Author: davangerevijaya.com

ದಾವಣಗೆರೆ. ಕಾಂಗ್ರೆಸ್ ನಾಯಕರ ಮಕ್ಕಳು, ಮೊಮ್ಮಕ್ಕಳ ಆಸ್ತಿ ಕೂಡ ವಕ್ಫ್ಗೆ ಹೋಗಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಜಿಎಂಐಟಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನ ಆದೇಶವೊಂದರಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲದೇ ಇದ್ದರೆ ದಾಖಲು ಮಾಡಿದ್ದನ್ನು ರದ್ದುಪಡಿಸಲು ಅವಕಾಶ ಇದೆ. ವಕ್ಫ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಮಂತ್ರಿಗಳು ಬಿಜೆಪಿ ಪಾಲಿಟಿಕ್ಸ್ ಮಾಡುತ್ತಿದೆ ಎನ್ನುತ್ತಿದ್ದಾರೆ. ನಾಳೆ ನಿಮ್ಮ ಮಕ್ಕಳು, ಮೊಮ್ಮಕ್ಕಳ ಆಸ್ತಿಯೇ ಹೋಗಬಹುದು ಎಂಬುದನ್ನು ಅಂತಹ ಕಾಂಗ್ರೆಸ್ಸಿನ ಸಚಿವರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ರಾಜ್ಯದ ರೈತರು, ಜನ ಸಾಮಾನ್ಯರು, ಮಠ, ಮಂದಿರಗಳ ಆಸ್ತಿ ವಕ್ಫ್ಗೆ ಸೇರಿದ್ದೆಂದು ನೋಟೀಸ್ ನೀಡಿ, ಮುಟೇಷನ್ ಪ್ರಕ್ರಿಯೆ ಹಿಂಪಡೆಯುವAತೆ ಆದೇಶ ಹೊರಡಿಸುವ ಮೂಲಕ ಕಣ್ಣೊರೆಸುವ ತಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈಗ ಮುಟೇಷನ್ ಆದೇಶ ಹಿಂಪಡೆಯುವAತೆ ಆದೇಶ ಹೊರಡಿಸಿದ ಕಾಂಗ್ರೆಸ್ ಸರ್ಕಾರ ಮುಂದೆ ನೋಟೀಸ್ ನೀಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು…

Read More

ಶಿವಮೊಗ್ಗ: ಪ್ರತಿ ವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, ಸಾರ್ವಜನಿಕರು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ವಹಿಸಬೇಕು ಎಂದು ವಲಯ 11ರ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್ ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಅಮೃತ್ ನೋನಿ ಅವರ ಸಹಕಾರದಿಂದ ನಗರದ ಗಾಜನೂರು ರಸ್ತೆಯಲ್ಲಿ ಮತ್ತು ವಿವಿಧೆಡೆ ರಸ್ತೆ ಸುರಕ್ಷತೆ ಜಾಗೃತಿ ಫಲಕಗಳನ್ನು ಅಳವಡಿಸಿದ ನಂತರ ಮಾತನಾಡಿ, ಕರ್ನಾಟಕದಲ್ಲಿಯೂ ರಸ್ತೆ ಅಪಘಾತ ಹೆಚ್ಚಿದ್ದು, ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದಾಗ ಅಪಘಾತಗಳು ಕಡಿಮೆಯಾಗುತ್ತವೆ. ನಮ್ಮ ಸುರಕ್ಷತೆಯೇ ಮೊದಲ ಆದ್ಯತೆಯಾಗಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ದೇವ್ ಆನಂದ್ ಮಾತನಾಡಿ, ಒಂದು ಕ್ಷಣದ ಅವಸರದಿಂದ ಅಥವಾ ತಪ್ಪು ಚಾಲನೆಯಿಂದ ಅಪಘಾತಗಳು ಸಂಭವಿಸಿ ಇಡೀ ಕುಟುಂಬ ಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಚಾರ ನಿಯಮಗಳನ್ನು ಪೋಷಕರು ಪಾಲಿಸುವ…

Read More

ದಾವಣಗೆರೆ : ಕರಿಯಾ ಎನ್ನೋ ವರ್ಡ್ ಅಮೆರಿಕಾದಲ್ಲಿ ಹೇಳಿದ್ದರೆ ಪ್ರಕರಣ ದಾಖಲು ಆಗುತ್ತಿತ್ತು ಎಂದು ಬಿಜೆಪಿ ನಾಯಕ ಆರ್.ಅಶೋಕ್ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಆರ್ ಅಶೋಕ್ ,ಕರಿಯಾ ಎಂಬ ಪದ ಹೇಳಿದವನ್ನು ಸಿದ್ದರಾಮಯ್ಯ ಪಕ್ಕಕ್ಕೆ ಇಟ್ಟುಕೊಂಡಿದ್ದಾರೆ. ಇದೇ ರೀತಿ ಬೇರೆ ಕಡೆ ಹೇಳಿದ್ದರೇ ಪ್ರಕರಣ ದಾಖಲಾಗುತ್ತಿತ್ತು ಎಂದರು. 900 ಕೋಟಿ ಲಿಕ್ಕರ್ ದುಡ್ಡನ್ನು ಬೈ ಎಲೆಕ್ಷನ್ ನಲ್ಲಿ ಹರಿಸುತ್ತಿದ್ದಾರೆ. ಜಮೀರ್ ವಾಪನ್ ಆಗಿ ದುಡ್ಡು ಹಂಚುವ ವಿಡಿಯೋ ಬಂದಿದೆ.ಅವರ ಮೇಲೆ ದೂರು ನೀಡಿದ್ದೇವೆ.ಹಣ ಬಲ ವರ್ಸಸ್ ಜನ ಬಲ ಎಂಬಂತಾಗಿದೆ. ಕಾಂಗ್ರೆಸ್ ನಲ್ಲಿ ಭ್ರಷ್ಟ ಹಣದ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಲಿಕ್ಕರ್ ಲಾಬಿ ಬಗ್ಗೆ ಪ್ರಧಾನಿಯವರ ಹೇಳಿಕೆ ಬಗ್ಗೆ ಸಾಕ್ಷಿ ಕೇಳುತ್ತಿದ್ದಾರೆ. ಪೈನಾನ್ಸ್  ಸೆಕ್ರಟರಿ ಲಿಕ್ಕರ್ ದೂರಿನ ಬಗ್ಗೆ ಮೀಟಿಂಗ್ ಮಾಡಿರುವುದು ಸಾಕ್ಷಿ ಅಲ್ವ. 16 ತಿಂಗಳಲ್ಲಿ 16 ಭ್ರಷ್ಟಾಚಾರ ಮಾಡಿದ್ದಾರೆ. ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ಸದನದಲ್ಲಿ ವಾಲ್ಮೀಕಿ ಹಗರಣ ಒಂದೇ ಇತ್ತು. ಈ ಅಧಿವೇಶನ ಪೂರ್ತಿ…

Read More

ದಾವಣಗೆರೆ : ನಗರದ ಪ್ರತಿಷ್ಠಿತ ಜಿ.ಎಂ ತಾಂತ್ರಿಕ ಮಹಾ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ 2024ನೇ ಸಾಲಿನ ವಿದ್ಯಾರ್ಥಿನಿ ಕುಮಾರಿ ಷಷ್ಠಿ ಡಿಬಿ, ಇತ್ತೀಚಿಗೆ ನಡೆದ ಪೇಪಾಲ್ ಕಂಪನಿಯ ಸಂದರ್ಶನ ಪ್ರಕ್ರಿಯೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಸ್ಥಾನಕ್ಕೆ, ವರ್ಷಕ್ಕೆ 34.4 ಲಕ್ಷಗಳ ಆಫರ್ ಪಡೆದಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕುಮಾರಿ ಷಷ್ಠಿ ಡಿ.ಬಿ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಂಕಗಳನ್ನು ಗಳಿಸುತ್ತಾ, ವಿವಿಧ ತಾಂತ್ರಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾರೆ. ಹ್ಯಾಕಥಾನ್ ಸ್ಪರ್ಧೆಯಲ್ಲೂ ಸಹ ಅನೇಕ ಬಾರಿ ಭಾಗವಹಿಸಿ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದ್ದರು. ಇತ್ತೀಚಿಗೆ ಪೇಪಾಲ್ ನಡೆಸಿದ ಎಲ್ಲಾ ಮೂರು ತಾಂತ್ರಿಕ ಸಂದರ್ಶನ ಸುತ್ತುಗಳಲ್ಲೂ ತಾಂತ್ರಿಕ ಕೌಶಲ್ಯ ಪ್ರದರ್ಶಿಸಿ ಆಯ್ಕೆಯಾದ ವಿದ್ಯಾರ್ಥಿನಿಯಾಗಿದ್ದಾರೆ. ಕಂಪನಿಯು ಈ ವಿದ್ಯಾರ್ಥಿನಿಗೆ ಇದೇ ಅಕ್ಟೋಬರ್ 21ನೇ ಸೋಮವಾರದಂದು ಚೆನ್ನೈನ ಪೇ ಪಾಲ್ ಕಂಪನಿಗೆ ಬಂದು ಸೇರಲು ಸೂಚನೆಯನ್ನು ನೀಡಿತ್ತು. ಅದೇ ರೀತಿ ವಿದ್ಯಾರ್ಥಿನಿಯು ಯಶಸ್ವಿಯಾಗಿ…

Read More

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಯ ಮಹತ್ವಕಾಂಕ್ಷೆಗೆ ಅಭಿನಂದಿಸಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಭಾರತವು ಮೂರನೇ ಪ್ರಬಲ ಆರ್ಥಿಕತೆಯ ಶಕ್ತಿಯಾಗಲು ಉತ್ಪಾದನಾ, ಆರ್ಥಿಕ ಚಟುವಟಿಕೆಗಳು ಪ್ರಚಂಡವಾಗಿ ಆಗಬೇಕು ದಾವಣಗೆರೆ : ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಡುತ್ತಿರುವ ಶಿಕ್ಷಣ ಸಂಸ್ಥೆಯಾಗಿರುವ ಜಿಎಂಐಟಿ ಪ್ರಸ್ತುತ ಜಿಎಂ ವಿಶ್ವವಿದ್ಯಾಲಯವಾಗಿ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆ ಜಿ. ಮಲ್ಲಿಕಾರ್ಜುನಪ್ಪನವರ ದೂರದರ್ಶತ್ವದ ಕೊಡುಗೆ ಅಪಾರವಾಗಿದೆ ಎಂದು ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ಹೊಸ, ನವೀಕರಿಸಬಹುದಾದ ಶಕ್ತಿ ಮೂಲಗಳ ಇಲಾಖೆ ಸಚಿವರಾದ ಪ್ರಹ್ಲಾದ್ ಜೋಶಿ ಸ್ಮರಿಸಿದರು. ಭೀಮಸಮುದ್ರದ ಶ್ರೀಶೈಲ ಎಜುಕೇಷನ್ ಟ್ರಸ್ಟ್ ನಡಿಯ ಜಿಎಂ ವಿಶ್ವವಿದ್ಯಾಲಯದಲ್ಲಿ ನವೆಂಬರ್ 12ರ ಮಂಗಳವಾರ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿ, ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಡಬೇಕೆಂಬ ಜಿ. ಮಲ್ಲಿಕಾರ್ಜುನಪ್ಪನವರ ದೂರ ದೃಷ್ಟಿಯನ್ನು ಅನುಸರಿಸಿ ಕೇಂದ್ರದ ಮಾಜಿ ಸಚಿವರಾದ ಜಿ.…

Read More

ಮಾಜಿ ಪ್ರಧಾನ ದೊಡ್ಡಗೌಡ್ರು ಸ್ಪೋಟಕ ಸುಳಿವು *ಉಪಚುನಾವಣೆ ನಂತರ ಸರ್ಕಾರಕ್ಕೆ ಗಂಡಾಂತರ ? ದಾವಣಗೆರೆ ;  ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಕೇಂದ್ರ ಎನ್‌ಡಿಎ ಸರ್ಕಾರ ಬೀಳಿಸಲು ಪ್ಲಾನ್ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಮಾತು ಬೇರಾರು ಅಲ್ಲ ಮಾಜಿಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದು ಹೊಸ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಉಪಚುನಾವಣೆ ನಂತರ ಸರ್ಕಾರಕ್ಕೆ ಗಂಡಾಂತರ ಕಾಯಿದಿದೆನಾ ? ಹಾಗಾದ್ರೆ ದೊಡ್ಡಗೌಡ್ರು ನುಡಿದ ಭವಿಷ್ಯ ನಿಜವಾಗುತ್ತಾ ? ಈ ಕುರಿತು ಸ್ಟೋರಿ ಇಲ್ಲಿದೆ. ಚನ್ನಪಟ್ಟಣದ ಉಪಚುನಾವಣೆ ಪ್ರಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿರುವ ಹೇಳಿಕೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವನನ್ನಾಗಿ ಮಾಡಿದ್ದೇ ನಾನು. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರ ಸೊಕ್ಕು ಮುರಿಯಲು ನಿಖಿಲ್ ಅವರನ್ನ ಕಣಕ್ಕಿಳಿಸಿದ್ದೇವೆ. ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಎನ್‌ಡಿಎ ನಿರ್ಧರಿಸಿದೆ. ಜನವರಿಯೊಳಗೆ ಸರ್ಕಾರ ಬೀಳುವುದು ಖಚಿತ ಎಂದು ಕೇಂದ್ರ ಸಚಿವ ಸೋಮಣ್ಣ ಅವರ…

Read More

ಬೆಂಗಳೂರು:  ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಲ್ಲಾ ಸಿಬ್ಬಂದಿಗಳ, ನೌಕರರ ಸಮಸ್ಯೆಗಳಿಗೆ ಧ್ವನಿಯಾಗಿ ಅದರಲ್ಲೂ ಮಹಿಳಾ ನೌಕರರಿಗೆ ಸದಾ ಸಹಾಯಕ್ಕೆ ಮುಂದಾಗಿರುತ್ತೇನೆ ಎಂದು ಇಲಾಖೆಯ ಪ್ರಥಮ ದರ್ಜೆ ಸಹಾಯಕ ಎನ್ ಮಾಲತೇಶ್ ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ 29ರ ಅವಧಿಗೆ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ಕಬ್ಬನ್ ಉದ್ಯಾನವನದ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಡೆಯಿತು, ಅದರಲ್ಲಿ ಭರ್ಜರಿ ಗೆಲುವು ಸಾಧಿಸಿ ಖುಷಿಯ ವಿಚಾರ ಹಂಚಿಕೊಂಡರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಒಟ್ಟು 88 ಮತದಾರರು ಇದ್ದರು, ಅದರಲ್ಲಿ 42 ಮತಗಳನ್ನು ಎನ್ ಮಾಲತೇಶ್ ಒಬ್ಬರೇ ಪಡೆಯುವ ಮೂಲಕ ಅಮೋಘ ಗೆಲುವನ್ನು ಸಾಧಿಸಿದ್ದಾರೆ ಹಾಲಿ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್ ಷಡಾಕ್ಷರಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಮಾಲತೇಶ್ ಲೀಲಾಜಾಲವಾಗಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದೇವೆ ಎಂದರು. 5 ವರ್ಷಗಳ ಕಾಲ ಇಲಾಖೆಯ ನೌಕರರು,ಸಿಬ್ಬಂದಿ ವರ್ಗ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದಲ್ಲಿ ತಿಳಿಸಿ, ನನ್ನ ಶಕ್ತಿ ಮೀರಿ…

Read More

ಶಿವಮೊಗ್ಗ : ತಾಲೂಕಿನ ಸಂತೆ ಕಡೂರು ಹೋಬಳಿಯ ಹಲವೆಡೆ ರಸ್ತೆ ಬದಿ ಅಡಕೆ ಸಿಪ್ಪೆ ಸುರಿದು ಮನ ಬಂದಂತೆ ಬೆಂಕಿ ಹಚ್ಚುವುದರಿಂದ ವಾಯು ಮಾಲಿನ್ಯದ ಜತೆಗೆ ಸಂಚಾರಕ್ಕೆ ಅಡಚಣೆಯಾಗಿದೆ. ಈ ಭಾಗಗಳಲ್ಲಿ ಅಡಕೆ ಚೇಣಿದಾರರಿದ್ದು ಚಳಿಗಾಲದ ಅವಧಿ ಬಂತೆಂದರೆ ಅಡಕೆ ಸಿಪ್ಪೆ ಸುಳಿದು ಸರಿಯಾಗಿ ವಿಲೇವಾರಿ ಮಾಡದೇ ರಸ್ತೆ ಬದಿಗಳಲ್ಲಿ ಸುರಿಯುತ್ತಾರೆ. ಸಿಪ್ಪೆ ಹೆಚ್ಚಾಗಿ ಒಣಗಿದ ಬಳಿಕ ಬೆಂಕಿ ಹಚ್ಚುತ್ತಾರೆ. ಇದರಿಂದ ರಸ್ತೆ ಬದಿ ಮರಗಳಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಅಲ್ಲದೇ ಅಡಕೆ ಸಿಪ್ಪೆ ಕೊಳೆತು ದುರ್ನಾತ ಬೀರುವುದಲ್ಲದೇ ಸೊಳ್ಳೆಗಳು ಹೆಚ್ಚಾಗಲು ಕಾರಣವಾಗಿದೆ. ಒಮ್ಮೊಮ್ಮೆ ಹಸಿ ಅಡಕೆ ಸಿಪ್ಪೆಗಳಿಗೆ ಬೆಂಕಿ ಹಚ್ಚುವುದರಿಂದ ಹೊಗೆಯ ದಟ್ಟತೆ ಹೆಚ್ಚಾಗುತ್ತಿದೆ. ಅಪಘಾತ ಸಾಧ್ಯತೆ ಹೆಚ್ಚು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ಅಪಘಾತವಾಗುವ ಸಾಧ್ಯತೆಯೂ ಇದೆ. ಈ ಭಾಗಗಳಲ್ಲಿ ಅಡಕೆ ಚೇಣಿದಾರರು ಹೆಚ್ಚಿದ್ದು, ಒಂದು ಕಸ ವಿಲೇವಾರಿ ಘಟಕವನ್ನು ಗ್ರಾಪಂ ವತಿಯಿಂದ ನಿರ್ಮಿಸಿಕೊಟ್ಟಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಪರಿಸರ ವಾದಿಗಳ ವಾದ. ಅಡಕೆ ಸಿಪ್ಪೆ ರಸ್ತೆ…

Read More

ಶಿವಮೊಗ್ಗ: ಕನ್ನಡ ರಾಜ್ಯೋತ್ಸವ ಆಚರಣೆಯು ನವೆಂಬರ್‌ಗೆ ಸೀಮಿತ ಆಗಬಾರದು. ಎಲ್ಲ ಸಂದರ್ಭಗಳಲ್ಲಿ ಕನ್ನಡ ಭಾಷೆ ಬಳಸಬೇಕು. ಕನ್ನಡ ನಮ್ಮ ನಿತ್ಯೋತ್ಸವ ಆಗಬೇಕು ಎಂದು ಪ್ರೊ. ಡಾ. ಹಸೀನಾ ಎಚ್.ಕೆ. ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕ ಸಂಸ್ಕೃತಿಯ ನಾಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು ಎಂದು ತಿಳಿಸಿದರು. ರೋಟರಿ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಬಹಳ ವಿಶೇಷ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದರ ಜತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬರಿಗೂ ವಿಶೇಷ ಹಬ್ಬ. ಇದು ಕನ್ನಡ ನಾಡಿನ ಎಲ್ಲರೂ ಸೇರಿ ಆಚರಿಸುವ ಹೆಮ್ಮೆಯ ಹಬ್ಬ ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್. ಮಾತನಾಡಿ, ಈವರೆಗೂ…

Read More

ಬೆಂಗಳೂರು: ರಾಜ್ಯಾದ್ಯಂತ 8 ಭ್ರಷ್ಟ ಅಧಿಕಾರಿಗಳ ವಿರುದ್ಧ 37 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು, ಅವರ ಆಸ್ತಿ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ..ಹಾಗಾದ್ರೆ ಅವರ ಆಸ್ತಿ ಎಷ್ಟು ಗೊತ್ತಾ..ಬನ್ನಿ ನೋಡೋಣ..ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಒಟ್ಟು ಇಪ್ಪತ್ತೇಳು ಕೋಟಿ 79 ಲಕ್ಷ ಮೌಲ್ಯದ ಸಂಪತ್ತನ್ನು ಅಕ್ರಮವಾಗಿ ದುಡಿದಿದ್ದಾರೆ. ಬೆಳಗಾವಿ-2, ಹಾವೇರಿ-1, ದಾವಣಗೆರೆ-1, ಬೀದರ್-1, ಮೈಸೂರು-1, ರಾಮನಗರ-1 ಮತ್ತು ಧಾರವಾಡ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 08 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿದೆ. ಇನ್ನು ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಛೇರಿ ಹಾಗೂ ಸಂಬAಧಿಕರ ಮನೆಗಳು ಸೇರಿದಂತೆ ಒಟ್ಟು 37 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ ಎಂದಿದೆ. ದಾವಣಗೆರೆ ಕಮಲರಾಜ್ ಬಳಿ ಏನೇನಿತ್ತು? 6 ನಿವೇಶನ, 2 ವಾಸದ…

Read More