ದಾವಣಗೆರೆ : ಎರಡನೇ ಹಂತದ ಮತದಾನಕ್ಕೆ ಇನ್ನು ಒಂದೇ ದಿನ ಬಾಕಿಯಿದೆ. ಇದರ ನಡುವೆ ಬಿಜೆಪಿ ಕಾಂಗ್ರೆಸ್ ಅಬ್ಬರದ ಮತಬೇಟೆ ಮುಂದುವರಿದಿದೆ. ಉತ್ತರ ಕರ್ನಾಟಕದಲ್ಲಿ ಅಧಿಕ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಕೇಸರಿ ಕಲಿಗಳು ದಾಪುಗಾಲು ಹಾಕಿದ್ದಾರೆ.. ಉತ್ಸಾಹದಲ್ಲಿರುವ ಮುನ್ನುಗ್ಗುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಒಡ್ಡಿದ ಸವಾಲು ಏನು? ರಾಜಾಹುಲಿ ಯಡಿಯೂರಪ್ಪ ರಾಹುಲ್ ಗಾಂಧಿ ವಿರುದ್ಧ ಗುಡುಗಿದ್ಯಾಕೆ? ಲೋಕಸಭೆ ಚುನಾವಣೆ ಬಳಿಕವೂ ಮುಂದುವರಿಯುತ್ತಾ ಬಿಜೆಪಿ ಜೆಡಿಎಸ್ ಮೈತ್ರಿ..? ಗಳಗಳ ಅತ್ತಿದ್ಯಾಕೆ ಎಚ್ಡಿ ರೇವಣ್ಣ

ಉತ್ತರ ಕರ್ನಾಟಕ.. ಬಿಜೆಪಿ ಭದ್ರಕೋಟೆ.. ಜೊತೆಗೆ ಲಿಂಗಾಯತ ಹಾರ್ಟ್ ಲ್ಯಾಂಡ್ ಕೂಡ ಹೌದು.. ಬಿಸಿಲು ರಣ ರಣ ಅನ್ನುತ್ತಿರುವ ಹೊತ್ತಿನಲ್ಲಿ ಬಿಜೆಪಿ ಕಾಂಗ್ರೆಸ್ ಅಧಿಕ ಸ್ಥಾನ ಗೆಲ್ಲುವುದಕ್ಕೆ ಪೈಪೋಟಿಗೆ ಬಿದ್ದಿವೆ.. ಜೊತೆಗೆ ಉಭಯ ಪಕ್ಷಗಳ ನಾಯಕರು ಮಾತಿನ ವಾಗ್ಬಾಣ ಹರಿಬಿಟ್ಟಿದ್ದಾರೆ..

ವಯಸ್ಸು 82 ಆಗಿದ್ದರೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಿಂಚಿನ ಪ್ರಚಾರ ಕೈಗೊಂಡು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ಗೆಲ್ಲುವುದಕ್ಕೆ ವೇದಿಕೆ ಸಿದ್ದಗೊಳಿಸಿದ್ದಾರೆ.. ಜೊತೆಗೆ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಗುಡುಗಿರುವ ರಾಜಾಹುಲಿ, ಈ ಚುನಾವಣೆಯಲ್ಲಿ ಯಾವ ಗ್ಯಾರಂಟಿ ವರ್ಕೌಔಟ್ ಆಗಲ್ಲ. ಬದಲಿಗೆ ಮೋದಿ ಗ್ಯಾರಂಟಿ ದೇಶಕ್ಕೆ ಗ್ಯಾರಂಟಿ ಅಂತ ಹೇಳಿದ್ದಾರೆ..

ಮತ್ತೊಂದು ಕಡೆ ದಲಿತರ ಅನುದಾನವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಲಿಗೆ ಅಂಜಿರುವ ರಾಹುಲ್ ಗಾಂಧಿ, ರಾಯ್ಬರೇಲಿಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.. ಅವರು ಎಲ್ಲೇ ಸ್ಪರ್ಧಿಸಿದರೂ ಸೋಲಿನಿಂದ ತಪ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಅಂತ ಗುಡುಗಿದ್ದಾರೆ.

ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಗರಣ ಭಾರೀ ಸದ್ದು ಮಾಡ್ತಿದೆ.. ಈ ಹಗರಣ ಬಿಜೆಪಿ ಜೆಡಿಎಸ್ ಮೈತ್ರಿಗೂ ಧಕ್ಕೆ ಉಂಟು ಮಾಡಲಿದೆ ಎನ್ನಲಾಗ್ತಿದೆ.. ಆದ್ರೆ, ಇದಕ್ಕೆಲ್ಲಾ ಉತ್ತರಿಸಿರುವ ರಾಜಾಹುಲಿ ಮೈತ್ರಿಗೆ ಯಾವುದೇ ಧಕ್ಕೆ ಆಗುವುದಿಲ್ಲ ಸ್ಪಷ್ಟಪಡಿಸಿದಿದ್ದಾರೆ..

ಇತ್ತ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಆಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ ಐಟಿ ವಶಕ್ಕೆ ಪಡೆದಿದೆ. ಶನಿವಾರ ಎಸ್‌ ಐ ಟಿ ಅಧಿಕಾರಿಗಳು ಬಂಧಿಸಿದ್ದು, ರೇವಣ್ಣ ಅವರನ್ನ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಎಚ್‌.ಡಿ.ರೇವಣ್ಣ ಅವರನ್ನು ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದು, ಇಡೀ ರಾತ್ರಿ ಎಸ್‌ಐಟಿ ಸೆಲ್‌ನಲ್ಲಿಯೇ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಕಳೆದ್ದು, ಮಗ ವಿದೇಶಕ್ಕೆ ಪರಾರಿಯಾಗಿದ್ದು, ಎಂಥ ಸ್ಥಿತಿ ಬಂತಪ್ಪ ಎಂದು ಎಸ್‌ಐಟಿ ಸೆಲ್‌ನಲ್ಲಿ ಎಚ್‌.ಡಿ.ರೇವಣ್ಣ ಅವರು ಗಳಗಳನೆ ಅತ್ತಿದ್ದಾರೆ ಎಂದು ತಿಳಿದುಬಂದಿದೆ.ಒಟ್ಟಾರೆ.. ಎರಡನೇ ಹಂತದ ಮತದಾನ ಭಾರೀ ಕುತೂಹಲ ಮೂಡಿಸಿದೆ.

Share.
Leave A Reply

Exit mobile version