ದಾವಣಗೆರೆ ; ರಾಜ್ಯದಲ್ಲಿ ಬಿಎಸ್ವೈ ಮತ್ತು ಬಿವೈ ರಾಘವೇಂದ್ರ ಮೋದಿ ಅಲೆ ಇದೆ.. ಹೆಚ್ಚು ಸೀಟು ಗೆದ್ದು ಮೀಸೆ ತೀಡ್ತೀವಿ ಅಂತಿದ್ದಾರೆ. ಆದ್ರೆ ಪರಿಸ್ಥಿತಿ ಹೀಗಿರೋವಾಗ್ಲೇ, ಮೈಸೂರು ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಡೆಸಿರೋ ಆಪರೇಷನ್ ಹಸ್ತ, ಬಿಜೆಪಿಗರ ಎದೆ ಬಡಿತವನ್ನ ಜೋರು ಮಾಡಿದೆ. ಅಷ್ಟೇ ಅಲ್ಲ, ಮೈಸೂರು ಮತ್ತು ಚಾಮರಾಜನಗರ ಎರಡೂ ಲೋಕಸಭಾ ಕ್ಷೇತ್ರಗಳನ್ನ ಗೆಲ್ಲೋಕೆ ಸಿಎಂ ಸಿದ್ರಾಮಯ್ಯ ಭರ್ಜರಿ ರಣತಂತ್ರ ಹೆಣೆದಿದ್ದಾರೆ. ಹಾಗಾದ್ರೆ ಏನದು ರಣತಂತ್ರ ಅಂದ್ರಾ..?
- ಮೈಸೂರು – ಚಾಮರಾಜ ನಗರ ಗೆಲ್ಲಲು ಸಿದ್ದು ಮಾಸ್ಟರ್ ಪ್ಲ್ಯಾನ್?
- ಈ 2 ಕ್ಷೇತ್ರಗಳ ಮೇಲ್ಯಾಕೆ ಸಿಎಂ ಅತಿಯಾದ ಮುತುವರ್ಜಿ?
- ಬೆಂಗಳೂರಷ್ಟೇ ಅಲ್ಲ, ಮೈಸೂರಲ್ಲೂ STS ಪ್ರಭಾವ?
ಮೈಸೂರು – ಚಾಮರಾಜ ನಗರ ಗೆಲ್ಲಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಸುಮಾರು 4 ದಿನಗಳ ಕಾಲ ತವರು ಜಿಲ್ಲೆಯಲ್ಲೇ ಸಿಎಂ ಸಿದ್ರಾಮಯ್ಯ ವಾಸ್ತವ್ಯ ಹೂಡಿದ್ದಾರೆ. ಈ ನಡುವೆ ಬರೀ ಈ ಎರಡು ಜಿಲ್ಲೆಗಳಲ್ಲ., ಈ ಸಲ ರಾಜ್ಯದಲ್ಲಿ ಮೋದಿ ಮತ್ತು ಬಿಜೆಪಿ ಅಲೆ ನೆಲಕ್ಕಚ್ಚಿದ್ದು ಕಾಂಗ್ರೆಸ್ 20ಕ್ಕೂ ಹೆಚ್ಚು ಸೀಟುಗಳನ್ನ ಗೆದ್ದೇ ಗೆಲ್ಲುತ್ತೆ ಅನ್ನೋ ಆತ್ಮವಿಶ್ವಾಸವನ್ನ ಸಿಎಂ ಸಿದ್ರಾಮಯ್ಯ ಹೊಂದಿದ್ದಾರೆ. ಹಲವು ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಸೇರಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂಬ ವರದಿಗಳು ಬಂದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತೀಚೆಗೆ ಮೈಸೂರು-ಕೊಡಗು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು, ಬೋರ್ಡ್ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ರು. ಈ ವೇಳೆ ಇವೆರಡೂ ಕಾಂಗ್ರೆಸ್ ಕ್ಷೇತ್ರಗಳು. ಮತ್ತೆ ನಮ್ಮ ‘ಕೈ’ಗೆ ಬರಲೇಬೇಕು, ಬರುತ್ತವೆ. ಹಿಂದಿನ ಬಾರಿ ಕೆಲವು ಕಾರಣಗಳಿಂದಾಗಿ ಅತ್ಯಂತ ಕಡಿಮೆ ಮತಗಳಿಂದ ನಮಗೆ ಹಿನ್ನೆಡೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಪರ ಯಾವ ಕಾರಣಗಳೂ ಇಲ್ಲ ಅಂತೇಳಿದ್ದಾರೆ.
ಮತ್ತೊಂದು ಕಡೆ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ನ ಪ್ರಮುಖ ನಾಯಕರುಗಳಿಗೆ ಕಾಂಗ್ರೆಸ್ ಗಾಳ ಹಾಕಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಆಪ್ತ ಹೆಚ್.ವಿ.ರಾಜೀವ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅನ್ಯ ಪಕ್ಷಗಳ ವಿವಿಧ ಮುಖಂಡರುಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದ ಕುರಿತು ಮಾಧ್ಯಮಗಳ ಜೊತೆಗೆ ಮಾತಾಡಿರೋ ಸಿಎಂ ಸಿದ್ರಾಮಯ್ಯ, ಕರ್ನಾಟಕದಲ್ಲಿ ಭಯದಿಂದ ಬಿಜೆಪಿ-ಜೆಡಿಎಸ್ ಒಂದಾಗಿದೆ. ಇವರನ್ನು ಜನತೆ ಸೋಲಿಸಬೇಕು. ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪಿ ಯಾವುದೇ ಷರತ್ತು ವಿಧಿಸದೇ ಕಾಂಗ್ರೆಸ್ ಸೇರಿದವರನ್ನು ಕಾಂಗ್ರೆಸ್ ಸ್ವಾಗತಿಸುತ್ತೆ ಎಂದಿದ್ದಾರೆ.
ಸ್ಥಾನಮಾನಕ್ಕಾಗಿ ಅಲ್ಲದೇ ಕಾಂಗ್ರೆಸ್ ಪಕ್ಷ ಬಿಜೆಪಿ ಬಿಡಲು ಅಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ ಹಾಗೂ ಪಕ್ಷ ಬಡವರ ಪರವಾಗಿದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಸೇರಿದ್ದಾರೆ ಅಂತೇಳಿದ್ದಾರೆ. ಪರಿಸ್ಥಿತಿ ಹೀಗಿರೋವಾಗ್ಲೇ, ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಭಾವಚಿತ್ರ ಇರೋದು ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ನಾಯಕರಾಗಿದ್ದ ಹೆಚ್.ವಿ.ರಾಜೀವ್ ಬುಧವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ಧಾರೆ. ಈ ಸಂಬಂಧ ಜಾಹೀರಾತು ಪ್ರಕಟಿಸಲಾಗಿತ್ತು. ಜಾಹೀರಾತಿನಲ್ಲಿ ಎಸ್.ಟಿ.ಸೋಮಶೇಖರ್ ಅವರ ಭಾವಚಿತ್ರವೂ ಇತ್ತು. ಬಿಜೆಪಿ ಆಡಳಿತದಲ್ಲಿ ಎಸ್.ಟಿ.ಸೋಮಶೇಖರ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ವೇಳೆ ಸೋಮಶೇಖರ್ ಜೊತೆ ರಾಜೀವ್ ಆಪ್ತರಾಗಿದ್ದರು. ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಎಸ್.ಟಿ.ಸೋಮಶೇಖರ್ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ಯಸಭಾ ಚುನಾವಣಾ ಸಂದರ್ಭದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದ್ದರು. ಈಗ ಎಸ್ಟಿಎಸ್ ನೇತೃತ್ವದಲ್ಲಿ ಆಪ್ತ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಚರ್ಚೆ ಹುಟ್ಟುಹಾಕಿದೆ.
ಇನ್ನ ಕರ್ನಾಟಕದ ಜನರ ಕಷ್ಟ ನಷ್ಟಗಳಿಗೆ ಕರಗದ ಕೇಂದ್ರ ಮೋದಿ ಸರ್ಕಾರದ ವಿರುದ್ಧ ಕನ್ನಡಿಗರು ಮುನಿಸಿಕೊಂಡಿದ್ದಾರೆ. ಕಳೆದ ಸಲ 25 ಬಿಜೆಪಿ ಎಂಪಿಗಳನ್ನ ಆರಿಸಿ ಕಳಿಸಿದ್ರೂ ಕರ್ನಾಟಕದ ನೆರೆ, ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ಮೋದಿ ಆಸಕ್ತಿ ತೋರಿಸಿಲ್ಲ.. ಅಚ್ಛೇದಿನದ ಹೆಸರಲ್ಲಿ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ.. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಿದೆ. LPG ಗ್ಯಾಸ್ ಸಿಲಿಂಡರ್ ಬೆಲೆ ಮಿತಿಮೀರಿ ಏರಿಕೆಯಾಗಿದೆ. ರಾಜಸ್ತಾನದಲ್ಲಿ 500 ರೂಪಾಯಿಗೆ ಒಂದು ಸಿಲಿಂಡರ್ ಕೊಡೋ ಬಿಜೆಪಿ ನಾಯಕರು ಕರ್ನಾಟಕದ ಜನರಿಗೆ ಅದ್ಯಾಕೆ 500 ರೂಪಾಯಿಗೆ ಕೊಡ್ತಾಯಿಲ್ಲ. ಕರ್ನಾಟಕದ ಜನ ದಡ್ಡರು, ಕೇವಲ ಗಾಳಿಯಲ್ಲಿ ಮೋದಿ ಕೈ ಬೀಸಿ ಹೋದ್ರೆ ಬಿಜೆಪಿಗೆ ವೋಟ್ ಹಾಕ್ತಾರೆ ಅಂತೇಳಿ ಬಿಜೆಪಿ ನಾಯಕರು ನಂಬಿದ್ದಾರಾ.? 2022ರೊಳಗೆ ರೈತರ ಆದಾಯವನ್ನ ಡಬಲ್ ಮಾಡ್ತೀವಿ ಅಂದ್ರೂ ಮಾಡಿಲ್ಲ. ಮೊಬೈಲ್ ರೀಚಾರ್ಜ್, ಡೇಟಾ ದರ ಹೆಚ್ಚಿಸಲಾಗಿದೆ. ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳಲು ಕೂಡ ಚಾರ್ಜ್ ಮಾಡಲಾಗುತ್ತಿದೆ. ಬಡವರ ಪರ ನಿಲ್ಲದ ಬಿಜೆಪಿ ಮತ್ತು ಮೋದಿ ಅಲೆ ಕರ್ನಾಟಕದಲ್ಲಿ ನೆಲಕ್ಕಚ್ಚಿದೆ. ಹೀಗಾಗಿ ಈ ಸಲ ಕರ್ನಾಟಕದಲ್ಲಿ ಕಾಂಗ್ರೆಸ್ ಎಂಪಿ ಸೀಟುಗಳನ್ನ ಹೆಚ್ಚು ಗೆಲ್ಲುತ್ತೆ ಅಥವಾ ಬಿಜೆಪಿ ಗೆಲ್ಲೊತ್ತೋ ಎಂದು ಕಾದು ನೋಡಬೇಕು