ದಾವಣಗೆರೆ : ರಾಣೆಬೆನ್ನೂರು ತಾಲೂಕಿನ ಐರಣಿ ಮಠದ ಹೆಸರು ಬಳಸಿ ಡಬ್ಲಿಂಗ್ ಮಾಡಿಕೊಡುತ್ತೇವೆ ಎಂದು ಹೇಳಿ ಭಕ್ತರನ್ನು ನಂಬಿಸಿದ ವಂಚಕರನ್ನು ಹರಿಹರ ಡಿವೈಎಸ್ಪಿ ಬಿ.ಎಸ್.ಬಸವರಾಜ್ ನೇತೃತ್ವದ ತಂಡ ಬೇದಿಸಿದೆ.
ಐರಣಿ ಮಠ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದು, ಹೆಚ್ಚಿನದಾಗಿ ಶ್ರೀಮಂತ ಭಕ್ತರೇ ಜಾಸ್ತಿ. ಇದನ್ನೇ ಎನ್ಕ್ಯಾಚ್ ಮಾಡಿಕೊಂಡ ತಂಡ ಒಂದು ವರ್ಷದಿಂದ ಈ ಕಾರ್ಯದಲ್ಲಿ ತೊಡಗಿ ಹಣ ಮಾಡಿಕೊಳ್ಳುತ್ತಿತ್ತು. ಒಂದು ವರ್ಷದಿಂದ ಪೊಲೀಸರು ಈ ಪ್ರಕರಣದ ಹುಡುಕಾಟದಲ್ಲಿ ತೊಡಗಿದ್ದರು. ಹೀಗಿರುವಾಗ ಅಂತಿಮವಾಗಿ ಆರೋಪಿತರ ಪತ್ತೆ ಕಾರ್ಯಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಸಂತೋಷ ಮತ್ತು ಜಿ.ಮಂಜುನಾಥ ಹಾಗೂ ದಾವಣಗೆರೆ ಗ್ರಾಮಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ಹರಿಹರ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಭಕ್ತರೇ ಟಾರ್ಗೆಟ್ : ಐರಣಿ ಮಠಕ್ಕೆ ರಾಜ್ಯಾದ್ಯಂತ ಸಾಕಷ್ಟು ಜನ ನಡೆದುಕೊಳ್ಳುತ್ತಿದ್ದರು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ವಂಚಕರು ಬೇರೆ ಜಿಲ್ಲೆಗಳಿಗೆ ಹೋಗಿ ನಾವು ಐರಣಿ ಮಠದ ಶಿಷ್ಯರು. ನಮ್ಮ ಬಳಿ 100 ರೂ ಮುಖಬೆಲೆಯ ನೋಟುಗಳಿದ್ದು ನೀವು 500 ರೂ ಮುಖಬೆಲೆಯ ನೋಟುಗಳನ್ನು ನೀಡಿದರೆ ನಾವು ನಿಮಗೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ಬಾಕ್ಸ್ ನೀಡುತ್ತಿದ್ದರು. ಈ ಬಗ್ಗೆ ಶಿವಮೊಗ್ಗದಲ್ಲಿ ಮೋಸ ಮಾಡಿದ್ದರು. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೊರ ಜಿಲ್ಲೆಯಲ್ಲಿ ಎತ್ತುವಳಿ
ವಂಚಕರು ಸ್ಥಳೀಯ ಹಾವೇರಿ, ರಾಣೆಬೆನ್ನೂರು, ದಾವಣಗೆರೆ ಬಿಟ್ಟು ಚಿತ್ರದುರ್ಗ, ಶಿವಮೊಗ್ಗಕ್ಕೆ ಹೋಗಿ ಜನರನ್ನು ವಂಚಿಸುತ್ತಿದ್ದರು. ಅದಕ್ಕಾಗಿಯೇ ಅವರು ಐಷಾರಾಮಿ ಕಾರು, ಹೊಸಬಟ್ಟೆ ಹಿಂದೆ ದಂಡು ಎಲ್ಲವನ್ನು ಸೃಷ್ಟಿ ಮಾಡುತ್ತಿದ್ದರು. ಅಲ್ಲದೇ ಐರಣಿ ಮಠಕ್ಕೆ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಪೋಟೋಗಳನ್ನು ಭಕ್ತರಿಗೆ ತೋರಿಸುತ್ತಿದ್ದರು. ಇದನ್ನು ನಂಬಿದ ಶ್ರೀಮಂತ ಭಕ್ತರು ನಮ್ಮ ಹಣ ಮಠಕ್ಕೆ ಹೋಗುತ್ತದೆ ಎಂದು ಹಣ ಕೊಡುತ್ತಿದ್ದರು.
ಆರೋಪಿಗಳು ಯಾರು ?
ಇಲಿಯಾಜ್, ಕಿರಣ, ದಾದಪೀರ್, ಮಹಾಂತೇಶ, ಮಂಜುನಾಥ ಬಂಧಿತರು.ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂದಿಸಿದಂತೆ 2.80.000 ರೂ. ಹಾಗು ಕೃತ್ಯಕ್ಕೆ ಬಳಸಿದ 15.00.000 ರೂ ಮೌಲ್ಯದ 03 ಕಾರುಗಳು ವಶಕ್ಕೆ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರೆದಿದೆ.
ಜೈಲಿನಲ್ಲಿ ಪರಿಚಯ
ಈ ಆರೋಪಿಗಳು ಜೈಲಿನಲ್ಲಿ ಪರಿಚಯವಾಗಿದ್ದು, ಅಲ್ಲಿ ಮೊದಲು ಹೊಸ ಪ್ಲಾನ್ ಮಾಡುತ್ತಾರೆ. ಅಲ್ಲಿಂದ ತಂಡ ರಚನೆ ಮಾಡಿ, ಮೊದಲು ಇಬ್ಬರು ಹೋಗಿ ಯಾರು ಐರಣಿ ಮಠದ ಭಕ್ತರು ಎಂದು ಕಂಡು ಹಿಡಿದು ಅವರ ಬಳಿ ಮೊದಲು ಹೋಗುತ್ತಾರೆ. ನಂತರ ತಂಡ ಹೋಗಿ ಅವರ ಮನವೊಲಿಸುತ್ತಿತ್ತು. ಸದರಿ ಪ್ರಕರಣದ ಆರೋಪಿತರ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿರುತ್ತಾರೆ.
ತಂಡದಲ್ಲಿದ್ದವರು
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಮಂಜುನಾಥ ಎಸ್. ಕುಪ್ಪೇಲೂರು ಪಿ.ಎಸ್.ಐ(ಕಾ&ಸು), ಚಿದಾನಂದಪ್ಪ ಪಿ.ಎಸ್.ಐ(ತನಿಖೆ) ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ನಾಗರಾಜ. ಕರಿಯಪ್ಪ, ರಮೇಶ, ದಾದಾಪೀರ್, ನೀಲಮೂರ್ತಿ, ಸತೀಶ, ಎಲ್.ಡಿ ಹನುಮಂತಪ್ಪ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ಮಹೇಂದ್ರ, ನಾಗರಾಜ, ಸಿದ್ದಪ್ಪ, ಮುರುಳಿ ಹಾಗು ಜಿಲ್ಲಾ ಪೊಲೀಸ್ ಕಛೇರಿ ಸಿಬ್ಬಂದಿ ರಾಘವೇಂದ್ರ ಶಾಂತರಾಜ ಒಳಗೊಂಡ ತಂಡ ಇತ್ತು. ಒಟ್ಟಾರೆ ಭಕ್ತಿ ಹೆಸರಿನಲ್ಲಿ ಹಣ ಮಾಡುತ್ತಿದ್ದ ಗ್ಯಾಂಗ್ ಈಗ ಜೈಲು ಸೇರಿದ್ದು, ಇನ್ನಷ್ಟು ಮಾಹಿತಿ ಹೊರಬೇಕಿದೆ.