ರೊಬಸ್ಟಾ ಕಾಫಿ ಬೆಲೆ ಕೆಜಿಗೆ 200 ರೂ.ನಿಂದ 420 ರೂ.ಗೆ-ಅರೇಬಿಕಾ ಕೆಜಿಗೆ 290 ರೂ.ನಿಂದ 465 ರೂ.ಗೆ ಏರಿಕೆ.
ಬೆಂಗಳೂರು.
ಈ ವರ್ಷ ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಅಕಾಲಿಕ ಮಳೆಯಿಂದ ಶೇ.15ರಷ್ಟು ಕಾಫಿ ಬೆಳೆ ನಾಶವಾಗಿದ್ದು, ಕಾಫಿ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.
ಸದ್ಯ ಕಾಫಿ ಬೆಳೆಗಾರರಲ್ಲಿ ಈಗ ಬೆಳೆ ಇಲ್ಲ, ಬೆಳೆ ಇದ್ದಾಗ ಮಳೆ ಬಂದು ಹಾಳಾಗಿದೆ. ಈ ನಡುವೆ ಬೆಲೆ ಏರಿದ್ದರೂ, ರೈತನ ಬಳಿ ಬೆಳೆ ಇಲ್ಲ. 2023 ಮತ್ತು 2024 ರವರೆಗಿನ ಹವಾಮಾನದ ಬದಲಾವಣೆಗಳು ಅನಿಯಮಿತ ಹಣ್ಣಾಗುವಿಕೆಗೆ ಮತ್ತು ಋತುವಿನಲ್ಲಿ ಇಳುವರಿಯಲ್ಲಿ ಕುಸಿತಕ್ಕೆ ಕಾರಣವಾಗಿವೆ.
ಅಕಾಲಿಕ ಮಳೆ.
ಡಿಸೆಂಬರ್ ಮತ್ತು ಫೆಬ್ರವರಿ ನಡುವೆ ಕಾಫಿ ಕೊಯ್ಲು ಮಾಡಲಾಗುತ್ತಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಈಶಾನ್ಯದಲ್ಲಿ ನೈರುತ್ಯ ಮುಂಗಾರು ಜೋರಾಗಿತ್ತು. ಕೆಲವು ಪ್ರದೇಶಗಳಲ್ಲಿ ನವೆಂಬರ್ನಲ್ಲಿಯೂ ಮಳೆಯಾಯಿತು. ಮೂರು ಪ್ರಮುಖ ಕಾಫಿ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಇಳುವರಿಯನ್ನು ನಿರೀಕ್ಷಿಸಲಾಗಿದ್ದರೂ, ಮಳೆಯಿಂದ ಬೆಳೆ ಹಾಳಾಗಿದೆ.
ಕಳೆದ ವರ್ಷ ನವೆಂಬರ್-ಡಿಸೆAಬರ್ ಅವಧಿಯಲ್ಲಿ ಮಳೆಯಾಗಿತ್ತು. ನಂತರ ಜನವರಿಯಲ್ಲಿ ಮಳೆಯಾಗಿದೆ. ಫೆಬ್ರವರಿ-ಮಾರ್ಚ್ ಅವಧಿಯಲ್ಲಿಯೂ ಮಳೆಯಾಗಿದೆ. ಕಳೆದ ವರ್ಷ 3.6 ಲಕ್ಷ ಮೆಟ್ರಿಕ್ ಟನ್ಗಳಿಗೆ ಹೋಲಿಸಿದರೆ 3.5 ಲಕ್ಷ ಮೆಟ್ರಿಕ್ ಟನ್ಗಳ ಸಾಧಾರಣ ಉತ್ಪಾದನೆವಿದೆ.
ಎಷ್ಟು ದರ ಹೆಚ್ಚಳ.
ಈಗಾಗಲೇ ಅರೇಬಿಕಾ ಮತ್ತು ರೋಬಸ್ಟಾ ಕಾಫಿಯ ಬೆಲೆಯಲ್ಲಿ ಏರಿಕೆಯಾಗಿದೆ. ಜಾಗತಿಕವಾಗಿ ಕಾಫಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ, ವಿವಿಧ ಅಂಶಗಳಿAದ ಅದರ ಉತ್ಪಾದನೆಯು ಕಡಿಮೆಯಾಗಿದೆ.
ಭಾರತೀಯ ಕಾಫಿಗೆ ಹೆಚ್ಚಿನ ಬೇಡಿಕೆಯಿದ್ದು, ಬೇಡಿಕೆಯನ್ನು ಪೂರೈಸಬೇಕಾಗಿದೆ. ಐಸಿಟಿಎ ಪ್ರಕಾರ, ಭಾರತವು 3.5 ಲಕ್ಷ ಟನ್ಗಳಷ್ಟು ಕಾಫಿಯನ್ನು ಉತ್ಪಾದಿಸುತ್ತದೆ, ಈ ಪೈಕಿ ಶೇ.70ರಷ್ಟು ಬೆಳೆಯು ರೊಬಸ್ಟಾ ತಳಿಯಾಗಿದೆ. ಒಟ್ಟು ಉತ್ಪಾದನೆಯಲ್ಲಿ ಸುಮಾರು ಒಂದು ಲಕ್ಷ ಟನ್ ದೇಶೀಯವಾಗಿ ಬಳಕೆಯಾಗುತ್ತದೆ.
ಜನವರಿಯಿಂದ ಕಾಫಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ರೊಬಸ್ಟಾ ಕಾಫಿ ಬೆಲೆ ಕೆಜಿಗೆ 200 ರೂ.ನಿಂದ 420 ರೂ.ಗೆ ಮತ್ತು ಅರೇಬಿಕಾ ಕೆಜಿಗೆ 290 ರೂ.ನಿಂದ 465 ರೂ.ಗೆ ಏರಿಕೆಯಾಗಿದೆ.
ಹವಾಮಾನ ಬದಲಾವಣೆಯಿಂದಾಗಿ ಕಾಫಿ ಉತ್ಪಾದನೆಯಲ್ಲಿ ಶೇ.20ರಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕಾಫಿ ಬೀಜದ ಬೆಲೆ ಕೆಜಿಗೆ 200- 280 ರಿಂದ ಹೆಚ್ಚಾಗಿದೆ ಎಂದು ಐಸಿಟಿಎ ಅಧ್ಯಕ್ಷ ಪೆರಿಕಲ್ ಎಂ.ಸುAದರ್ ಹೇಳಿದ್ದಾರೆ.
ಕಾಫಿಯ ಮುಖ್ಯ ಪೂರೈಕೆದಾರ ಬ್ರೆಜಿಲ್ ಮತ್ತು ವಿಯೆಟ್ನಾಂದಲ್ಲಿ ಕೈಕೊಟ್ಟ ಹವಾಮಾನ ಬ್ರೆಜಿಲ್ ಮತ್ತು ವಿಯೆಟ್ನಾನಲ್ಲಿ ಕೈಕೊಟ್ಟ ಹವಾಮಾನನಿಂದ ಕಾಫಿ ಬೆಲೆಯು ಗಗನಕ್ಕೇರಿದೆ.
ಬ್ರೇಜಿಲ್ನಲ್ಲಿ ಬರ ಉಂಟಾದರೆ ಮತ್ತು ವಿಯೆಟ್ನಾಂನಲ್ಲಿ ಟೈಫೂನ್ ಪರಿಸ್ಥಿತಿ ಇರುವ ಕಾರಣ ಕಾಫಿ ಬೀನ್ಸ್ ಪೂರೈಕೆಯಲ್ಲಿ ಇಳಿಮುಖವಾಗಿದೆ.ಸದ್ಯ ಬ್ರೆಜಿಲ್ ಮತ್ತು ವಿಯೆಟ್ನಾಂ ಬದಲಿಗೆ ಪೆರು, ಥೈಲ್ಯಾಂಡ್ ಮತ್ತು ಇತರ ಸಣ್ಣ ಉತ್ಪಾದಕರಿಂದ ಕಾಫಿಯನ್ನು ತರಿಸಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ.
ಕಾಫಿ ರಫ್ತು ಶೇ 12ರಷ್ಟು ಏರಿಕೆ
2023-24ನೇ ಆರ್ಥಿಕ ವರ್ಷದಲ್ಲಿ 10,636 ಕೋಟಿ ಮೌಲ್ಯದ ಕಾಫಿ ರಫ್ತು ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.12.22ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.2022-23ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ 9.473 ಕೋಟಿ ಮೌಲ್ಯದ ಕಾಫಿ ರಫ್ತು ಮಾಡಲಾಗಿತ್ತು.
ರೊಬಸ್ಟಾ ಕಾಫಿಗೆ ಹೆಚ್ಚಿದ ಬೇಡಿಕೆಯಿಂದಾಗಿ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ.2023-24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 1.25 ಲಕ್ಷ ಟನ್ನಷ್ಟು ಕಾಫಿ ರಫ್ತು ಮಾಡಲಾಗಿದೆ. ಇದರ ಹಿಂದಿನ ಆರ್ಥಿಕ ವರ್ಷದಲ್ಲಿ 1.10 ಲಕ್ಷ ಟನ್ನಷ್ಟು ರಫ್ತು ಮಾಡಲಾಗಿತ್ತು. ಈ ಅವಧಿಯಲ್ಲಿ ಒಟ್ಟಾರೆ ರಫ್ಟಿನಲ್ಲಿ ಶೇ 13.35ರಷ್ಟು ಏರಿಕೆಯಾಗಿದೆ