ನಂದೀಶ್ ಭದ್ರಾವತಿ, ದಾವಣಗೆರೆ
ಕಣ್ಣು ಇಲ್ಲದೇ ಹೋದ್ರು, ಪುಟ್ಬಾಲ್ ನಲ್ಲಿ ಸಾಧನೆ ಮಾಡಿದ್ದ ಯುವತಿಯೊಬ್ಬಳು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಾನಸ ಅಪಘಾತದಲ್ಲಿ ಮೃತ ಪಟ್ಟ ಅಂಧೆ. ಇವರು ಹುಟ್ಟಿನಿಂದ ಅಂಧ ಯುವತಿಯಾಗಿದ್ದು, ಪುಟ್‌ಬಾಲ್‌ನಲ್ಲಿ ಹೆಚ್ಚು ಆಸಕ್ತಿಹೊಂದಿದ್ದರು. ರಾಜ್ಯ, ರಾಷ್ಟ್ರಮಟ್ಟದ ಅಂಧರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅಲ್ಲದೇ ಐಎಎಸ್ ಮಾಡಬೇಕೆಂದಿದ್ದ ಈ ಯುವ ಪ್ರತಿಭೆ ಅಪಘಾತದಲ್ಲಿ ಮೃತಪಟ್ಟಿರುವುದು ಹೃದಯಕಲುಕುವಂತಿದೆ.
ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ 13 ಜನ ಮೃತಪಪಟ್ಟವರಲ್ಲಿ ಮಾನಸಕೂಡ ಒಬ್ಬರಾಗಿದ್ದು, ಪುಟ್ಬಾಲ್ ಸೇರಿದಂತೆ ಸಾಕಷ್ಟು ಅಂಧರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಭಾರತದ ಅಂಧರ ಫುಟ್ಬಾಲ್ ತಂಡದ ನಾಯಕಿಯಾಗಿದ್ದರು.
ಹುಟ್ಟು ಕುರುಡಿಯಾಗಿದ್ದ ಮಾನಸ ಪಂಜಾಬ್ ಹಾಗೂ ದೆಹಲಿ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು ಮಾನಸ. ಕರ್ನಾಟಕದ ಅಂಧರ ಬಾಲಕಿಯರ ಕ್ರಿಕೆಟ್ ತಂಡವನ್ನು ಮಾನಸ ಪ್ರತಿನಿಧಿಸಿದ್ದರು.