ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಅಧಿಕಾರಿಗಳು ಕೆಲಸ ಮಾಡೋದಿಲ್ಲ ಎಂಬ ಅಪವಾದ ಮಾಡೋರಿಗೆ ಇಲ್ಲೊಂದು ಪ್ರಕರಣ ನೆನಪಿಸಲೇಬೇಕಾಗಿದೆ.
ಹೌದು..ದಾವಣಗೆರೆ ತಾಲೂಕಿನ ಲೋಕಿಕೆರೆ ಚೆಕ್ ಪೋಸ್ಟ್ ನಲ್ಲಿ ರಾತ್ರಿ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರೂ. 12 ಕೋಟಿ ಮೌಲ್ಯದ ಬಂಗಾರ ಹಾಗೂ ಡೈಮಂಡ್ ನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬಂಗಾರವು ಬೆಂಗಳೂರಿನಿಂದ ದಾವಣಗೆರೆ ಮತ್ತು ಶಿವಮೊಗ್ಗದಲ್ಲಿನ ಕಲ್ಯಾಣ್ ಜ್ಯೂಯಲರ್, ಮಲಬಾರ್, ಟೈಟಾನ್, ಬೀಮಾಗೋಲ್ಡ್ ಹಾಗೂ ಇತರೆ ವರ್ತಕರಿಗೆ ಸರಬರಾಜಾಗುತ್ತಿತ್ತು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆಗ ಬಂಗಾರ, ಡೈಮೆಂಡ್ ಇರುವುದು ದಾಖಲಾಗಿದೆ. ಆದರೆ ಚಾಲಕ ಸರಿಯಾದ ದಾಖಲೆಗಳನ್ನು ಕೊಟ್ಟಿರಲಿಲ್ಲ ಈ ಕಾರಣದಿಂದ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಪೌರಯುಕ್ತೆ ರೇಣುಕಾಗೆ ಪೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ರೇಣುಕಾ ಡಿಸಿಗೆ ಮಾಹಿತಿ ನೀಡಿದ್ದಾರೆ. ನಂತರ ಈ ವಾಹನವನ್ನು ಕೆಟಿಜೆನಗರ ಪೋಲೀಸ್ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ವಾಹನ ಮೂರು ಜಿಲ್ಲೆಯ ನಾನಾ ಆಭರಣ ಅಂಗಡಿಗೆ ಹೋಗುತ್ತಿತ್ತು.
ಈ ವಾಹನ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದ
ವಿವಿಧ ಆಭರಣ ಅಂಗಡಿಗಳಿಗೆ ಹೋಗಲು ತಯಾರಿ ನಡೆಸಿತ್ತು. ದಾವಣಗೆರೆಯಿಂದ ಶಿವಮೊಗ್ಗಕ್ಕೆ ಹೊರಡುತ್ತಿದ್ದಾಗ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದೆ.ಅಲ್ಲದೇ ಕಳೆದ ಏಪ್ರಿಲ್ ತಿಂಗಳ 6 ,9 ದಿನಾಂಕದ ಹಳೆಯ ಬಿಲ್ ಗಳು ಲಭ್ಯವಾಗಿದೆ. ಆದರೆ ಆಭರಣ ಸಾಗಾಟಕ್ಕೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ.
ಬಂಗಾರ ವಶ, ಜಿಎಸ್ ಟಿ ಬಿಲ್ ಸಾಮ್ಯತೆ.
ಲೋಕಿಕೆರೆ ಚೆಕ್ ಪೋಸ್ಟ್ ನಲ್ಲಿ ರೂ.12 ಕೋಟಿ ಮೌಲ್ಯದ ಬಂಗಾರ ಸಾಗಣೆ ಮಾಡಿದ ವಾಹನ ವಶಕ್ಕೆ ಪಡೆದಿದ್ದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ವಶಪಡಿಸಿಕೊಂಡಿರುವ ಬಂಗಾರಕ್ಕೆ ಜಿಎಸ್ ಟಿ ಬಿಲ್ ತಾಳೆಯಾಗುತ್ತಿದೆ. ಆದರೆ ಚೆಕ್ ಪೋಸ್ಟ್ ನಲ್ಲಿ ಸಾಗಾಣಿಕೆ ಬಗ್ಗೆ ಚುನಾವಣಾ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಲಿಖಿತ ಮಾಹಿತಿ ನೀಡಲು ವಿಫಲರಾಗಿದ್ದರಿಂದ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿ ಕಚೇರಿ ತಿಳಿಸಿದೆ. ಈ ವೇಳೆ ಚುನಾವಣಾ ಅಧಿಕಾರಿ ರೇಣುಕಾ, ಕಮರ್ಷಿಯಲ್ ಟ್ಯಾಕ್ಸ್ ನ ಇಲಾಖೆ ಉಪ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.