ಸಾಲು ಅವಮಾನದಿಂದಲೇ ಸನ್ಮಾನ ಸಾಧ್ಯ…ಮಲ್ಲೇಶ್ ನಾಯ್ಕ್
ದಾವಣಗೆರೆ : ಪ್ರಸ್ತುತ ಬದಲಾಗುತ್ತಿರುವ ಜಗತ್ತಿನಲ್ಲಿ ಮನುಷ್ಯನ ಜೀವನ ನೋವು- ನಲಿವು, ಭೇದ-ಭಾವ, ಅಸೂಯೆ, ಸಿಟ್ಟು ,ಅವಮಾನ, ಗರ್ವ ,ಸೇಡು ಇವುಗಳನ್ನೇ ಸಾಧನೆ ಎಂದುಕೊಂಡಿರುವ ಆಧುನಿಕ ಯುವ ಪೀಳಿಗೆಯ ಭವಿಷ್ಯಕ್ಕೆ ತುಂಬಾ ಮಾರಕ .
ಮಕ್ಕಳು ಮೋಡ ಕರಗಿ ಹನಿಗಟ್ಟಿ ನೆಲದತ್ತ ಸುರಿದ ಶುಭ್ರವಾದ ನೀರಿನಂತೆ, ನೆಲಕ್ಕೆ ಬಿದ್ದ ನಂತರವೇ ನೀರಹನಿ ಆಯಾ ನೆಲದ ಗುಣವನ್ನು ಪಡೆದು ಅಶುದ್ಧವಾಗುತ್ತದೆ. ಹಾಗೆ ಹುಟ್ಟುವಾಗ ಅಪ್ಪಟ ವಿಶ್ವಮಾನವ ಮರಿಯಾಗಿ ಹುಟ್ಟಿದ ಮಗುವಿಗೆ ಆದಷ್ಟು ಬೇಗ ಒoದು ಜಾತಿಗೆ ಸೇರಿದ ಹೆಸರನ್ನು ಕೊಟ್ಟು ಅದನ್ನು ನಿರಂತರವಾಗಿ ಅವಹೇಳನ ಮಾಡುವ ಈ ಪ್ರಸ್ತುತ ಯುಗದಲ್ಲಿ ವಿಜಯಶಾಲಿ ಆಗಬೇಕೆಂದರೆ ಸಾಲುಸಾಲು ಅವಮಾನವನ್ನು ಸಹಿಸಿಕೊಂಡರೆ ಮಾತ್ರ ಸಾಧ್ಯ . ಬಾಲ್ಯದಿಂದ ಹಿಡಿದು ಯೌವನದವರೆಗೆ ಏನೂ ತಿಳಿಯದೆ ಬೆಳೆ ಬೆಳೆದು ಬಿಡುತ್ತೆವೆ.ಅದರೊಂದಿಗೆ ಕಷ್ಟ ನೋವನ್ನು ಅರಿಯದೆ ಬೆಳೆದು ಬಿಡುತ್ತವೆ .ಆದರೆ ತದನಂತರ ಯವ್ವನದ ಬದುಕಿಗೆ ಕಾಲಿಟ್ಟರೆ ನಮ್ಮ ಮೇಲಿರುವ ಜವಾಬ್ದಾರಿಗಳು ನೂರಾರು ಕನಸುಗಳನ್ನು ತೊರೆಯುವಂತೆ ಮಾಡುತ್ತವೆ.
ವಿಶ್ವಜ್ಞಾನಿ ಡಾ॥ ಬಿ ಆರ್ ಅಂಬೇಡ್ಕರ್ ರವರು ತಮ್ಮ ಬಾಲ್ಯ ಜೀವನದಿಂದ ಹಿಡಿದು ಸಾವಿರಾರು ತೊಂದರೆ ಅವಮಾನಗಳನ್ನು ಎದುರಿಸಿ ಇಡೀ ವಿಶ್ವವೇ ಹಿಂತಿರುಗಿ ಅವರ ಕಡೆ ನೋಡುವ ಹಾಗೆ ಸಾಧಿಸಿದ್ದಾನೆ.
ಈ ಸಾಲು ಸಾಲು ಅವಮಾನದಿಂದಲೇ ಸನ್ಮಾನ್ಯ ಸಾಧ್ಯ ಎಂಬುದಕ್ಕೆ ವಿಶ್ವಜ್ಞಾನಿ ಡಾ॥ ಬಾಬಾಸಾಹೇಬ್ ಅಂಬೇಡ್ಕರ್ ರವರೆ ನಿಜವಾದ ಉದಾಹರಣೆ. ಮನುಷ್ಯ ಜೀವನದಲ್ಲಿ ನಾವು ಅರಿಯಬೇಕಾದದ್ದು ಏನೆಂದರೆ ಶತ್ರುವೊಬ್ಬ ಮುಂದುವರಿದರು ಪರವಾಗಿಲ್ಲ , ಆದರೆ ಗೆಳೆಯನೊಬ್ಬ ಹಿಂದುಳಿಯಬಾರದು .ಸುತ್ತುತ್ತಿರುವ ಈ ಭೂಮಿಯಲ್ಲಿ ಸತ್ತು ಹೋಗುವವರು ನಾವೆಲ್ಲ …
ಹೊತ್ತು ತಂದಿಲ್ಲ ಏನನ್ನೂ, ಒಯ್ಯುವುದಿಲ್ಲ ಯಾವುದನ್ನು, ಇದ್ದಷ್ಟು ದಿನ ಗಳಿಸಬೇಕು ಮತ್ತು ಉಳಿಸಬೇಕು ಹೊರತು ದೂರ ಮಾಡಿಕೊಳ್ಳಬಾರದು . ಜೀವನವು ತುಂಬಾ ನಗುವಾಗ ಬದುಕು ಅಳೋದನ್ನ ಹೇಳಿಕೊಡುತ್ತದೆ. ಎಲ್ಲರೂ ಹತ್ತಿರವಾಗುವ ಸಮಯಕ್ಕೆ ಜೀವನ ಒಂಟಿ ಆಗುವಂತೆ ಮಾಡುತ್ತದೆ .ತುಂಬಾ ಮಾತನಾಡಲು ಕಲಿತಾಗ ಜಗತ್ತು ಮೌನವಾಗಿರುವುದನ್ನು ಕಲಿಸುತ್ತದೆ. ಸುಖ ಬರುವ ಹೊತ್ತಿಗೆ ದುಃಖ ನಗುವನ್ನು ಮರೆಸುತ್ತದೆ. ತದಕಾರಣ ಬದುಕನ್ನು ಸಮತೋಲನದಿಂದ ಎದುರಿಸಿದರೆ ಸನ್ಮಾನ ಖಂಡಿತ .
ಈ ಮಾನವ ಬದುಕಿನಲ್ಲಿ “ಬೇಕು” ಎಂಬ ಪದ ನಮ್ಮನ್ನು ಗಾಣದೆತ್ತಿನಂತೆ ದುಡಿಯುವಂತೆ ಮಾಡಿಬಿಡುತ್ತದೆ. ಏಕೆಂದರೆ ಕಾಯಕವಿಲ್ಲದೆ ಕೈಲಾಸ ನೊಡಲು ಸಾಧ್ಯವಿಲ್ಲ . ಎಲ್ಲರನ್ನೂ ತಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದರ ಬಗ್ಗೆ ತಮಗೆ ಅರಿವಿರುವುದಿಲ್ಲ .ಸಾಧ್ಯವಾದಷ್ಟು ದೊಡ್ಡ ಗುರಿಯನ್ನು ಹೊಂದಬೇಕು .
ಯುವಕರಾಗಿದ್ದಾಗ ಹಿರಿಯರನ್ನು ಗೌರವಿಸಬೇಕು. ಬಲಿಷ್ಠರಾಗಿದ್ದಾಗ ನಿಶ್ಯಕ್ತರಿಗೆ ಸಹಾಯ ಮಾಡಬೇಕು.ನಾವು ಸರಿ ಇದ್ದಾಗ ತಪ್ಪು ಮಾಡಿದವರನ್ನು ಕ್ಷಮಿಸಬೇಕು.ಏಕೆಂದರೆ ಒoದುದಿನ ನಾವು ಹಿರಿಯರೆನಿಸಬಹುದು, ನಿಶ್ಯಕ್ತರಾಗಬಹುದು, ತಪ್ಪು ಮಾಡದಬಹುದು, ಕಾಲವನ್ನು ಕಲಿತು ನಿಜವಾದ ಕಷ್ಟವನ್ನು ಅರಿತು ಬದುಕುವವನೇ ನಿಜವಾದ ಜ್ಞಾನಿ. ನಿಂದನೆ, ಮತ್ಸರ, ನೋಯಿಸುವುದು ಇವುಗಳೇ ಸಾಧನೆ ಎಂದುಕೊಂಡಿರುವ ಆಧುನಿಕ ಯುವ ಪೀಳಿಗೆಯ ಭವಿಷ್ಯಕ್ಕೆ ತುಂಬಾ ಮಾರಕವಾಗಬಹುದು.
ನಾವು ಬದುಕುತ್ತಿರುವುದು ಕಾಲೆಳೆಯುವ ಸಮಾಜದಲ್ಲಿ , ಈ ಬದುಕು ನಮಗೆ ಅನಿವಾರ್ಯವಾಗಿದೆ .ಏಕೆಂದರೆ ನಾನು ಬೆಳೆದದ್ದು ಹೂವುಗಳ ನಡುವೆ ಅಲ್ಲ ಬದಲಾಗಿ ಮುಳ್ಳುಗಳ ಮಧ್ಯೆ , ಸಮಸ್ಯೆಗಳೊಂದಿಗೆ ಬದುಕುವುದನ್ನು ಚಿಕ್ಕಂದಿನಿಂದಲೂ ಹೇಳಿಕೊಡಲಾಗಿತ್ತು . ಹಾಗಾಗಿ ನಮಗೆ ನಾವೇ ಕಂಡುಕೊಡಬೇಕಾದಂತಹ ಸತ್ಯವೇನೆಂದರೆ ‘ಗೆಲ್ಲುವವರೆಗೂ ಹೋರಾಡುತ್ತಲೇ ಇರಬೇಕು ‘ ಎಲ್ಲಿಯವರೆಗೆ ನಾವು ಗೆಲ್ಲುವುದು ಹೋರಾಟವು ನಿರಂತರವಾಗಿರುತ್ತೆ..
ಸತ್ಯಕ್ಕೆ ಸಾವಿಲ್ಲ ನಿಜ .. ಆದರೆ ಈಗಿನ ಸಮಾಜದಲ್ಲಿ ಸತ್ಯಕ್ಕೆ ಗೆಲುವೇ ಇಲ್ಲ ಎಂಬುದು ನಿಜ .. ತದಕಾರಣ ಬದುಕಿನಲ್ಲಿ ಎದುರಾಗುವ ಬಡತನ ,ಕಷ್ಟ ,ಹಸಿವು ಅವಮಾನಗಳು ಕಲಿಸುವಂತಹ ಪಾಠವನ್ನು ಜಗತ್ತಿನ ಯಾವ ವಿಶ್ವವಿದ್ಯಾನಿಲಯವು ಕಲಿಸುವುದಿಲ್ಲ. ಎಲ್ಲಾ ನೋವುಗಳನ್ನು ಸಹಿಸಿಕೊಂಡು ನಿರಂತರ ಪರಿಶ್ರಮದಿಂದ ಗುರಿಯೆಡೆಗೆ ಸಾಗಿದರೆ ಸನ್ಮಾನ್ಯ ಖಂಡಿತ ಸಾಧ್ಯ.
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದೆ ಇದ್ದರೆ ಅವಮಾನಿಸುತ್ತಾರೆ ,ಕೆಲಸ ಮಾಡದಿದ್ದರೆ ಅವಮಾನಿಸುತ್ತಾರೆ , ಮಾತನಾಡದಿದ್ದರೆ ಅವಮಾನಿಸುತ್ತಾರೆ , ಸುಮ್ಮನಿದ್ದರೂ ಅವಮಾನಿಸುತ್ತಾರೆ , ದುಡಿಯದಿದ್ದರೆ ಅವಮಾನಿಸುತ್ತಾರೆ, ನಾವು ಹೇಗಿದ್ದರೂ ಅವಮಾನಿಸುವ ಈ ಕೆಟ್ಟ ಪ್ರಪಂಚದಲ್ಲಿ ತಾಳ್ಮೆ, ನಂಬಿಕೆ, ಕಠಿಣ ಪರಿಶ್ರಮಗಳೇ ನಿಮ್ಮ ಸನ್ಮಾನಕ್ಕೆ ದಾರಿ.
” ತನ್ನೊಳಗಿರುವ ನೆಮ್ಮದಿಯನ್ನು ಕಡೆಗಣಿಸಿ ,
ಪ್ರಪಂಚದಲ್ಲಿರುವ ಸಾಸಿವೆ ಕಾಳಷ್ಟು ಸುಖಕ್ಕೋಸ್ಕರ ಬೆಟ್ಟದಷ್ಟು ನೋವು ಕೊಡುವ ಏಕೈಕ ಜೀವಿ ಎಂದರೆ ಅದು ಮನುಷ್ಯ “.
ಮಲ್ಲೇಶ್ ನಾಯ್ಕ ಎಂ .
ಉಪನ್ಯಾಸಕರು, ಲೇಖಕರು .ದಾವಣಗೆರೆ
ಪ್ರತಿಕ್ರಿಯಿಸಿ (9632818431)