


ದಾವಣಗೆರೆ:
ನಗರದ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮುದಾಯ ಭವನದಲ್ಲಿ ಇತ್ತೀಚಿಗೆ ಜಿಲ್ಲಾ ನೇಕಾರ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು.
ಶ್ರೀಕಾಂತ್ ಮಲಕಪ್ಪ ಕಾಕಿ(ಜಿಲ್ಲಾಧ್ಯಕ್ಷ), ವಿ.ಎಸ್.ನರಸಿಂಹಮೂರ್ತಿ(ಪ್ರಧಾನ ಕಾರ್ಯದರ್ಶಿ), ಗಿರಿಮಲ್ಲೇಶ್ ಕನಕಿ(ಖಜಾಂಚಿ) ಹಾಗೂ ಉಪಾಧ್ಯಕ್ಷರಾಗಿ ಬೊಮ್ಮ ತಿಪ್ಪೇಸ್ವಾಮಿ, ರಮೇಶ ಜಂಬಣ್ಣ ಗಣಪ, ಶ್ರೀನಿವಾಸ್ ಚಿನ್ನಿಕಟ್ಟಿ, ರಾಮಚಂದ್ರ.ಜಿ.ಹೆಚ್., ಚಂದ್ರಶೇಖರ್.ಸಿ., ಧರ್ಮರಾಜ್ ಏಕಬೋಟೆ ಅವರನ್ನು ಆವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನೇಕಾರ ಒಕ್ಕೂಟದ ಮಾಜಿ ಅಧ್ಯಕ್ಷ ಎಸ್.ಕೆ.ಬಸವರಾಜ, ಮುಖಂಡರಾದ ಗುಬ್ಬಿ ಬಸವರಾಜ, ಪ್ರೋ.ಸತ್ಯನಾರಾಯಣ, ಬೆನಕಲ್ಲಪ್ಪ ಬುಗುಡೆ, ಬಿ.ಎಸ್.ಕೆ.ಪರಶುರಾಮ, ಮಂಜುನಾಥ ಪಣೆವರ, ಐರಣಿ ನಿಂಗಪ್ಪನವರ, ಮಂಜುನಾಥ ಹಳೇಮನಿ, ಪರಶುರಾಮ ನಂದಿಗಾವಿ, ಹನುಮಂತಪ್ಪ ಎಸ್.ಓ.ಜಿ, ರಮೇಶ ಜಂಬಗಿ, ಶ್ರೀನಿವಾಸ ಇಂಡಿ, ಚಂದ್ರಶೇಖರ್ ಸಿ, ಪ್ರಶಾಂತ ಕಾಕಿ, ಬಸವರಾಜ ಎಲಿ, ಕುಶ ಅಮಾಸಿ, ಹನುಮಂತ ಕಾಕಿ, ಧನಲಕ್ಷಿ ಕಾಕಿ, ಕವಿತಾ ಕಾಕಿ, ಅನ್ನಪೂರ್ಣ ಪಣೆವರ, ರಾಘವೇಂದ್ರ ಪಣೆವರ, ಗಣೇಶ ಪಣೆವರ, ಗೋವಿಂದ ಪಣೆವರ, ವೆಂಕಟೇಶ ಕೆ.ಎನ್, ರಮೇಶ, ಹರಿಶ, ಪವನಕುಮಾರ ಬುರಡೆ, ಸಂದೀಪ್ ಕಾಕಿ, ಪ್ರಕಾಶ ಸೇರಿದಂತೆ ಮತ್ತಿತರು ಇದ್ದರು.
