ಬೆಂಗಳೂರು : ಅಂತೂ ಬಿಜೆಪಿಯ ಬಿಗ್ ವಿಕೆಟ್ ಪತನವಾಗಿದೆ. ಹಾಲಿ ಎಂಪಿ ಒಬ್ರು ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ ಕೈ ಹಿಡಿಯೋಕೆ ಸಜ್ಜಾಗಿದ್ದಾರೆ.. ಅಷ್ಟೇ ಅಲ್ಲ., ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರೋಕೆ ಶಾಸಕ ಲಕ್ಷ್ಮಣ್ ಸವದಿ ಅಖಾಡಕ್ಕಿಳಿದಿದ್ದಾರೆ. ಹಾಗಾದ್ರೆ ಉತ್ತರ ಕರ್ನಾಟಕದಲ್ಲಿ ಮತ್ತೆ ಲಿಂಗಾಯತ ವಿರೋಧಿ ಅಲೆ ಬಿಜೆಪಿಗೆ ಶಾಪವಾಗಿ ಕಾಡುತ್ತಾ.? ರಾಜ್ಯ ಬಿಜೆಪಿಯಲ್ಲಿ ಅಪ್ಪ-ಮಕ್ಕಳ ಆಟಕ್ಕೆ ಸಾಕಷ್ಟು ಪ್ರಭಾವಿ ಮುಖಂಡರೇ ಮುನಿಸಿಕೊಂಡಿದ್ದು, ಒಬ್ಬೊಬ್ಬರಾಗೇ ಹೊರ ಬರಲು ರೆಡಿಯಾಗ್ತಿದ್ದಾರಾ.? ಅಷ್ಟಕ್ಕೂ ಬಿಜೆಪಿಗೆ ಗುಡ್ಬೈ ಹೇಳಿರೋ ಹಾಲಿ ಬಿಜೆಪಿ ಸಂಸದರು ಯಾರು ಅಂದ್ರಾ..?
ರಾಜ್ಯ ಬಿಜೆಪಿಯಲ್ಲಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ 14 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ. ಟಿಕೆಟ್ ಕೈ ತಪ್ಪಿದೆ ಅಂದ್ರೆ ಅವರ ರಾಜಕೀಯ ಭವಿಷ್ಯ ಅಂತ್ಯ ಅಂತ್ಲೇ ಅರ್ಥ ಅನ್ನೋ ಮಾತುಗಳು ಕೇಳಿಬರ್ತಾಯಿವೆ. ಹೀಗಾಗಿ ಕೆಲ ಹಾಲಿ ಬಿಜೆಪಿ ಸಂಸದರು ಬಿಜೆಪಿಗೆ ಗುಡ್ಬೈ ಹೇಳಿ ಕಾಂಗ್ರೆಸ್ನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸಿದ್ರು. ಅಂತವರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಸದಾನಂದಗೌಡ್ರು ಕೂಡ ಒಬ್ರು ಅನ್ನೋ ಮಾತಿದೆ. ಇವರು ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ರು. ಆದ್ರೆ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡೋಕೆ ನಿರಾಕರಿಸಿದ್ದೆರಿಂದ ಸದಾನಂದಗೌಡ್ರು ವಿಧಿಯಿಲ್ಲದೆ ಬಿಜೆಪಿಯಲ್ಲೇ ಉಳ್ಕೊಂಡ್ರು. ಆದ್ರೀಗ ಮತ್ತೋರ್ವ ಬಿಜೆಪಿ ಸಂಸದರು ಆಗಿದ್ದಾಗ್ಲಿ ಅಂತೇಳಿ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ. ಹಾಗಾದ್ರೆ ಯಾರು ಅವರು ಅಂದ್ರಾ.? ಅವರು ಬೇರ್ಯಾರೂ ಅಲ್ಲ. ಕರಡಿ ಸಂಗಣ್ಣ.
ಹೌದು ವೀಕ್ಷಕರೇ, ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಹಾಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ನಿನ್ನೆ ಬಿಜೆಪಿ ಪಕ್ಷಕ್ಕೆ ಗುಡ್ಬೈ ಹೇಳಿದ್ದಾರೆ. ಇವರು ಇವತ್ತು ಕಾಂಗ್ರೆಸ್ ಸೇರೋ ಸಾಧ್ಯತೆ ಇದ್ದು, ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಸಂಗಣ್ಣ ಕರಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಹೀಗಿರೋವಾಗ್ಲೇ, ಕರಡಿ ಸಂಗಣ್ಣ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿದ್ದು, ಕಾಂಗ್ರೆಸ್ ಕರೆತರಲು ಮಾತುಕತೆ ನಡೆಸಿದ್ದಾರೆ ಅನ್ನೋ ಮಾತುಗಳು ಹರಿದಾಡ್ತಾಯಿವೆ. ಇನ್ನ ಈ ಬಗ್ಗೆ ರಿಯಾಕ್ಟ್ ಮಾಡಿರೋ ಶಾಸಕ ಲಕ್ಷ್ಮಣ್ ಸವದಿ, ಕಾಂಗ್ರೆಸ್ ಪಕ್ಷಕ್ಕೆ ಬರುವುದರ ಬಗ್ಗೆ ನಾವು ಮಾತಾಡಿಲ್ಲ. ಅದಕ್ಕೆ ಇನ್ನೂ ಸಮಯ ಇದೆ. ಅದನ್ನ ಸಂಗಣ್ಣ ಅವರು ತೀರ್ಮಾನ ಮಾಡ್ತಾರೆ. ಅವರೂ ರಾಜಕೀಯ ನೆಲೆ ಹುಡುಕಿ ಕೊಳ್ಳಬೇಕು. ಅದನ್ನ ಅವರು ಹಾಗೂ ಅವರ ಕುಟುಂಬ ಸದಸ್ಯರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ. ಸಂಸದ ಸಂಗಣ್ಣ ಕರಡಿ, ನಾನು ಸ್ನೇಹಿತರು. ಕುಶಲೋಪರಿ ವಿಚಾರಿಸಲು ಅವರ ಮನೆಗೆ ಬಂದಿರುವೆ. ಪಕ್ಷ ಬದಲಾವಣೆ, ರಾಜಕೀಯ ನಡೆ ಬಗ್ಗೆ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದಿದ್ದಾರೆ.
ನಿಮಗೆ ಗೊತ್ತಿರ್ಲಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಶೆಟ್ರು ಮತ್ತು ಸವದಿಗೆ ಟಿಕೆಟ್ ಮಿಸ್ ಮಾಡಿದ್ದ ಬಿಜೆಪಿ ನಾಯಕರು ಅವರು ಸೆಟೆದು ನಿಂತು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ರು. ಇದ್ರಿಂದ ಉತ್ತರ ಕರ್ನಾಟಕದ ಲಿಂಗಾಯತ ವೋಟ್ಗಳು ಚದುರಿ ಹೋಗಿದ್ವು. ಅದೇ ರೀತಿ ಈಗ ಕರಡಿ ಸಂಗಣ್ಣ ಅವರಂಥಾ ಲಿಂಗಾಯತ ಮುಖಂಡರು ಕಾಂಗ್ರೆಸ್ ಸೇರೋದ್ರಿಂದ ಮತ್ತು ಗ್ಯಾರಂಟಿ ಯೋಜನೆಗಳು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯೋ ಸಾಧ್ಯತೆ ಇದೆ. ಇನ್ನ ಕರಡಿ ಸಂಗಣ್ಣ ಬಿಜೆಪಿ ಬಿಡೋಕೆ ಕಾರಣ ಏನ್ ಗೊತ್ತಾ.? ಅದನ್ನ ಡಿಟೇಲಾಗಿ ತೋರಿಸ್ತೀವಿ ನೋಡಿ. ಲೋಕಸಭಾ ಟಿಕೆಟ್ ಮಿಸ್ ಆದ ಬೆನ್ನಲ್ಲೇ, ಬಿಜೆಪಿ ನಾಯಕರು ಸೂಕ್ತ ಸ್ಥಾನಮಾನದ ಭರವಸೆಯನ್ನು ನೀಡಿದ್ರು. ಅಮಿತ್ ಶಾ ರಾಜ್ಯಕ್ಕೆ ಬಂದಾಗ ಈ ಬಗ್ಗೆ ಚರ್ಚಿಸಿ ಹೇಳೋದಾಗಿ ಹೇಳಿದ್ದರು. ರಾಜ್ಯಸಭಾ ಸಧಸ್ಯ ಇಲ್ಲವೇ ಎಂಎಲ್ಸಿ ಬೇಡಿಕೆ ಇಟ್ಟಿದ್ದರು. ಆದ್ರೆ ಇಲ್ಲಿವರಗೆ ಸ್ಥಾನಮಾನದ ಬಗ್ಗೆ ಹೈಕಮಾಂಡ್ ನಾಯಕರಿಂದ ಯಾವುದೇ ಸಂದೇಶ ಬಂದಿಲ್ಲಾ. ಹೀಗಾಗಿ ಯಾವುದೇ ಸ್ಥಾನಮಾನ ಸಿಗದೇ ಪಕ್ಷದಲ್ಲಿ ಹೇಗೆ ಇರೋದು, ಕಾರ್ಯಕರ್ತರನ್ನು ಹೇಗೆ ಹಿಡಿದಿಟ್ಟುಕೊಳ್ಳುವದು ಅನ್ನೋ ಗೊಂದಲದಲ್ಲಿ ಕರಡಿ ಸಂಗಣ್ಣ ಇದ್ರು. ಇದ್ರ ಜೊತೆಗೆ ಕೊಪ್ಪಳ ಜಿಲ್ಲೆಯ ಬಿಜೆಪಿ ನಾಯಕರು ಕೂಡಾ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಯಾವುದೇ ಸಲಹೆ ಪಡೆಯುತ್ತಿಲ್ಲ. ಹೀಗಾಗಿ ನಾನೇ ಮುಂದೆ ಹೋಗಿ ಹೇಗೆ ಪ್ರಚಾರ ಮಾಡಲಿ ಅಂತ ನೋವನ್ನು ಕರಡಿ ಸಂಗಣ್ಣ ತಮ್ಮ ಬೆಂಬಲಿಗರ ಮುಂದೆ ಹೇಳಿಕೊಂಡಿದ್ರು. ಇದೆಲ್ಲದರ ಮಧ್ಯೆ ಕರಡಿ ಸಂಗಣ್ಣ ದೃಢ ನಿರ್ಧಾರ ತಗೊಂಡು ಬಿಜೆಪಿಯಿಂದ ಕಾಲು ಹೊರಗಿಟ್ಟಿದ್ದಾರೆ. ಇತ್ತ ಲಿಂಗಾಯತ ಸಮುದಾಯದ ಕರಡಿ ಸಂಗಣ್ಣರನ್ನು ಪಕ್ಷಕ್ಕೆ ಸೆಳೆಯುವ ಮೂಲಕ, ಲಿಂಗಾಯತ ಮತಗಳು ಕೂಡಾ ಪಕ್ಷಕ್ಕೆ ಬರುವಂತೆ ನೋಡಿಕೊಂಡು, ಅಭ್ಯರ್ಥಿ ಗೆಲ್ಲಿಸಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಕಾಂಗ್ರೆಸ್ ನಾಯಕರು.
ಹಾಗಾದ್ರೆ ಕರಡಿ ಸಂಗಣ್ಣ ಕಾಂಗ್ರೆಸ್ ಸೇರಿದ್ರೆ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರ ಗೆಲುವಿನ ಹಾದಿ ಮತ್ತಷ್ಟು ಸಲೀಸಾಗುತ್ತಾ.? ತಮ್ಮನ್ನ ಕೇವಲವಾಗಿ ನಡೆಸಿಕೊಂಡ ಬಿಜೆಪಿಗೆ ಕರಡಿ ಸಂಗಣ್ಣ ಬಿಸಿ ತುಪ್ಪವಾಗಿ ಬದಲಾಗ್ತಾರಾ?