ದಾವಣಗೆರೆ : ಆರೋಪ ಇದ್ರೂ ಬ್ರಿಜ್ ಭೂಷಣ್ ಬಂಧನ ಯಾಕಿಲ್ಲ?ಮಹಿಳೆಯರ ವಿಷ್ಯದಲ್ಲಿ BJP ಅಸಡ್ಡೆ ಯಾಕೆ..!? BJPಗರಿಗೊಂದು ನ್ಯಾಯ… ಇತರರಿಗೊಂದು ನ್ಯಾಯಾನಾ?
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್. ಇವರ ಮೇಲೆ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರೋ ಆರೋಪ ಇದೆ. 1 ವರ್ಷದ ಮೊದ್ಲಿದ್ಲೂ ಈ ಆರೋಪ ಇದ್ರೂ ಇವರ ಬಂಧನ ಯಾಕಾಗಿಲ್ಲ.? ದೇಶದ ಮಹಿಳೆಯರ ವಿಷ್ಯದಲ್ಲಿ ಬಿಜೆಪಿ ಅಸಡ್ಡೆ ತೋರಿಸುತ್ತಿದೆಯಾ..? BJPಗರಿಗೊಂದು ನ್ಯಾಯ… ಇತರರಿಗೊಂದು ನ್ಯಾಯಾನಾ..? ಈಗ ಕೋರ್ಟ್ ಕೊಟ್ಟಿರೋ ಮಹತ್ವದ ಆದೇಶ ಏನ್ ಗೊತ್ತಾ.?
ಬಿಜೆಪಿ ನಾಯಕರಿಗೆ ಹಿಂದೂಗಳು ಮತ್ತು ಹಿಂದೂತ್ವ ಕೇವಲ ವೋಟ್ಬ್ಯಾಂಕ್ಗಾಗಿ ಮಾತ್ರ ಬೇಕಾ.? ಎಲೆಕ್ಷನ್ ಮುಗಿದ್ಮೇಲೆ ಹಿಂದೂಗಳ ಕಷ್ಟಗಳಿಗೆ ಕೇಂದ್ರ ಬಿಜೆಪಿ ನಾಯಕರು ಕರಗಲ್ವಾ ಅನ್ನೋ ಅನುಮಾನ ವ್ಯಕ್ತವಾಗ್ತಾಯಿದೆ. ನಿಮಗೆ ಗೊತ್ತಿರ್ಲಿ, ಮಣಿಪುರದಲ್ಲಿ ಬಿಜೆಪಿ ಸರ್ಕಾರವೇ ಇದ್ರೂ ಅಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಮೇಲ್ವರ್ಗದ ಜನ ಹಲ್ಲೆ, ಲೈಂಗಿಕ ದೌರ್ಜನ್ಯ ಎಸಗಿದ್ರು. ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದ್ರು.
ಈ ವಿಷ್ಯ ದೇಶದಲ್ಲಿ ದೊಡ್ಡ ಸುದ್ದಿಯಾದ್ರೂ ಪ್ರಧಾನಿ ಮೋದಿ ಈ ಬಗ್ಗೆ ಅಲ್ಲಿನ ಸರ್ಕಾರಕ್ಕೆ ಅದ್ಯಾಕೆ ಬಿಸಿ ಮುಟ್ಟಿಸಲಿಲ್ಲ..? ಇದು ಬಿಜೆಪಿ ಸರ್ಕಾರದ ರಾಜ್ಯದಲ್ಲಿ ನಡೆದ ಘೋರಾತಿ ಘೋರ ಘಟನೆ ಅಲ್ವಾ.? ಕರ್ನಾಟಕದಲ್ಲಿ ನೇಹ ಕೊಲೆ ಪ್ರಕರಣದಲ್ಲಿ ಮುಸ್ಲಿಂ ಯುವಕ ಇದ್ದ ಅನ್ನೋ ಒಂದೇ ಕಾರಣಕ್ಕೆ ಬಿಜೆಪಿ ನಾಯಕರು ಸರಣಿ ಪ್ರತಿಭಟನೆಗಳನ್ನ ನಡೆಸಿದ್ರು. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ನಾ ಮುಂದು ತಾ ಮುಂದು ಅಂತ ಹೋಗಿ ಬಂದ್ರು. ಆದ್ರೆ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ 2000ಕ್ಕೂ ಹೆಚ್ಚು ಮಹಿಳೆಯರು ಸಂತ್ರಸ್ತರಾಗಿದ್ದಾರೆ ಎನ್ನಲಾಗುತ್ತಿದೆ.
ಹಾಗಾದ್ರೆ ಈಗ್ಯಾಕೆ ಬಿಜೆಪಿ ನಾಯಕರು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಂದಾಗುತ್ತಿಲ್ಲ.? ಈಗ್ಯಾಕೆ ಬೀದಿಗಿಳಿದು ಪ್ರತಿಭಟನೆಗಳನ್ನ ಮಾಡ್ತಾಯಿಲ್ಲ..? ಬೇಟಿ ಪಡಾವೋ., ಬೇಟಿ ಬಚಾವೋ ಅಂತೇಳೋ ಪ್ರಧಾನಿ ಮೋದಿ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಅನ್ನೋ ಆರೋಪ ವಿಚಾರ ಭಾರೀ ಸದ್ದು ಮಾಡಿದ್ರು ಆ ಬಗ್ಗೆ ಅದ್ಯಾಕೆ ಕ್ರಮ ಜರುಗಿಸಲಿಲ್ಲ.? ಈ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ಬಂಧನ ಯಾಕಾಗಿಲ್ಲ ಅನ್ನೋ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಪರಿಸ್ಥಿತಿ ಹೀಗಿರೋವಾಗ್ಲೇ, ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೆಹಲಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ನಿಮಗೆ ಗೊತ್ತಿರ್ಲಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 06 ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಬಿಜೆಪಿ ಮುಖಂಡ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮಾಜಿ ಮುಖ್ಯಸ್ಥರು ಆಗಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿ ನವದೆಹಲಿ ನ್ಯಾಯಾಲಯ ಶುಕ್ರವಾರ ಸಂಸದ ವಿರುದ್ಧ ಆರೋಪಗಳನ್ನು ರೂಪಿಸಲು ಆದೇಶ ಹೊರಡಿಸಿ ಆಘಾತ ನೀಡಿದೆ. ದೆಹಲಿಯ ACMM ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಪ್ರಿಯಾಂಕಾ ರಾಜ್‌ಪೂತ್ ಅವರು ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಆರೋಪಗಳಿಗೆ ಸಾಕಷ್ಟು ಸಾಕ್ಷಿಗಳಿವೆ. ಮಹಿಳೆಯ ನಮ್ರತೆ ಮತ್ತು ಲೈಂಗಿಕ ಕಿರುಕುಳದ ಐದು ಬಲಿಪಶುಗಳ ವಿರುದ್ಧದ ಅಪರಾಧಗಳಲ್ಲಿ ಆರೋಪ ಹೊರಿಸಲು ಸಾಕಷ್ಟು ವಸ್ತುಗಳಿವೆ ಎಂದು ತಿಳಿಸಿದರು. ಇದೇ ಮೇ 21ರಂದು ನ್ಯಾಯಾಲವು ಔಪಚಾರಿಕ ಆರೋಪಗಳನ್ನು ರೂಪಿಸಲಿದೆ. ಆರೋಪಿ ಭೂಷಣ್ ಮಾತ್ರವಲ್ಲದೇ WFO ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧವು ಇದೇ ರೀತಿಯ ಆರೋಪಗಳು ಕೇಳಿ ಬಂದಿವೆ.
ಅದೇನೇ ಇರ್ಲಿ, ಕರ್ನಾಟಕದಲ್ಲಿ ಲೈಂಗಿಕ ಕಿರುಕುಳ ಮತ್ತು ಕಿಡ್ನಾಪ್ ಪ್ರಕರಣ ಕೇಳಿಬಂದಿದ್ದೇ ತಡ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರನ್ನ ಸಿದ್ದು ಸರ್ಕಾರ ಅರೆಸ್ಟ್ ಮಾಡಿಸಿದೆ. ಆದ್ರೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದು ವರ್ಷಗಳೇ ಉರುಳಿದ್ರೂ ಅವರನ್ನ ಬಂಧಿಸೋವಂತಾ ಕೆಲಸಕ್ಕೆ ಕೇಂದ್ರ ಬಿಜೆಪಿ ಅದ್ಯಾಕೆ ಮುಂದಾಗ್ಲಿಲ್ಲ.?