ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಆಯನೂರು ಬಳಿ ಇಂದು ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ ಹಳ್ಳಕೆ ಬಿದ್ದು ಪಲ್ಟಿಯಾದ ಘಟನೆ ನಡೆದಿದೆ.
ಘಟನೆಯ ವಿವರ:
ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಚಿತ್ರದುರ್ಗಕ್ಕೆ ಸೇರಿದ ಸ್ವಿಫ್ಟ್ ಡಿಸೈರ್ ಕಾರೊಂದು ಶಿವಮೊಗ್ಗದ ಕಡೆಯಿಂದ ಸಾಗರದ ಕಡೆಗೆ ಹೊರಟಿತ್ತು. ಆಯನೂರು ಬಳಿ ಇರುವ ಹಳ್ಳದ ಸಮೀಪ ಕಾರು ಕಂಟ್ರೋಲ್ ತಪ್ಪಿದೆ. ಪರಿಣಾಮ ಕಾರು ಪಕ್ಕದಲ್ಲಿದ್ದ ಹಳಕ್ಕೆ ಉರುಳಿದೆ.
ಘಟನೆಯಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಗಂಭೀರವಾಗಿದ್ದಾರೆ. ಇವರೆಲ್ಲಾ ಚಿತ್ರದುರ್ಗದಿಂದ ಸಾಗರಕ್ಕೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ. ಕಾರು ಕೆಳಕ್ಕೆ ಬಿಳುತ್ತಲೇ ಓಡಿ ಬಂದ ಸ್ಥಳಿಯರು ಹಾಗೂ ವಾಹನ ಸವಾರರು ಆಂಬುಲೆನ್ಸ್ ಕರೆಸಿಕೊಂಡು ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ.