


- *ಜಿಎಂ ವಿಶ್ವವಿದ್ಯಾಲಯದಲ್ಲಿ 20 ವರ್ಷಗಳ ಸೇವೆ
- * ಏಳು ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ
- *ಹರಿಹರದ ಭಾನುವಳ್ಳಿಯ ಫಸ್ಟ್ ರ್ಯಾಂಕ್ ಹುಡುಗ
- * 5 ಬೃಹತ್ ಉದ್ಯೋಗ ಮೇಳಗಳು
- *5 ಬೃಹತ್ ವೈದ್ಯಕೀಯ ಶಿಬಿರಗಳ ಆಯೋಜನೆ
ನಂದೀಶ್ ಭದ್ರಾವತಿ, ದಾವಣಗೆರೆ
ಕನಸು ಈಡೇರಿಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯುವುದು ಎಲ್ಲರ ಕನಸು. ಕನಸು ಈಡೇರಿಸಲು ಶಿಸ್ತು, ದೃಢತೆ, ಅತ್ಯುತ್ತಮ ದೃಷ್ಟಿಕೋನ, ಸತತ ಪ್ರಯತ್ನ ಇತ್ಯಾದಿ ಹಲವು ವಿಷಯಗಳು ಬೇಕು. ಇವೆಲ್ಲದರ ಜತೆಗೆ ಗುರುವೊಬ್ಬ ಹಿಂದೆ ಇದ್ದರೇ, ಮಕ್ಕಳ ಭವಿಷ್ಯ ಉತ್ತುಂಗಕ್ಕೇ ಏರುವುದರಲ್ಲಿ ಯಾವುದೇ ಅನುಮಾನವಿಲ್ಲ..ಇಂತಹ ಗುರು ಜಿಎಂಐಟಿ ಕಾಲೇಜಿನಲ್ಲಿದ್ದು, ಇವರ ಕೈಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಉನ್ನತಮಟ್ಟಕ್ಕೆ ಏರಿದ್ದಾರೆ.

ಹೌದು..ನಗರದ ಪ್ರತಿಷ್ಠಿತ ಜಿಎಂ ವಿಶ್ವವಿದ್ಯಾಲಯದಲ್ಲಿ
ಹಲವಾರು ವರ್ಷಗಳಿಂದ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾಗಿರುವ ತೇಜಸ್ವಿ ಕಟ್ಟಿಮನಿಯೇ ವಿದ್ಯಾರ್ಥಿಗಳ ಚಾಮಯ್ಯ ಮೇಷ್ಟ್ರು.

ಈ ಚಾಮಯ್ಯ ಮೇಷ್ಟ್ರು ರಾಮಾಚಾರಿಯಂತಹ ವಿದ್ಯಾರ್ಥಿಗಳನ್ನು ಶಿಲೆಯನ್ನಾಗಿ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಪ್ರೇರಣಾದಾಯಕ ಮನಸ್ಥಿತಿ. ಸ್ಪೂರ್ತಿದಾಯಕ ವ್ಯಕ್ತಿತ್ವ. ಮೋಟಿವೇಷನ್ ತುಂಬಿದ ಕಾರಣದಿಂದಲೇ ಹಲವು ಸ್ಟೂಡೆಂಟ್ ಗಳು ಇಂದು ದೇಶ, ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರೇರಣೆ ಇಲ್ಲದೆ ಇದ್ದರೆ ಕನಸನ್ನು ನಿಜವಾಗಿಸುವ ನಿಮ್ಮ ಆಸಕ್ತಿ ಕಡಿಮೆಯಾಗಬಹುದು. ಯಶಸ್ಸು ಕಾಣಲು ಬಯಸುವವರಿಗೆ ಸ್ಪೂರ್ತಿಯಾಗುವಂತೆ, ಪ್ರೇರಣೆಯಾಗುವಂತೆ ಹತ್ತು ಸಲಹೆಗಳನ್ನು ಅವರು ನೀಡಿದ್ದಾರೆ. ಇವರ ಪ್ರೇರಣಾದಾಯಕ ಮಾತುಗಳು. ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗಿದೆ.
20 ವರ್ಷಗಳ ನಿರಂತರ ಸೇವೆ
ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ 20 ವರ್ಷಗಳ ನಿರಂತರ ಸೇವೆ. (Joined on 1.4.2005). ಸಲ್ಲಿಸಿದ ಇವರು ಕಾಲೇಜು ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ.
ಯಾವ ವಿಭಾಗದಲ್ಲಿ ಕೆಲಸ
ಇನ್ಫಾರ್ಮಶನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಅಸಿಸ್ಟೆಂಟ್ ಪ್ರೊಫೆಸರ್, ವಿಭಾಗದ ಮುಖ್ಯಸ್ಥರಾಗಿ, ತರಬೇತಿ ಮತ್ತು ಉದ್ಯೋಗ ವಿಭಾಗದಲ್ಲಿ ಮುಖ್ಯಸ್ಥರಾಗಿ ಹತ್ತು ವರ್ಷಗಳ ನಿರಂತರ ಸೇವೆ. ಅಲ್ಲದೇ ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ನ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.
ಏಳು ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ
ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕಟ್ಟೀಮನಿ ಇದುವರೆಗೂ 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕೊಡಿಸಿ ಬಾಳನ್ನು ಬೆಳಗಿಸಿದ್ದಾರೆ.
ಬೃಹತ್ ಉದ್ಯೋಗ ಮೇಳ
ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಸಂಯೋಚಕರಾಗಿ 5 ಬೃಹತ್ ಉದ್ಯೋಗ ಮೇಳಗಳು ಮತ್ತು 5 ಬೃಹತ್ ವೈದ್ಯಕೀಯ ಶಿಬಿರಗಳ ಆಯೋಜನೆ ಮಾಡಿ ಹಲವಾರು ಯುವಕರಿಗೆ ಕೆಲಸ ನೀಡಿ, ಜೀವನ ರೂಪಿಸಿದ್ದಾರೆ.
108 ವಿವಿಧ ಕೈಗಾರಿಕೆಗಳೊಡನೆ ಒಪ್ಪಂದ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಸಲುವಾಗಿ 108 ವಿವಿಧ ಕೈಗಾರಿಕೆಗಳೊಡನೆ ಒಪ್ಪಂದ ಹಾಗೂ 13 ಕೈಗಾರಿಕೆಗಳ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ ಗೆ ಸಹಕಾರಿಯಾಗಿದ್ದಾರೆ.
ಇವರ ಕಾರ್ಯಕ್ಕೆ ಶ್ಲಾಘನೆ ಲಕ್ಷ ರೂ.ಬಹುಮಾನ
ಜಿ.ಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಜಿಎಮ್ ತಾಂತ್ರಿಕ ಮಹಾವಿದ್ಯಾಲಯದ ಚೇರ್ಮನ್ ಶ್ರೀ ಜಿಎಂ ಲಿಂಗರಾಜು ರವರಿಂದ ಶ್ರೇಷ್ಠ ಸಾಧನೆಗೆ ಒಂದು ಲಕ್ಷ ರೂಗಳ ಬಹುಮಾನ ಮತ್ತು 10 ಗ್ರಾಂ ಚಿನ್ನದ ನಾಣ್ಯ ಸ್ವೀಕಾರ ಮಾಡಿದ್ದಾರೆ.
ಹಲವು ಬಾರಿ ಮೆಚ್ಚುಗೆಯ ಪ್ರಮಾಣ ಪತ್ರ
ಪ್ರಾಂಶುಪಾಲರಿಂದ ಹಲವು ಬಾರಿ ಮೆಚ್ಚುಗೆಯ ಪ್ರಮಾಣ ಪತ್ರ. ಪ್ರತಿಷ್ಠಿತ ಕಂಪನಿಗಳಿಂದಲೂ ಮೆಚ್ಚುಗೆಯ ಪ್ರಮಾಣ ಪತ್ರ ಸ್ವೀಕಾರ ಮಾಡಿರುವುದು ಅವರ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ.
ಅವಾರ್ಡ್ ಗಳ ಸುರಿಮಳೆ
ಅಮ್ಕ್ಯಾಟ್ ಕಂಪನಿಯಿಂದ ಕರಿಯರ್ ಗುರು ಅವಾರ್ಡ್, ಚೆನ್ನೈನ ಐಸಿಟಿ ಅಕಾಡೆಮಿ ಕೊಡ ಮಾಡುವ ಬೆಸ್ಟ್ ಕೋ ಆರ್ಡಿನೇಟರ್ ಅವಾರ್ಡ್, ಪುಣೆ ಮೂಲದ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಕಂಪನಿಯ ವತಿಯಿಂದ ಬೆಸ್ಟ್ ಟಿಪಿಓ ಅವಾರ್ಡ್, ಪುಣೆ ಮೂಲದ ಎಫ್ ಯು ಈ ಎಲ್ ಕೊಡ ಮಾಡುವ ಬೆಸ್ಟ್ ಪ್ಲೇಸ್ಮೆಂಟ್ ಆಫೀಸರ್ ಅವಾರ್ಡ್, ಬೆಂಗಳೂರಿನ ಡಿಜಿಟೆಕ್ನೋ ವತಿಯಿಂದ 2022 ಪ್ಲೇಸ್ಮೆಂಟ್ ಆಫೀಸರ್ ಆಫ್ ದಿ ಇಯರ್ ಅವಾರ್ಡ್, ಹನಿವೆಲ್ ಕಂಪನಿ ವತಿಯಿಂದ ಮೆಚ್ಚುಗೆಯ ಪ್ರಮಾಣ ಪತ್ರ. ಇನ್ನು ಇತರ ಪ್ರಶಸ್ತಿಗಳು ಬಂದಿದೆ. ಇನ್ನು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸಲಹಾ ಮಂಡಳಿಯ ಸದಸ್ಯರಾಗಿರುವುದು ವಿಶೇಷ. ಒಟ್ಟಾರೆ ಚಾಮಯ್ಯ ಮೇಷ್ಟ್ರುಗೆ ವಿದ್ಯಾರ್ಥಿಗಳಿಂದ ಒಂದು ಸಲಾಂ
….
ಸಾಫ್ಟವೇರ್ ಎಂಜಿನಿಯರ್ ಆದ್ರೂ ಬೋಧನೆಯತ್ತ ಒಲವು
ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿದ ನಂತರ ಬೆಂಗಳೂರಿನ ಹೆಸರಾಂತ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಕೆಲಸ ಮಾಡಿ, ಬೋಧನೆಯ ಕಡೆಗೆ ಒಲವು ಇದ್ದಿದ್ದರಿಂದ ಜಿಎಂಐಟಿ ಸಂಸ್ಥೆಗೆ ಸೇರಿದರು.
….
ಕಟ್ಟೀಮನಿ ಶಿಕ್ಷಣ
ಪ್ರಾಥಮಿಕ ಶಿಕ್ಷಣವನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಮುಗಿಸಿದ್ದಾರೆ. ತಾವು ಓದಿದ ಶಾಲೆಗೆ ಮತ್ತು ಭಾನುವಳ್ಳಿ ಗ್ರಾಮಕ್ಕೆ ಏನಾದರೂ ಒಂದು ಕೊಡುಗೆ ಕೊಡಬೇಕೆಂದು ತಮ್ಮ ಸಹಪಾಠಿಗಳೊಡನೆ ಸೇರಿ ಸ್ನೇಹ ಸಂಭ್ರಮ ಚಾರಿಟಿ ಫೌಂಡೇಶನ್ ಸ್ಥಾಪಿಸಿದ್ದಾರೆ. ಇದರ ಸ್ಥಾಪಕ ಅಧ್ಯಕ್ಷರು ಆಗಿದ್ದಾರೆ. ಈಗಾಗಲೇ ಭಾನುವಳ್ಳಿಯಲ್ಲಿ ಎರಡು ಬೃಹತ್ ಕಾರ್ಯಕ್ರಮಗಳು ನಡೆದಿದ್ದು, ಉದ್ಯೋಗ ಮೇಳ ಮತ್ತು ಆರೋಗ್ಯ ಶಿಬಿರ ಯಶಸ್ವಿಯಾಗಿ ಮುಗಿಸಿದ್ದಾರೆ.
….
ಕೋಟ್
ಭಾನುವಳ್ಳಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 417 ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ಒದಗಿಸಿ ಕೊಟ್ಟಿರುವುದು ಸಂತಸ ತಂದಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ನೀವು ಮಾಡಿದ್ದೀರಾ.
– ಡಾ ಗಂಗಾಧರ ಸ್ವಾಮಿ, ದಾವಣಗೆರೆ ಜಿಲ್ಲಾಧಿಕಾರಿ
….
ಎಜುಕೇಶನ್ ಫ್ಯಾಮಿಲಿ
ತಂದೆ ಬಿ ತಿಪ್ಪಣ್ಣ ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದವರು, ತಾಯಿ ರುದ್ರಮ್ಮ ಇವರ ಏಕೈಕ ಪತ್ರ. ತೇಜಸ್ವಿ ಇವರಿಗೆ ನಾಲ್ಕು ಜನ ಅಕ್ಕಂದಿರು ಸುಜಾತ ಸುನೀತಾ ಅನಿತಾ ಕವಿತಾ ಮತ್ತು ಒಬ್ಬಳು ತಂಗಿ ವನಿತಾ ಇದ್ದಾರೆ. ಎಲ್ಲರೂ ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ.
,….
ಚಾರಿಟಿ ಫೌಂಡೇಶನ್ ನಿಂದ ಸಮಾಜ ಸೇವೆ
ಸ್ನೇಹ ಸಂಭ್ರಮ ಚಾರಿಟಿ ಫೌಂಡೇಶನ್ ಭಾನುವಳ್ಳಿ ಸರ್ಕಾರದಿಂದ ನೋಂದಣಿಯಾಗಿದ್ದು, ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗ್ರಾಮದ ಯುವಕ ಯುವತಿಯರಿಗೆ ಅವರ ಮುಂದಿನ ಭವಿಷ್ಯಕ್ಕೆ ಕೊಡುಗೆಗಳನ್ನು ನೀಡುವುದು ಉದ್ದೇಶವಾಗಿದೆ. ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸೇವೆಗಳನ್ನು ಮಾಡುವ ನಿಟ್ಟಿನಲ್ಲಿ ತೇಜಸ್ವಿ ಮತ್ತು ಅವರ ತಂಡ ಶ್ರಮ ವಹಿಸುತ್ತಿದೆ.
….
ಕೋಟ್
ಜಿಎಂಐಟಿ ಈಗ ಜಿಎಂ ವಿಶ್ವವಿದ್ಯಾಲಯವಾಗಿದ್ದು, ಈ ವಿಶ್ವವಿದ್ಯಾಲಯವನ್ನು ದೇಶದಲ್ಲಿಯೇ ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡಲು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಛಲ ಇದೆ.
–ತೇಜಸ್ವಿ ಕಟ್ಟೀಮನಿ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ
….ಜಿಎಂಐಟಿ 20 ವರ್ಷಗಳ ಸೇವೆಯಲ್ಲಿ, ಅಧ್ಯಕ್ಷರಾದ ಜಿಎಂ ಲಿಂಗರಾಜು ಅವರ ಮಾರ್ಗದರ್ಶನ, ಬೆಂಬಲ ನಿರಂತರವಾಗಿ ಸಿಕ್ಕಿದ್ದು, ಅವರಿಗೆ ಧನ್ಯವಾದಗಳು ಅರ್ಪಿಸಲು ಸಂತಸವಾಗುತ್ತಿದೆ.
–ತೇಜಸ್ವಿ ಕಟ್ಟೀಮನಿ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ