
ಚನ್ನಗಿರಿ: ಶತಮಾನದ ಶಿವರಶರಣರು ಅನುಭವ ಮಂಟಪದ ಮೂಲಕ ವಚನ ಸಾಹಿತ್ಯವನ್ನು ರಚಿಸಿ ಸಮಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಸ್ವಾಮೀಜಿ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಮಹಾಶಿವಯೋಗಿ ಗುರುಸಿದ್ದರಾಮೇಶ್ವರರ ಜಯಂತ್ಯೋತ್ಸವ ಹಾಗೂ ೮೫೬ ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಣ, ಅಸ್ತಿ ಮತ್ತು ಹೆಣ್ಣೆಗೆ ಸಂಬಂಧಪಟ್ಟ ವಿಚಾರಗಳೇ ಇಂದು ನ್ಯಾಯಾಲಯದಲ್ಲಿ ಹೆಚ್ಚು ಕೇಸುಗಳು ನಡೆಯುತ್ತಿವೆ. ಧರ್ಮದ ಹಾದಿಯಲ್ಲಿ ಸಾಗಿದಾಗ ಕಾನೂನು ಅಗತ್ಯವಿರುವುದಿಲ್ಲ. ಸಿದ್ದರಾಮೇಶ್ವರರು ಮಾನವೀಯತೆ ಸಾರ ಸಾರಿದ ಮಹಾತ್ಮರು, ಜನಪರ, ಸಮಾಜ ಮುಖಿ, ರಾಷ್ಟçಕ್ಕೆ ಬೇಕಾದ ಕೆಲಸದಿಂದ ಸಿದ್ದರಾಮೇಶ್ವರರು ಕಾಯಕ ಮಾಡಿದ ಸಿದ್ದಪುರುಷರಾಗಿದ್ದಾರೆ. ಅಲ್ಲಮ ಪ್ರಭುಗಳು ಪ್ರಥಮ, ಚನ್ನಬಸವಣ್ಣ ದ್ವೀತಿಯ ಹಾಗೂ ತೃತಿಯ ಸ್ಥಾನದಲ್ಲಿ ಸಿದ್ದರಾಮರು ನಿಲ್ಲುತ್ತಾರೆ. ದೇವರಿಗೆ ರೂಪವಿಲ್ಲ, ಭಕ್ತಿಯಿಂದ ಕಾಯಕ ಮತ್ತು ದಾಸೋಹದ ಮಹತ್ವ ಸಾರಿದ ಮಹಾತ್ಮ ಸಂತರಾಗಿದ್ದಾರೆ ಎಂದು ತಿಳಿಸಿದರು.


ಪ್ರಧಾನ ಸಿವಿಲ್ ನ್ಯಾಯದೀಶರಾದ ಸಿದ್ದಲಿಂಗಯ್ಯ ಬಿ.ಗಂಗಾಧರಮಠ್, ನ್ಯಾಯಾಧೀಶರಾದ ವಿಶ್ವನಾಥ್ ವಿ ಮುಗುತಿ, ಡಾ.ಕುಂ.ಇಂಚರ, ಉದ್ಯಮಿ ಟಿ.ಎಸ್.ಚಿದಾನಂದ್, ಪ್ರಗತಿಪರ ರೈತ ಅವರೆಗೆರೆ ಜಿ.ಎಸ್.ಪರಮೇಶ್ವರಪ್ಪ, ವಕೀಲರ ಸಂಘದ ಅಧ್ಯಕ್ಷ ಎಂ.ರಾಜಪ್ಪ, ವಕೀಲ ತಿಪ್ಪೇಶ್ ಮಾತನಾಡಿದರು. ಸಿದ್ದನಮಠ ರಾಮಣ್ಣ, ಧನಂಜಯ್ಯ, ಚನ್ನಬಸಪ್ಪ, ಎಂ.ಬಿ.ನಾಗರಾಜ್ ಕಾಕನೂರು, ಚಂದೇಶ್, ಚಂದ್ರಣ್ಣ, ಶಿವಮೂರ್ತಿ ಇದ್ದರು.

