ದಾವಣಗೆರೆ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 10 ಅಭ್ಯರ್ಥಿಗಳ ಗೆಲುವಿನೊಂದಿಗೆ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.
ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಆಡಳಿತ ಮಂಡಳಿಯನ್ನು ಈ ಬಾರಿ ಕಾಂಗ್ರೆಸ್ ಸಂಪೂರ್ಣ ತನ್ನ ವಶ ಮಾಡಿಕೊಂಡಿದ್ದು, ಬಿಜೆಪಿ ಕೇವಲ 3 ಸ್ಥಾನಗಳಿಗೆ ತೃಪ್ತಿಪಡುವಂತಾಗಿದೆ.
13 ಸದಸ್ಯ ಬಲದ ನಿರ್ದೇಶಕ ಮಂಡಳಿಗೆ ಈಗಾಗಲೇ ಕಾಂಗ್ರೆಸ್‌ನ ಜೆ.ಆರ್.ಷಣ್ಮುಖಪ್ಪ ಮತ್ತು ಬಿಜೆಪಿ ವೇಣುಗೋಪಾಲ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11 ಸ್ಥಾನಗಳಿಗೆ ಗುರುವಾರ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿರುಸಿನ ಮತದಾನ ನಡೆಯಿತು. ಸಂಜೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೆ ಗೆದ್ದ ನಿರ್ದೇಶಕರ ಬೆಂಬಲಿಗರು ಕುಣಿದು ಕುಪ್ಪಳಿಸಿದರು.
ಎ ವರ್ಗದ ದಾವಣಗೆರೆ ತಾಲ್ಲೂಕು ಭಾಗ-01 ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟುಗಳ ಕ್ಷೇತ್ರದಿಂದ ಬಿ.ಶೇಖರಪ್ಪ 15 ಮತ ಪಡೆದ ಆಯ್ಕೆಗೊಂಡರೆ ಎದುರಾಳಿ ಕೆ.ಎಸ್.ಮಂಜುನಾಥ್ 09 ಮತಗಳಿಸಿ ಪರಾಭವಗೊಂಡರು.
ಎ ವರ್ಗದ ದಾವಣಗೆರೆ ತಾಲ್ಲೂಕು ಭಾಗ-02 ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟುಗಳ ಕ್ಷೇತ್ರದಿಂದ ಬಿ.ಕರಿಬಸಪ್ಪ 19 ಮತಗಳಿಸಿ ಜಯಶಾಲಿಯಾದರೆ ಕರಿಬಸಪ್ಪ ಅವರಿಗೆ ಬೆಂಬಲ ಸೂಚಿಸಿ ಚುನಾವಣಾ ಕಣದಿಂದ ನಿವೃತ್ತರಾಗಿದ್ದ ಪ್ರತಿಸ್ಪರ್ಧಿ ಕೆ.ಎಂ.ಅಶೋಕ್ ಕೇವಲ 1 ಮತಗಳಿಸಿ ಸೋಲು ಕಂಡರು.
ಎ ವರ್ಗದ ಹರಿಹರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟುರುಗಳ ಕ್ಷೇತ್ರದಿಂದ ಡಿ.ಕುಮಾರ್ 16 ಮತಗಳಿಸಿ ಆಯ್ಕೆಯಾದರೆ ಮರು ಆಯ್ಕೆ ಬಯಸಿದ್ದ ಬಿ.ಹಾಲೇಶಪ್ಪ 13 ಮತ ಪಡೆದು ಪರಾಭವಗೊಂಡರು.
ಎ ವರ್ಗದ ಚನ್ನಗಿರಿ ತಾಲ್ಲೂಕು ಭಾಗ-01 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟುರುಗಳ ಕ್ಷೇತ್ರದಿಂದ ಜೆ.ಎನ್.ಸ್ವಾಮಿ 15 ಮತಗಳಿಸಿ ಆಯ್ಕೆಯಾದರೆ ಪ್ರತಿಸ್ಪರ್ಧಿ ಜೆ.ಎಸ್.ದೀಪಕ್ 5 ಮತಗಳಿಸಿ ಸೋಲು ಒಪ್ಪಿಕೊಂಡರು.
ಎ ವರ್ಗದ ಚನ್ನಗಿರಿ ತಾಲ್ಲೂಕು ಭಾಗ-02 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟುರುಗಳ ಕ್ಷೇತ್ರದಿಂದ ಜಿ.ಎಸ್.ಸಂತೋಷ್ 12 ಮತಗಳಿಸಿದರೆ ಎದುರಾಳಿ ಕೆ.ನಾಗರಾಜ್ 7 ಮತಗಳಿಸಿ ಪರಾಭವಗೊಂಡರು.
ಎ ವರ್ಗದ ಹೊನ್ನಾಳಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟರುಗಳ ಕ್ಷೇತ್ರದಿಂದ ಡಿ..ಎಸ್.ಸುರೇಂದ್ರ 19 ಮತಗಳಿಸಿದರೆ, ಎದುರಾಳಿ ಜಿ.ರಾಮನಗೌಡ 3 ಮತಗಳಿಸಿ ಸೋಲುಕಂಡರು.
ಎ ವರ್ಗದ ನ್ಯಾಮತಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡೆಲಿಗೇಟುರುಗಳ ಕ್ಷೇತ್ರದಿಂದ ಡಿ.ಜಿ.ವಿಶ್ವನಾಥ್ 10 ಮತ ಪಡೆದರೆ ಡಿ.ಬಿ.ಗಂಗಪ್ಪ 3 ಮತಗಳಿಸಿ ಸೋಲೊಪ್ಪಿಕೊಂಡರು.
ಸಿ ವರ್ಗದ ದಾವಣಗೆರೆ ಜಿಲ್ಲೆ ಪಟ್ಟಣ ಸಹಕಾರ ಬ್ಯಾಂಕುಗಳ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಅಭಿವೃದ್ಧಿ ಸಹಕಾರಿ ಬ್ಯಾಂಕುಗಳ ಡೆಲಿಗೇಟರುಗಳ ಕ್ಷೇತ್ರದಿಂದ ಕೋಗುಂಡಿ ಬಕ್ಕೇಶಪ್ಪ 26 ಮತಗಳಿಸಿ ಆಯ್ಕೆಯಾದರೆ ಎನ್.ಎ.ಮುರುಗೇಶ್ 17 ಮತಗಳಿಸಿ ಸೋಲು ಕಂಡರು.
ಡಿ.ವರ್ಗ ಭಾಗ 01 ಹಾಲು ಉತ್ಪಾದಕರ ಸಹಕಾರ ಸಂಘಗಳ ಡೆಲಿಗೇಟರುಗಳ ಕ್ಷೇತ್ರದಿಂದ ಸುರೇಶ್ ಕೆಂಚಮ್ಮನಹಳ್ಳಿ 77 ಮತಗಳನ್ನು ತೆಗೆದುಕೊಂಡು ಎದುರಾಳಿ ಜಗದೀಶಪ್ಪ ಬಣಕಾರ್ ರನ್ನು 52 ಮತಗಳ ಅಂತರದಲ್ಲಿ ಸೋಲಿಸಿದರು.
ಡಿ.ವರ್ಗ ಭಾಗ-2 ಹಾಲು ಉತ್ಪಾದಕರ ಸಹಕಾರ ಸಂಘಗಳ ಡೆಲಿಗೇಟರುಗಳ ಕ್ಷೇತ್ರದಿಂದ ಎಚ್.ಕೆ.ಬಸಪ್ಪ 77 ಮತಗಳಿಸಿ ಆಯ್ಕೆಯಾದರೆ ಪ್ರತಿಸ್ಪರ್ಧಿ ಬಿ.ಜಿ.ಬಸವರಾಜಪ್ಪ 24 ಮತಗಳಿಸಿ ಪರಾಭವಗೊಂಡರು.
ಇ ವರ್ಗ ದಾವಣಗೆರೆ ಜಿಲ್ಲೆ ಇತರೆ ಸಹಕಾರ ಸಂಘಗಳ ಡೆಲಿಗೇಟರುಗಳ ಕ್ಷೇತ್ರದಿಂದ ಮುದೇಗೌಡರ ಗಿರೀಶ್ 82 ಮತಗಳಿಸಿದರೆ ಗಿರೀಶ್ ಅವರಿಗೆ ಬೆಂಬಲ ಸೂಚಿಸಿ ಕಣದಿಂದ ನಿವೃತ್ತರಾಗಿದ್ದ ಬೇತೂರು ರಾಜಣ್ಣ 8 ಮತಗಳಿಸಿ ಪರಾಭವಗೊಂಡರು.