ಶಿವಮೊಗ್ಗ : ಲೋಕಸಭೆ ಚುನಾವಣೆ ನಿರಂತರವಾಗಿ ದುಡಿದು ದಣಿದ ಬಿಜೆಪಿ ನಾಯಕರು ನಾಲ್ಕೈದು ದಿನಗಳ ಬಳಿಕ ಎಂದಿನ ಕಾರ್ಯಚಟುವಟಿಕೆಗಳಿಗೆ ಮರಳು ಸಿದ್ಧತೆ ನಡೆಸಿದ್ದಾರೆ.. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂದಿನಂತೆ ಕಾರ್ಯಚಟುವಟಿಕೆಯಿಂದ ಕೂಡಿದ್ದರೆ ಇನ್ನೂ ಕೆಲವರು ವಿಶ್ರಾಂತಿ ಮೊರೆ ಹೋಗಿದ್ದಾರೆ. ಫಲಿತಾಂಶಕ್ಕೆ ಇನ್ನೂ ಇಪ್ಪತ್ತೈದು ದಿನಗಳು ಬಾಕಿಯಿದ್ದರೂ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಢೀರ್ ಸಭೆ ಕರೆದಿದ್ದಾರೆ.? ಶನಿವಾರ ಮೀಟಿಂಗ್ ಕರೆದಿದ್ಯಾಕೆ? ಪರಿಷತ್ ಚುನಾವಣೆಗೂ ಮುಂದುವರಿಯುತ್ತಾ ಮೈತ್ರಿ..?
ಲೋಕಸಭೆ ಚುನಾವಣೆಯ ಮತದಾನ ಮುಗಿದು, ನಾಲ್ಕು ದಿನಗಳು ಕಳೆದಿವೆ.. ಬಹುತೇಕ ನಾಯಕರು ವಿಶ್ರಾಂತಿಯ ಮೊರೆ ಹೋಗಿದ್ದಾರೆ..ಚುನಾವಣೆಗಾಗಿ ನಿರಂತರ ಪ್ರವಾಸ, ಬೆಸಿಗೆಯ ರಣ ಬಿಸಿಲಿಗೆ ಬಳಲಿರುವ ಬಹುತೇಕರು ರೇಸಾರ್ಟ್, ಹೋಟೆಲ್ ಸೇರಿದ್ದಾರೆ..ಸತತ ಚುನಾವಣೆ ಪ್ರವಾಸದ ಬಳಿಕವೂ ವಿಶ್ರಾಂತಿ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶನಿವಾರ ಬಿಜೆಪಿ ಕಚೇರಿಯಲ್ಲಿ ನಾಯಕರ ಸಭೆ ಕರೆದಿದ್ದಾರೆ.
ಲೋಕಸಭೆ ಚುನಾವಣೆ ನಿರ್ವಹಣೆ ಕುರಿತು ಅವಲೋಕನ ಹಾಗೂ ವಿಧಾನ ಪರಿಷತ್ ಚುನಾವಣೆ ಸಿದ್ಧತೆ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಮತದಾನದ ಬಳಿಕ ಲಭ್ಯವಾದ ಕ್ಷೇತ್ರವಾರು ಮಾಹಿತಿ ಪ್ರಕಾರ, ಬಿಜೆಪಿ ಜೆಡಿಎಸ್ ಮೈತ್ರಿಕೂಟ 22ರಿಂದ 24 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ರಾಜ್ಯ ಬಿಜೆಪಿ ನಾಯಕರು ಹೊಂದಿದ್ದಾರೆ.
ಬಿಜೆಪಿ ಸ್ಪರ್ಧಿಸಿರುವ 25 ಕ್ಷೇತ್ರ ಹಾಗೂ ಜೆಡಿಎಸ್ಗೆ ಬಿಟ್ಟುಕೊಟ್ಟ ಮೂರು ಕ್ಷೇತ್ರಗಳ ಬಗ್ಗೆ ವಿಶ್ಲೇಷಣೆ , ವಸ್ತುಸ್ಥಿತಿ ವಿಚಾರ ವಿನಿಮಯವಾಗಲಿದೆ. ಕಾಂಗ್ರೆಸ್ ಗ್ಯಾರಂಟಿಗಳು ಪ್ರಭಾವ ಬೀರಿರುವ ಕುರಿತು ಸಭೆಯಲ್ಲಿ ಪರಾಮರ್ಶೆ ನಡೆಸಲಾಗುತ್ತದೆ ಎನ್ನಲಾಗಿದೆ.
ಆರು ಕ್ಷೇತ್ರಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆ ಸಿದ್ಧತೆ, ಕ್ಷೇತ್ರ ಕಾರ್ಯ, ರೂಪಿಸಬೇಕಾದ ಕಾರ್ಯತಂತ್ರದ ಕುರಿತು ಹಿರಿಯ ನಾಯಕರ ಸಮ್ಮುಖ ಸಮಾಲೋಚನೆ ನಡೆಯಲಿದೆ ಎನ್ನಲಾಗ್ತಿದೆ.
ಜೆಡಿಎಸ್ ಜೊತೆಗಿನ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ ಎನ್ನಲಾಗಿದೆ. ಬಿಜೆಪಿಗೆ ನಾಲ್ಕು, ಜೆಡಿಎಸ್ ಎರಡು ಹಂಚಿಕೆಯಾಗಿವೆ ಎನ್ನಲಾಗಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಬಲ ಪೈಪೋಟಿ ನಡೆದಿದೆ. ಹೀಗಾಗಿ, ಬಿಜೆಪಿ ಹೈಕಮಾಂಡ್ ನಾಯಕರೇ ಅಭ್ಯರ್ಥಿಗಳ ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.