ಭದ್ರಾವತಿ: ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಪ್ರಶಾಂತಿ ಸೇವಾ ಟ್ರಸ್ಟ್ ಅಪರಂಜಿ ಅಭಿನಯ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಬೇಸಿಗೆ ಶಿಬಿರ 2024 ಆಯೋಜಿಸಲಾಗಿದೆ.
5 ರಿಂದ 15 ವರ್ಷ ವಯೋಮಿತಿಯೊಳಗಿನ ಮಕ್ಕಳಿಗೆ ಏ 1ರಿಂದ 8 ರವರೆಗೆ ಬೇಸಿಗೆ ಶಿಬಿರವನ್ನು ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.
ರಂಗಕರ್ಮಿ, ಕಿರುತೆರೆ-ಚಲನಚಿತ್ರ ನಟ ಅಪರಂಜಿ ಶಿವರಾಜ್ ನೇತೃತ್ವದಲ್ಲಿ ಡ್ರಾಮಾ ಜೂನಿಯರ್, ಡ್ರಾಮಾ ಸೀನಿಯರ್ ಅಭಿನಯ ತರಬೇತಿ, ಗೀತಗಾಯನ, ಡಾನ್ಸ್ ನವರಸಗಳ ಕಲಿಕೆ ನೆನಪಿನ ಶಕ್ತಿ, ಓದುವ ಕ್ರಮವನ್ನು ತಿಳಿಸಿ ಕೊಡಲಾಗುವುದು.ಮಾಹಿತಿಗಾಗಿ ಮೊ : 9980534406ಸಂಪರ್ಕಿಸಬಹುದು.