
ಶಿವಮೊಗ್ಗ,ಜೂ.12: ಆ್ಯಕ್ಟಿಂಗ್ ಸ್ಕೂಲ್ ಆಫ್ ಕರ್ನಾಟಕದ (ಎಎಸ್‍ಕೆ) ಚೆಲುವರಂಗದ ವತಿಯಿಂದ 35 ದಿನಗಳ ಅಭಿನಯ ಶಿಬಿರವನ್ನು ಜೂ.16ರಿಂದ ಜೂ.21ರವರೆಗೆ ಶಿವಮೊಗ್ಗದ ಗೋಪಿಸರ್ಕಲ್ ಬಳಿಯಿರುವ ಲಕ್ಷ್ಮೀ ಗ್ಯಾಲಕ್ಸಿಯ 2ನೇ ಮಹಡಿಯಲ್ಲಿರುವ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗನಿರ್ದೇಶಕ ಹಾಗೂ ನಟ ಅಜಯ್ ನಿನಾಸಂ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಬಿರದಲ್ಲಿ 30ಜನರಿಗೆ ಮಾತ್ರ ಅವಕಾಶವಿದ್ದು, 17 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಶಿಬಿರದಲ್ಲಿ ನಾಟ್ಯಶಾಸ್ತ್ರ, ರಸಭಾವಗಳು, ಸಿನಿಮಾದಲ್ಲಿ ನಟನೆ ಮಾಡುವುದು ಹೇಗೆ, ಧಾರವಾಹಿ ನಟ ನಟಿಯ ತಯಾರಿ, ಭಾಷೆ, ಸಂಸ್ಕøತಿ, ಜಾನಪದ, ಸಾಹಿತ್ಯ, ಸಂಗೀತ, ಚಿತ್ರಕಲೆ ಇವುಗಳನ್ನು ನಟ, ನಟಿಯರು ಬಳಸುವುದು ಹೇಗೆ ? ಸಂದರ್ಶನಕ್ಕೆ ತಯಾರಾಗುವುದು ಹೇಗೆ? ಸೇರಿದಂತೆ ಇತರೆ ಕಲಿಕೆಗಳನ್ನು ತರಬೇತಿ ನೀಡಲಾಗುವುದು ಎಂದರು.
ಪ್ರತಿದಿನ ಸಂಜೆ 5.30ರಿಂದ 9ಗಂಟೆಯವರೆಗೆ ಅನುಭವಿ ಶಿಕ್ಷಕರು ಶಿಬಿರದಲ್ಲಿ ತರಬೇತಿ ನೀಡಲಿದ್ದಾರೆ ಎಂದ ಅವರು ಭಾಗವಹಿಸುವವರಿಗೆ 5000 ರೂ. ಶುಲ್ಕವಿದೆ ಎಂದರು.
ಜುಲೈ 22ರಿಂದ ನಿರಂತರ ತರಗತಿಗಳು ನಡೆಯಲಿದ್ದು, 5ವರ್ಷದಿಂದ 10 ವರ್ಷ ಸಬ್‍ಜ್ಯೂನಿಯರ್, 11ರಿಂದ 15 ವರ್ಷದ ಜ್ಯೂನಿಯರ್ ಹಾಗೂ 17 ವರ್ಷದಿಂದ ಮೇಲ್ಪಟ್ಟವರಿಗೆ ಸೀನಿಯರ್ ವಿಭಾಗವಿದೆ. ಹಾಗೆಯೇ ವಾರಾಂತ್ಯ ತರಗತಿಗಳು ಇದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ನಡೆಯಲಿದೆ ಎಂದರು. ಜೂ.14ರಂದು ಬೆಳಿಗ್ಗೆ 10ಕ್ಕೆ ನಟ ಶಿವಮೊಗ್ಗ ರಘು ಶಿಬಿರ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಂತರ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು. ಹೆಸರು ನೊಂದಾಯಿಸಿಕೊಳ್ಳುವವರು 8088203972 ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು. ಗೋಷ್ಠಿಯಲ್ಲಿ ಪ್ರಜ್ವಲ್, ಅರವಿಂದ್, ಸಂದೀಪ್,ಅಭಿ, ಯೋಗೀಶ್, ಸಂತೋಷ್ ಉಪಸ್ಥಿತರಿದ್ದರು.
