನವನವನ್ನಾಗಿ ಮಾಡಿದರು. 2020 – 2021 ರಿಂದ ಅವರು ಮಂಡ್ಯ ಜಿಲ್ಲೆಯಲ್ಲಿ ಡೆಪ್ಯುಟಿ ಕಮಿಷನರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಕಾಲದಲ್ಲಿ ಜಿಲ್ಲೆಯನ್ನು ನಂ 1 ಮಾಡಿದ್ದಕ್ಕಾಗಿ ಪ್ರಶಸ್ತಿ ಪಡೆದಿದ್ದರು.
ಫೆಬ್ರವರಿ-2021 ರಿಂದ ಏಪ್ರಿಲ್ 23 ರವರೆಗೆ ಕರ್ನಾಟಕ ಸರ್ಕಾರದ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಮತ್ತು ಕರ್ನಾಟಕ ರಾಜ್ಯದಲ್ಲಿ ಪಿಎಮ್ಎಸ್ಕೆವೈ ಡಬ್ಬ್ಲೂಡಿಸಿ 2.0ನ್ನು ಕಾರ್ಯಗತಗೊಳಿಸುವುದಕ್ಕಾಗಿ ವಿಶ್ವಬ್ಯಾಂಕ್ ಸಹಾಯದ ಬಹುಮಾನ ಪಡೆದಿದ್ದಾರೆ.
ರಾಜ್ಯ ಮಟ್ಟದ ನೋಡಲ್ ಏಜೆನ್ಸಿಯ ಯೋಜನಾ ನಿರ್ದೇಶಕರು ಮತ್ತು ರೈತ ಉತ್ಪಾದಕ ಸಂಸ್ಥೆಗೆ ಏಕರೂಪದ ಬ್ರ್ಯಾಂಡಿAಗ್ನ ಅಧ್ಯಕ್ಷರಾಗಿ ಜಲಾನಯನ ಆಯುಕ್ತರಾಗಿ ಜಿಒಕೆ ಪದನಿಮಿತ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ರಾಜ್ಯದಲ್ಲಿ ಎಫ್ಪಿಒ ಗಳನ್ನು ಉತ್ತೇಜಿಸಲು ಮತ್ತು ಕರ್ನಾಟಕ ರಾಜ್ಯದ ರೈತರ ಉತ್ಪಾದಕ ಸಂಸ್ಥೆಗೆ ಹೊಸ ಉತ್ತೇಜನ ನೀಡಿದ್ದರು. ನೀಡುವುದಕ್ಕಾಗಿ ಸ್ವೀಕರಿಸಿದರು.
ಡಾ.ವೆಂಕಟೇಶ್ ಎಂ.ವಿ ಅವರ ನೇತೃತ್ವದಲ್ಲಿ ಕರ್ನಾಟಕದ ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಾಜೆಕ್ಟ್’ದಿ ಲ್ಯಾಂಡ್ ರಿಸೋರ್ಸ್ ಇನ್ವೆಂಟರಿ’ (ಎಲ್ಆರ್ಐ) “ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ 2023 ರ ಪ್ರಧಾನಮಂತ್ರಿ ಪ್ರಶಸ್ತಿ” ಪಡೆದಿದ್ದಾರೆ. ಇನ್ನು ದಾವಣಗೆರೆ ಜಿಲ್ಲೆ ಜಿಲ್ಲಾಧಿಕಾರಿಯಾಗಿ, ಸಶಸ್ತ್ರ ಪಡೆಗಳ ಸೇವೆಗೆ ಅತ್ಯುತ್ತಮ ಕೊಡುಗೆಗಾಗಿ ಕರ್ನಾಟಕ ರಾಜ್ಯಪಾಲರ ಕಚೇರಿಯ ರಾಜಭವನದ ಗಾಜಿನ ಮನೆಯಲ್ಲಿ ಸಶಸ್ತ್ರ ಪಡೆಗಳ ದಿನಾಚರಣೆ ಸಂದರ್ಭದಲ್ಲಿ ಸೈನಿಕ ಕಲ್ಯಾಣ ಇಲಾಖೆಯಿಂದ ವಿಶೇಷ ಪ್ರಶಸ್ತಿಯ ಸ್ವೀಕರಿಸಿದ್ದರು. ಎಲ್ಲಾ ವೈಜ್ಞಾನಿಕ ಮತ್ತು ತಾಂತ್ರಿಕ ನಿಸರ್ಗ ಪ್ರೇಮಿಗಳಾಗಿರುವ ಅವರು ಹೊಸ ವಿಷಯಗಳನ್ನು ಅನ್ವೇಷಿಸಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ. ಒಟ್ಟಾರೆ ಡಾ.ವೆಂಕಟೇಶ್ ಜನಪರ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದು, ದಾವಣಗೆರೆಯಿಂದ ನಿರ್ಗಮಿಸುತ್ತಿದ್ದಾರೆ.
——
ದಾವಣಗೆರೆ ಡಿಸಿಯಾಗಿದ್ದ ಡಾ.ಎಂ.ವಿ,ವೆಂಕಟೇಶ್ ಜನಪರ ಕೆಲಸ ಮಾಡಿದ್ದು, ಸರಕಾರದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ತಮ್ಮದೇ ಪಾತ್ರವಹಿಸಿದ್ದಾರೆ. ಯೋಗ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದಾರೆ. ಅವರು ಕೆಲಸ ಮಾಡಿದ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಹೊಸತನದ ಹಾದಿಯಲ್ಲಿ ಅವರು ನಡೆದಿದ್ದಾರೆ. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
– ವಾಸುದೇವ ರಾಯ್ಕರ್, ಉದ್ಯಮಿ