ಮಾಜಿ ಪ್ರಧಾನ ದೊಡ್ಡಗೌಡ್ರು ಸ್ಪೋಟಕ ಸುಳಿವು *ಉಪಚುನಾವಣೆ ನಂತರ ಸರ್ಕಾರಕ್ಕೆ ಗಂಡಾಂತರ ?
ದಾವಣಗೆರೆ ; ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಕೇಂದ್ರ ಎನ್ಡಿಎ ಸರ್ಕಾರ ಬೀಳಿಸಲು ಪ್ಲಾನ್ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಮಾತು ಬೇರಾರು ಅಲ್ಲ ಮಾಜಿಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದು ಹೊಸ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಉಪಚುನಾವಣೆ ನಂತರ ಸರ್ಕಾರಕ್ಕೆ ಗಂಡಾಂತರ ಕಾಯಿದಿದೆನಾ ? ಹಾಗಾದ್ರೆ ದೊಡ್ಡಗೌಡ್ರು ನುಡಿದ ಭವಿಷ್ಯ ನಿಜವಾಗುತ್ತಾ ? ಈ ಕುರಿತು ಸ್ಟೋರಿ ಇಲ್ಲಿದೆ.
ಚನ್ನಪಟ್ಟಣದ ಉಪಚುನಾವಣೆ ಪ್ರಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿರುವ ಹೇಳಿಕೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವನನ್ನಾಗಿ ಮಾಡಿದ್ದೇ ನಾನು. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರ ಸೊಕ್ಕು ಮುರಿಯಲು ನಿಖಿಲ್ ಅವರನ್ನ ಕಣಕ್ಕಿಳಿಸಿದ್ದೇವೆ. ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಎನ್ಡಿಎ ನಿರ್ಧರಿಸಿದೆ. ಜನವರಿಯೊಳಗೆ ಸರ್ಕಾರ ಬೀಳುವುದು ಖಚಿತ ಎಂದು ಕೇಂದ್ರ ಸಚಿವ ಸೋಮಣ್ಣ ಅವರ ಮಾತಿನಲ್ಲಿ ಸತ್ಯಾಂಶವಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಪ್ರಕರಣ ಬಳಸಿಕೊಂಡು ನನ್ನ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಕಿಡಿಕಾರಿದ ದೇವೇಗೌಡರು ಉಪಚುನಾವಣೆ ಬಳಿಕ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಕೈಬಿಡಲಿದೆ ಎಂದು ದೂರಿದರು ಇದಕ್ಕೆ ಪೂರಕ ಎನ್ನುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಹಾಲು ಜೇನಿನಂತೆ ಬೆರೆತು ಹೋಗಿದ್ದು, ಅದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ನಾಡಿನ ಜನರ ಬದಕನ್ನು ಸರಿಪಡಿಸುವ ನಿಟ್ಟಿನಲ್ಲಿ ಎನ್ಡಿಎ ಮೈತ್ರಿಕೂಡ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ. ಬಿಜೆಪಿ ಜೊತೆ ಸರ್ಕಾರ ಮಾಡಿದ್ದು ಸುವರ್ಣ ಕಾಲ. ಅಂದು ಬಿಜೆಪಿ ನಮಗೆ ಆಸರೆಯಾಗಿತ್ತು. 20 ತಿಂಗಳ ಆಡಳಿತದಲ್ಲಿ ಜನಪರ ಕೆಲಸಗಳನ್ನು ಯಡಿಯೂರಪ್ಪ ಅವರ ಸಹಕಾರದಿಂದ ಮಾಡಿದೆ. ಇವತ್ತು ನನಗೆ ರಾಜಕೀಯವಾಗಿ ಹೆಸರು ಬಂದಿದೆ ಎಂದರೆ ಅದಕ್ಕೆ ಯಡಿಯೂರಪ್ಪ ಅವರ ಪಾಲು ಕೂಡ ಇದೆ.
ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ನಾನು ಪ್ರಾಮಾಣಿಕವಾಗಿ ತೀರ್ಮಾನ ಮಾಡಿದ್ದೆ. ಅದನ್ನು ತಪ್ಪಿಸಲು ನಡೆದ ಘಟನೆಗಳನ್ನು ನಾನು ಬಹಿರಂಗ ಪಡಿಸುವುದಿಲ್ಲ. ಆದರೆ, ಕೆಲವರು ಮಾಡಿದ ಕೃತ್ಯದಿಂದ ನಾನು 14 ವರ್ಷ ವನವಾಸ ಅನುಭವಿಸಿದೆ ಎಂದು ಭಾವುಕರಾದರು. ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದಿದ್ದರೆ ಅಂದೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿತ್ತು. ಆದರೆ, ವಿಧಿ ಆಟದ ಮುಂದೆ ನಮ್ಮದೇನು ನಡೆಯಲಿಲ್ಲ. ರೈತರ ಸಾಲಮನ್ನ ಮಾಡಿದ ನೆಮ್ಮದಿ ಬಿಟ್ಟರೆ, ಕಾಂಗ್ರೆಸ್ ನೊಂದಿಗಿನ ಮೈತ್ರಿ ಸರ್ಕಾರದಿಂದ ಆದಷ್ಟು ಮಾನಸಿಕ ಹಿಂಸೆ ಮತ್ಯಾವುದೂ ಇರಲಿಲ್ಲ ಎಂದರು.
ಸಿಪಿ ಯೋಗೇಶ್ವರ ಅವರನ್ನು ಕಣಕ್ಕಿಳಿಸಲು ನಾವು ನಿರ್ಧರಿಸಿದ್ದೆವು. ಆದರೆ, ಅವರು ಬಹಳ ಹಿಂದೆಯೇ ಕಾಂಗ್ರೆಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿರಲಿಲ್ಲ. ಉಪಚುನಾವಣೆ ನಂತರ ಸರ್ಕಾರದ ಭವಿಷ್ಯ ನಿರ್ಧಾರ ಆಗಲಿದ್ದು ಸರ್ಕಾರಕ್ಕೆ ಹೆಚ್ಚಿನ ಆಯಷ್ಯು ಇಲ್ಲ. ಅವರವರೇ ಬಡಿದಾಡಿಕೊಂಡು ಸರ್ಕಾರ ಕೆಡವಿಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಒಟ್ಟಾರೆ ಒಂದೆ ಸರ್ಕಾರ ಬೀಳಲಿದೆ ಎಂದು ಬಿಜೆಪ ನಾಯಕರು ಸಾಲುಸಾಲಾಗಿ ಹೇಳಿಕೆ ನೀಡುತ್ತಿದ್ದು ಇದಕ್ಕೆ ದೊಡ್ಡಗೌಡ್ರು ಧ್ವನಿಗೂಡಿಸಿದ್ದು ಚರ್ಚೆಗೆ ಕಾರಣವಾಗಿದೆ. ಸಿದ್ದು ಸರ್ಕಾರದ ಮೇಲೆ ಹಲವು ಕಣ್ಣಾಕಿದಂತೆ ಕಾಣುತ್ತಿದೆ