ದಾವಣಗೆರೆ : ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ಸಾಹಿತ್ಯ ಹಾಗೂ ಸಂಗೀತದ ಅವಶ್ಯಕತೆ ಇದೆ ಮತ್ತು ಮಕ್ಕಳಿಗೆ ಸಂಗೀತದಿಂದ ಜ್ಞಾನ ಹೆಚ್ಚಿಸುತ್ತದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ ನ ದಾವಣಗೆರೆ ದಕ್ಷಿಣ ವಿಭಾಗದ ಅಧ್ಯಕ್ಷ ಡಾ. ರವಿಕುಮಾರ್ ಅಭಿಪ್ರಾಯಪಟ್ಟರು.

ನಗರದ ಪಿ. ಜೆ.ಬಡಾವಣೆಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ಜಿಲ್ಲೆ ಇವರ ಸಹಯೋಗದೊಂದಿಗೆ
ಆಯೋಜಿಸಲಾಗಿದ್ದ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು‌.

ಕಾಲೇಜಿನ ಪ್ರಾಂಶುಪಾಲರಾದ ಎನ್. ಶಿವಪ್ಪ ಮತ್ತು ಸರ್ಕಾರಿ ಬಾಲಕರ ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಪಿ. ರಾಮಪ್ಪ ವೇದಿಕೆಯಲ್ಲಿ ಇದ್ದರು, ಸಂಗೀತವನ್ನು ಶ್ರೀ ಶರಣಯ್ಯ ಎಂ. ಗುಡ್ಡದಮಠದ್ ಮತ್ತು ಸಂಗಡಿಗರು ಜಾನಪದ ಗೀತೆ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು‌ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉತ್ತರ ವಿಭಾಗದ ರುದ್ರಮ್ಮ ಇದ್ದರು.

ಸ್ವಾಗತವನ್ನು ಶ್ರೀ ಲಕ್ಕೇಶ್, ನಿರೂಪಣೆಯನ್ನು ತೆಲಗಿ ವಿರಭದ್ರಪ್ಪ, ವಂದನಾರ್ಪಣೆ ಯನ್ನು ಶಾಲೆಯ ಶ ಸರಸ್ವತಿ ಮತ್ತು ಶಿಕ್ಷಕರಾದ ಬಸಪ್ಪನವರು ನಡೆಸಿಕೊಟ್ಟರು. ಪದಾಧಿಕಾರಿಗಳಾದ ಶ್ರೀ ಎಂ ಅರ್. ಹರೀಶ್,ಶ್ರೀಮತಿ ದೀಪಾ, ಶ್ರೀಮತಿ ಅನ್ವಿತಾ ಶ್ರೀ ಬೀರಪ್ಪ ಇದ್ದರು.

Share.
Leave A Reply

Exit mobile version