ನಂದೀಶ್ ಭದ್ರಾವತಿ, ದಾವಣಗೆರೆ
ಬಿಜೆಪಿ ಕೈಗಾರಿಕಾ ಪ್ರಕೋಷ್ಠ ಕರ್ನಾಟಕ ರಾಜ್ಯ ಸಂಚಾಲಕರಾಗಿ ಬಿಜೆಪಿ ನಾಯಕ ಕೆ.ಬಿ.ಕೊಟ್ರೇಶ್ ನೇಮಕ ಗೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ವಿಜಯೇಂದ್ರ ಈ ಆಯ್ಕೆ ನಡೆಸಿ ಪ್ರಕಟಣೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕೆಲಸ ಮಾಡಿರುವ ಅನುಭವ, ಕೈಗಾರಿಕೋದ್ಯಮದಲ್ಲಿ ಹೆಚ್ಚು ಅನುಭವವಿರುವ ಕಾರಣ ಕೆ.ಬಿ.ಕೊಟ್ರೇಶ್ ಗೆ ಈ ಸ್ಥಾನ ನೀಡಲಾಗಿದೆ. ವೃತ್ತಿಯ ಜೊತೆಗೆ ಅನೇಕ ಪ್ರವೃತ್ತಿಗಳನ್ನು ಮೈಗೂಡಿಸಿರುವ ಕೆ.ಬಿ.ಕೊಟ್ರೇಶ್ ಮಾನವೀಯತೆಯನ್ನು ಅಪಾರವಾಗಿ ಪ್ರೀತಿಸಿ ಮನುಕುಲದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಓರ್ವ ಅಪ್ಪಟ ಸಮಾಜ ಸೇವಕ ಮತ್ತು ಪರಿಸರ ಪ್ರೇಮಿ ಹಾಗೂ ವಿದ್ಯಾದಾನಿ ಆಗಿದ್ದಾರೆ.
ಸರಕಾರಿ ಶಾಲೆ ಮಕ್ಕಳು ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನಕ್ಕಾಗಿ ಧನ ಸಹಾಯ ಮಾಡಿದ್ದಾರೆ. ದೊಡ್ಡ, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳ ಉತ್ತೇಜನ ಸೇರಿದಂತೆ ಕೈಗಾರಿಕಾ ವಲಯವನ್ನು ಅಭಿವೃದ್ಧಿ ಪಡಿಸುವ ಅಗಾಧ ಅನುಭವವುಳ್ಳ ಕೆ.ಬಿ.ಕೊಟ್ರೇಶ್ರವರಿಗೆ ಕೈಗಾರಿಕಾ ಪ್ರಕೋಷ್ಠದ ಆಯ್ಕೆ ಸೂಕ್ತ ಮತ್ತು ಸಮಯೋಜಿತ ಆದದ್ದು ಎಂದು ಕೈಗಾರಿಕೋದ್ಯಮಿಗಳು ಪ್ರಶಂಸಿದ್ದಾರೆ
ಬಿಜೆಪಿಗೆ ಹಿಂಭಾಗಿಲಿನಿಂದ ಕೆಲಸ
ಅಪ್ಪಟ ಬಿಜೆಪಿ ಕಾರ್ಯಕರ್ತರಾಗಿರುವ ಕೆ.ಬಿ.ಕೊಟ್ರೇಶ್ ಬಿಜೆಪಿಗೆ ಹಿಂಭಾಗಲಿನಿಂದ ಕೆಲಸ ಮಾಡಿದ್ದಾರೆ. ಅಲ್ಲದೇ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ಕೆ.ಬಿ.ಕೊಟ್ರೇಶ್ ಪಾತ್ರ ಅನನ್ಯ.
ಲೋಕಸಭೆ ಚುನಾವಣೆಗೆ ಶ್ರಮ
ರಾಜ್ಯದಲ್ಲಿ ಸುಮಾರು 20 ಸಾವಿರ ಸಣ್ಣ ಹಾಗೂ ಬೃಹತ್ ಕೈಗಾರಿಕೋದ್ಯಮಿಗಳು ಇದ್ದು, ಅವರ ಮತಗಳನ್ನು ಬಿಜೆಪಿಗೆ ಹಾಕಿಸಲು ಕೆ.ಬಿ.ಕೊಟ್ರೇಶ್ ಶ್ರಮಿಸಬೇಕಾಗಿದೆ. ಅಲ್ಲದೇ ಕೇಂದ್ರದ ಯೋಜನೆಗಳು, ಅವರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿ ರಾಜ್ಯಮಟ್ಟದಲ್ಲಿ ಬಿಜೆಪಿ ಬೆಳೆಸುವುದಕ್ಕಾಗಿ ಈ ಹುದ್ದೆ ನೀಡಲಾಗಿದೆ. ಪರಿಸರ ಪ್ರಿಯವಾಗಿರುವ ಕೊಟ್ರೇಶ್ ಗೆ ಕೈಗಾರಿಕೆಕೋದ್ಯಮಿಗಳ ಹೃದಯಬಡಿತ ಅರಿತಿದ್ದಾರೆ.
ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕರನ್ನಾಗಿ ನೇಮಕ ಮಾಡಿದ ರಾಜ್ಯಾಧ್ಯಕ್ಷ @byvijayendra ಅವರಿಗೆ ಧನ್ಯವಾದಗಳನ್ನು ಹೇಳಿರುವ ಕೆ.ಬಿ.ಕೊಟ್ರೇಶ್ . ತಾವು ವಹಿಸಿರುವ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಶ್ರಮಿಸುವೆ ಎಂದಿದ್ದಾರೆ